ಕುಂದಾಪುರ ತಾಲೂಕಿನಲ್ಲಿ ಮತ ಎಣಿಕೆ ಕಾರ್ಯ ಆರಂಭ: ಕೆಲವೇ ಕ್ಷಣಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

Spread the love

ಕುಂದಾಪುರ ತಾಲೂಕಿನಲ್ಲಿ ಮತ ಎಣಿಕೆ ಕಾರ್ಯ ಆರಂಭ: ಕೆಲವೇ ಕ್ಷಣಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಕುಂದಾಪುರ: ತಾಲ್ಲೂಕಿನ 43 ಗ್ರಾಮ ಪಂಚಾಯಿತಿಗಳ ಒಟ್ಟು 554 ಸ್ಥಾನಗಳ ಪೈಕಿ 24 ಸ್ಥಾನಗಳಲ್ಲಿ ಅವಿರೋಧ ಆಯ್ಕೆ ನಡೆದಿರುವುದರಿಂದ ಉಳಿದ 530 ಸ್ಥಾನಗಳಿಗಾಗಿ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಇದೀಗ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಆರಂಭಗೊಂಡಿದೆ.

ಬೈಂದೂರು ತಾಲೂಕಿನ 259 ಸ್ಥಾನಗಳ ಪೈಕಿ 7 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಉಳಿದ 252 ಸ್ಥಾನಗಳಿಗೆ ಮತ ಎಣಿಕೆ ಕಾರ್ಯ ಬೈಂದೂರು ಜ್ಯೂನಿಯರ್ ಕಾಲೇಜಿನಲ್ಲಿ ಆರಂಭಗೊಂಡಿದೆ.

ಇಂದು ಬೆಳಿಗ್ಗೆ 7 ಗಂಟೆಗೆ ಕುಂದಾಪುರ ಸಹಾಯಕ ಆಯುಕ್ತ ರಾಜು ಕೆ ಉಪಸ್ಥಿತಿಯಲ್ಲಿ ಪೊಲೀಸ್ ಬಿಗು ಬಂದೋಬಸ್ತ್ ಮೂಲಕ ಭದ್ರತಾ ಕೊಠಡಿಯ ಬಾಗಿಲು ತೆರೆದು ಮತ ಎಣಿಕೆ ಕಾರ್ಯ ನಡೆಯುವ ವಿವಿಧ ಕೊಠಡಿಗಳಿಗೆ ಮತ ಪೆಟ್ಟಿಗೆಯನ್ನು ಸಾಗಿಸಲಾಗಿದೆ. ಇದೀಗ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು, ಕುಂದಾಪುರ ತಾಲೂಕಿನ 530 ಅಭ್ಯರ್ಥಿಗಳು ಹಾಗೂ ಬೈಂದೂರು ತಾಲೂಕಿನ 252 ಅಭ್ಯರ್ಥಿಗಳ ಭವಿಷ್ಯ ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ.


Spread the love