ಕುಂದಾಪುರ: ಕುಸಿದು ಬಿದ್ದು 13 ವರ್ಷದ ವಿದ್ಯಾರ್ಥಿನಿ ಸಾವು

Spread the love

ಕುಂದಾಪುರ: ಕುಸಿದು ಬಿದ್ದು 13 ವರ್ಷದ ವಿದ್ಯಾರ್ಥಿನಿ ಸಾವು

ಕುಂದಾಪುರ: ಅಕ್ಷರ ದಾಸೋಹ ಯೋಜನೆ ಕುಂದಾಪುರದ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ ಹಾಗೂ ಹಕ್ಲಾಡಿ ಪ್ರೌಢಶಾಲಾ ಶಿಕ್ಷಕಿ ಭಾರತಿ ದಂಪತಿಯ ಪುತ್ರಿ ಅನುಶ್ರೀ (13) ಕುಸಿದು ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ಗುರುವಾರ ಇಲ್ಲಿನ ತಲ್ಲೂರಿನಲ್ಲಿ ಸಂಭವಿಸಿದೆ.

ವಿದ್ಯಾರ್ಥಿನಿ ಅನುಶ್ರೀ ಮನೆಯಲ್ಲಿದ್ದ ವೇಳೆ ಆಕಸ್ಮಿವಾಗಿ ಕುಸಿದು ಪ್ರಜ್ಞೆ ತಪ್ಪಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲೇ ಕೊನೆಯುಸಿರೆಳೆದಿದ್ದಾಳೆ.

ಅನುಶ್ರೀ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿದುಬರಬೇಕಿದೆ.

ಪ್ರತಿಭಾನ್ವಿತ ವಿದ್ಯಾರ್ಥಿನಿ:
ಹಟ್ಟಿಯಂಗಡಿ ಸಿದ್ದಿವಿನಾಯಕ ವಸತಿ ಶಾಲೆಯ 8 ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಅನುಶ್ರೀ ಕಲಿಕೆಯಲ್ಲಿ, ಪಠ್ಯೇತರ ಚಟುವಟಿಕೆಗಳಲ್ಲಿಯೂ ಮುಂಚೂಣಿಯಲ್ಲಿದ್ದು, ಕ್ರಿಯಾಶೀಲ ವಿದ್ಯಾರ್ಥಿನಿಯಾಗಿದ್ದಳು. ಗುರುವಾರ ಸಂಜೆ ಅನುಶ್ರೀ ಮೃತದೇಹ ತಾಯಿಯ ಮನೆ ಹೆಮ್ಮಾಡಿ ಸಮೀಪದ ಕಟ್‍ಬೇಲ್ತೂರಿಗೆ ತಂದು ಅಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಈ ವೇಳೆ ಪುಟ್ಟ ಮಗಳನ್ನು ಕಳೆದುಕೊಂಡ ಹೆತ್ತವರ ರೋದನ ಮುಗಿಲು ಮುಟ್ಟಿದ್ದು, ನೆರೆದವರ ಕಣ್ಣಾಲಿಗಳು ಒದ್ದೆಯಾಗಿದ್ದವು. ಈ ವೇಳೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ, ಮಾಜಿ ಶಾಸಕ ಗೋಪಾಲ ಪೂಜಾರಿ, ಶಿಕ್ಷಣ ಇಲಾಖೆಯ ವಿವಿಧ ಅಧಿಕಾರಿ ವರ್ಗದವರು, ಸಹಸ್ರಾರು ಮಂದಿ ಶಿಕ್ಷಕರು, ಊರವರು ಕಂಬನಿಗೈದರು.


Spread the love