ಕುಂದಾಪುರ: ಕೊರ್ಗಿಯಲ್ಲಿ ಜಾನುವಾರು ಕಳ್ಳತನ ಮಾಡಿದ ನಾಲ್ವರು ಆರೋಪಿಗಳ ಬಂಧನ

Spread the love

ಕುಂದಾಪುರ: ಕೊರ್ಗಿಯಲ್ಲಿ ಜಾನುವಾರು ಕಳ್ಳತನ ಮಾಡಿದ ನಾಲ್ವರು ಆರೋಪಿಗಳ ಬಂಧನ

ಕುಂದಾಪುರ : ಹಾಡಿಯಲ್ಲಿ ಮೇಯಲು ಕಟ್ಟಿ ಹಾಕಿದ್ದ ದನಗಳನ್ನು ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಶಂಕರ್ ಕುಲಾಲ್, ಆಶ್ಫಾಕ್ ಕೋಡಿ, ಸೈನಿ ಮತ್ತು ಸಿರಾಜ್ ಎಂದು ಗುರುತಿಸಲಾಗಿದೆ,

ಕೊರ್ಗಿಯ ಶರತ್ ಶೆಟ್ಟಿ ಎಂಬವರ ಮನೆಯ ಮೂರು ದನಗಳನ್ನು ಮೇಯಲು ಬಿಟ್ಟ ಸಂದರ್ಭ ಕದ್ದಿದ್ದರ ಬಗ್ಗೆ ಜ.22 ರಂದು ಕುಂದಾಪುರದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ತನಿಖೆ ಆರಂಭಿಸಿದ ಆರೋಪಿಗಳನ್ನು ಬಂಧಿಸುವಲ್ಲಿ ಕುಂದಾಪುರ ಗ್ರಾಮಾಂತರ ಠಾಣೆ ಪಿಎಸ್ಐ ರಾಜಕುಮಾರ್, ಕ್ರೈಮ್ ವಿಭಾಗದ ಪಿಎಸ್ಐ ಸುಧಾ ಪ್ರಭು ನೇತೃತ್ವದ ತಂಡ ಯಶಸ್ವಿಯಾಗಿದೆ.

ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಮಾರ್ಗದರ್ಶನದಲ್ಲಿ ಪಿಎಸ್ಐ ರಾಜಕುಮಾರ್, ಸುಧಾಪ್ರಭು, ಸಿಬ್ಬಂದಿಗಳಾದ ಸತೀಶ್, ಮಧು, ನಾಗೇಶ್, ರಮೇಶ್, ಅನಿಲ್, ಚಿದಾನಂದ, ಶ್ರೀಕಾಂತ್, ಆನಂದ್ ಮೊದಲಾದವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love