ಕುಂದಾಪುರ ಎಸಿ, ಡಿವೈಎಸ್ಪಿ ಸಹಿತ ಫ್ರಂಟ್ ಲೈನ್ ವರ್ಕರ್ಸ್ ಗಳಿಗೆ ಕೋವಿಡ್ ಲಸಿಕೆ

Spread the love

ಕುಂದಾಪುರ ಎಸಿ, ಡಿವೈಎಸ್ಪಿ ಸಹಿತ ಫ್ರಂಟ್ ಲೈನ್ ವರ್ಕರ್ಸ್ ಗಳಿಗೆ ಕೋವಿಡ್ ಲಸಿಕೆ

ಕುಂದಾಪುರ : ಇಲ್ಲಿನ ಸರ್ಕಾರಿ ಸಾರ್ವಜನಿಕ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಸೋಮವಾರ ಕೋವಿಡ್ ಫ್ರಂಟ್ ಲೈನ್ ವಾರಿಯರ್ಸ್ ನವರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕುಂದಾಪುರ ಉಪ ವಿಭಾಗಾಧಿಕಾರಿ ಕೆ. ರಾಜು ಮೊದಲ ಲಸಿಕೆ ಪಡೆದುಕೊಂಡರು. ಕುಂದಾಪುರ ಉಪವಿಭಾಗದ ಡಿವೈಎಸ್ ಪಿ ಶ್ರೀಕಾಂತ.ಕೆ , ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ , ಕುಂದಾಪುರ ಪೊಲೀಸ್ ಠಾಣೆಯ ಎಸ್. ಐ ಸದಾಶಿವ ಆರ್ ಗವರೋಜಿ ಲಸಿಕೆ ಪಡೆದುಕೊಂಡರು.

ಜಿಲ್ಲಾ ಕೋವಿಡ್ ವಿಶೇಷ ವೈದ್ಯಾಧಿಕಾರಿ ಡಾ. ಪ್ರೇಮಾನಂದ, ತಾಲ್ಲೂಕು ಕೋವಿಡ್ ನೋಡಲ್ ವೈದ್ಯಾಧಿಕಾರಿ ಡಾ. ನಾಗೇಶ್ , ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಬರ್ಟ್ ಡಿಮೆಲ್ಲೊ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ, ಶುಶ್ರೂಷಕ ಅಧೀಕ್ಷಕಿ ಅನ್ನಪೂರ್ಣ ಇದ್ದರು.


Spread the love