
Spread the love
ಕುಂದಾಪುರ: ಕಸದಲ್ಲಿ ಸಿಕ್ಕಿದ ಉಂಗುರ ಮರಳಿಸಿ ಪ್ರಾಮಾಣಿಕತೆ ಮೆರೆದ ಸ್ವಚ್ಛತಾ ಸಿಬ್ಬಂದಿ
ಕುಂದಾಪುರ: ಘನ ತ್ಯಾಜ್ಯ ದಲ್ಲಿ ಸಿಕ್ಕಿದ ಚಿನ್ನದ ಉಂಗುರವನ್ನು ವಾರೀಸುದಾರರಿಗೆ ಸ್ತಾಂತರಿಸುವ ಮೂಲಕ ಎಸ್ಎಲ್ಆರ್ಎಂ ಘಟಕದ ಸ್ವಚ್ಚತಾ ಗಾರದ ಸಿಬಂದಿಯೋರ್ವರು ಪ್ರಾಮಾಣಿಕತೆ ಮೆರೆದಿದ್ದಾರೆ.
ಶಂಕರನಾರಾಯಣ ಗ್ರಾಮ ಪಂಚಾಯತ್ನ ಎಸ್ಎಲ್ಆರ್ಎಂ ಘಟಕದ ಸ್ವಚ್ಚತಾಗಾರ ಸಿಬಂದಿ ದೇವಕಿ ಪ್ರಾಮಾಣಿಕತೆ ಮೆರೆದವರಾಗಿದ್ದಾರೆ.
ಪ್ರತಿದಿನ ಕಸ ನೀಡುವ ಮನೆಯವರ 2 ಗ್ರಾಂ ತೂಕದ ಚಿನ್ನ ಉಂಗುರ ಕಳೆದು ಹೋಗಿತ್ತು. ಈ ಬಗ್ಗೆ ಕಸ ವಿಲೇವಾರಿ ಘಟಕದವರಿಗೆ ಮಾಹಿತಿ ನೀಡಿ, ಕಸದ ಜೊತೆ ಬಂದಿದ್ದರೆ ನೀಡುವಂತೆ ಕೇಳಿಕೊಂಡಿದ್ದರು. ಅದರಂತೆ ಬೈಲೂರು ಮೂಡುಬೈಲೂರಿನಲ್ಲಿ ಕಸ ವಿಲೇವಾರಿ ಮಾಡುವಾಗ ಕಸದಲ್ಲಿ ಚಿನ್ನದ ಉಂಗುರ ದೇವಕಿ ಅವರಿಗೆ ಸಿಕ್ಕಿತ್ತು. ಕೂಡಲೇ ಅವರು ಸಂಬಂಧಪಟ್ಟ ಮನೆಯವರಿಗೆ ಮಾಹಿತಿ ನೀಡಿ ವಾರೀಸುದಾರ ಕುಶಾಲ್ ಕೊಠಾರಿ ಅವರಿಗೆ ಹಸ್ತಾಂತರಿಸಿದ್ದಾರೆ.
Spread the love