ಕುಂದಾಪುರ: ತಾಯಿ ಮಗು ನಾಪತ್ತೆ

Spread the love

ಕುಂದಾಪುರ: ತಾಯಿ ಮಗು ನಾಪತ್ತೆ

ಕುಂದಾಪುರ: ಊರಿಗೆ ಹೋಗುವುದಾಗಿ ಹೇಳಿ ಮಗಳೊಂದಿಗೆ ತೆರಳಿದ ತಾಯಿ ನಾಪತ್ತೆಯಾದ ಘಟನೆ ಕುಂದಾಪುರದಲ್ಲಿ ನಡೆದಿದೆ.

ನಾಪತ್ತೆಯಾದವರನ್ನು ಬಾದಾಮಿ ತಾಲೂಕಿನ ಪೂರ್ಣನಂದ ಎಂಬವರ ಪತ್ನಿ ಪಾರ್ವತಿ (25) ಮತ್ತು ಅವರ ಮಗಳು ವಿದ್ಯಾ (5) ಎಂದು ಗುರುತಿಸಲಾಗಿದೆ.

ಬಾದಾಮಿ ತಾಲೂಕಿನ  ರವಿಗುರುಪುತ್ರಪ್ಪ ಮತ್ತು ಆತನ ತಮ್ಮ ಪೂರ್ಣನಂದ ಅವರ ಹೆಂಡತಿ ಮತ್ತು ಮಗಳ ಜೊತೆ ಒಂದು ವರ್ಷದಿಂದ ಕುಂದಾಪುರದಲ್ಲಿ ಕೆಲಸ ಮಾಡಿಕೊಂಡಿದ್ದು ಅಕ್ಟೋಬರ್ 19ರಂದು 4 ಗಂಟೆಗೆ ಪಾರ್ವತಿ ನತ್ನ ಮಗು ವಿದ್ಯಾಳೊಂದಿಗೆ ಕುಂದಾಪುರದ ಆಶೀರ್ವಾದ ಹೋಟೆಲಿನಲ್ಲಿ ಕೆಲಸಕ್ಕೆಂದು ಹೋದವಳು ಸಂಜೆ 04:00 ಗಂಟಗೆ ಟಿಟಿ ರೋಡ್‌ನಲ್ಲಿರುವ ತನ್ನ ಬಾಡಿಗೆ ಮನೆಗೆ ಬಂದು ಊರಿಗೆ ಹೋಗುತ್ತೇನೆ ಎಂದು ಹೇಳಿ ತನ್ನ ಮಗಳೊಂದಿಗೆ ಹೋದವಳು ಈವರೆಗೂ ವಾಪಾಸ್ಸು ಮನೆಗೂ ಬಾರದೇ ಊರಿಗೂ ಹೋಗದೇ ಕಾಣೆಯಾಗಿದ್ದು ಈ ಬಗ್ಗೆ ಊರಿನಲ್ಲಿ ಹಾಗೂ ಕುಂದಾಪುರದ ಪರಿಸರದಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲವಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.


Spread the love