ಕುಂದಾಪುರ ತಾಲೂಕಿನ ಗ್ರಾಪಂ ಮತ ಎಣಿಕೆ – ವಿಜೇತರ ವಿವರ

Spread the love

ಕುಂದಾಪುರ ತಾಲೂಕಿನ ಗ್ರಾಪಂ ಮತ ಎಣಿಕೆ – ವಿಜೇತರ ವಿವರ

ಸಂಜೆ 7:30ರವರೆಗಿನ ಅಪ್ಡೇಟ್ಸ್
ಕುಂದಾಪುರ : ಇಲ್ಲಿನ ಭಂಡಾರ್ಕಾರ್ಸ್ ಕಾಲೇಜು ಮತಎಣಿಕೆ ಕೇಂದ್ರದಲ್ಲಿ ಮತ ಎಣಿಕೆ ಕಾರ್ಯ ಮಂದಗತಿಯಲ್ಲಿ ಸಾಗಿದ್ದರಿಂದಾಗಿ ರಾತ್ರಿಯವರೆಗೆ ತಾಲೂಕಿನ ಬೆರಳೆಣಿಕೆಯ ಗ್ರಾಮ ಪಂಚಾಯಿತಿಗಳನ್ನು ಹೊರತುಪಡಿಸಿ ಅಪೂರ್ಣ ಫಲಿತಾಂಶ ಪ್ರಕಟವಾಗಿದೆ.

ತಾಲ್ಲೂಕಿನ 43 ಗ್ರಾಮ ಪಂಚಾಯಿತಿಗಳ ಒಟ್ಟು 554 ಸ್ಥಾನಗಳ ಪೈಕಿ 24 ಸ್ಥಾನಗಳಲ್ಲಿ ಅವಿರೋಧ ಆಯ್ಕೆ ನಡೆದಿರುವುದರಿಂದ ಉಳಿದ 530 ಸ್ಥಾನಗಳಿಗಾಗಿ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಇಲ್ಲಿನ ಭಂಡಾರಕಾರ್ಸ್ ಕಾಲೇಜನಲ್ಲಿ ಬುಧವಾರ ನಡೆದಿದೆ

ಫಲಿತಾಂಶದ ವಿವರ :
ಆಲೂರು ಗ್ರಾಮ ಪಂಚಾಯಿತಿಯಲ್ಲಿ ಸಿಂಗಾರಿ, ರಾಘವೇಂದ್ರ, ಶ್ರೀಮತಿ, ಸುಬ್ಬಣ್ಣ ಶೆಟ್ಟಿ, ಗಂಗೆ, ಮಂಜುಳಾ, ರಾಜೇಶ್ ಎನ್ ದೇವಾಡಿಗ, ಜಲಜ ಶೆಟ್ಟಿ, ರವಿ ಶೆಟ್ಟಿ, ಜಯಲಕ್ಷ್ಮೀ, ಸುಧಾಕರ ಶೆಟ್ಟಿ, ರಾಜೇಂದ್ರ, ಪ್ರಮೋದ್ ಕೆ. ಶೆಟ್ಟಿ ವಿಜೇತರಾಗಿದ್ದಾರೆ. ಕೆರಾಡಿಯ ಗ್ರಾಮ ಪಂಚಾಯಿತಿಯಲ್ಲಿ ಸುಜಾತ ನಾಯಕ್, ರಾಘವೇಂದ್ರ, ದಿನೇಶ್ ನಾಯಕ್, ಮಂಜು ಕೊಠಾರಿ, ಗಿರಿಜಾ ಶೆಡ್ತಿ, ಕುಸುಮಾ, ಲಕ್ಷ್ಮೀ, ಶಶಿಕಲಾ ಮೊಗವೀರ, ಸುದರ್ಶನ್ ಶೆಟ್ಟಿ ವಿಜೇತರಾಗಿದ್ದಾರೆ. ವಂಡ್ಸೆ ಗ್ರಾಮ ಪಂಚಾಯಿತಿಯಲ್ಲಿ ಸುಶೀಲ, ಶಶಿಕಲಾ ಎಸ್, ಪ್ರಶಾಂತ ಪೂಜಾರಿ ವಿಜೇತರಾಗಿದ್ದಾರೆ ಹಕ್ಲಾಡಿಯ ಗ್ರಾಮ ಪಂಚಾಯಿತಿಯಲ್ಲಿ ಬಸವ ಪಿ ಮೊಗವೀರ, ಜ್ಯೋತಿ, ಚೇತನ್ ಹೆಗ್ಡೆ, ಪ್ರೇಮಾ ದೇವಾಡಿಗ, ಮಂಜುನಾಥ, ರಾಧ, ಭಾಸ್ಕರ ಪೂಜಾರಿ, ರತ್ನ, ಅಶೋಕ ಪೂಜಾರಿ, ಶಾರದಾ ಮೊಗವೀರ, ಪ್ರವೀಣಕುಮಾರ ಶೆಟ್ಟಿ, ವೀಣಾ ರಾಣಿ ವಿಜೇತರಾಗಿದ್ದಾರೆ.

ತ್ರಾಸಿಯ ಗ್ರಾಮ ಪಂಚಾಯಿತಿಯಲ್ಲಿ ಯಶೋಧ, ವಿಜಯ ಪೂಜಾರಿ, ಹೇಮಾ, ರೆನ್ಸೆಮ್ ಪಿರೇರಾ, ರಾಜೀವ ಮೊಗವೀರ, ಗೀತಾ ದೇವಾಡಿಗ, ನಾಗರತ್ನ ಶೆಟ್ಟಿಗಾರ್, ಮಿಥುನ್ ಎಂ ಡಿ ಬಿಜೂರ್ ವಿಜೇತರಾಗಿದ್ದಾರೆ. ಗುಜ್ಜಾಡಿಯ ಗ್ರಾಮ ಪಂಚಾಯಿತಿಯಲ್ಲಿ ಜಯಂತಿ, ತಮ್ಮಯ್ಯ ದೇವಾಡಿಗ, ಜಲಜ, ಜಿಸ್ಸಿಂತಾ ಡಿಸೋಜಾ, ಲೋಲಾಕ್ಷೀ ಪಂಡಿತ್, ರಾಜು ಎನ್ ಪೂಜಾರಿ, ಶ್ರೀಧರ, ತುಂಗ ಪೂಜಾರಿ, ಹರೀಶ್ ಮೇಸ್ತಾ ವಿಜೇತರಾಗಿದ್ದಾರೆ. ಹೆಮ್ಮಾಡಿಯ ಗ್ರಾಮ ಪಂಚಾಯಿತಿಯಲ್ಲಿ ನೇತ್ರಾವತಿ, ಸತ್ಯನಾರಾಯಣ ಯಾನೆ ನಾಣಿ, ಆನಂದ ಪೂಜಾರಿ, ಕುಸುಮಾ ಸಿ ಮೆಂಡನ್, ರತ್ನಾ ದೇವಾಡಿಗ, ರಾಘವೇಂದ್ರ ಪೂಜಾರಿ, ಶೈನಿ ಜೇಮನ್ ಕ್ರಾಸ್ತಾ ವಿಜೇತರಾಗಿದ್ದಾರೆ.

ಹಟ್ಟಿಯಂಗಡಿ ಗ್ರಾಮ ಪಂಚಾಯಿತಿಯಲ್ಲಿ ಅಮೃತ ಭಂಡಾರಿ, ಚಂದ್ರ ಮೊಗವೀರ, ನಾಗರತ್ನ, ಮಂಜುನಾಥ ಜಿ, ಸಂಧ್ಯಾ ಎಸ್ ಶೆಟ್ಟಿ, , ಲೀಲಾವತಿ, ವಿಠಲ್ ಎಸ್ ಶೆಟ್ಟಿ, ದೀಪಾ, ಪ್ರತಾಪಕುಮಾರ ಶೆಟ್ಟಿ, ಶಶಿಕುಮಾರ, ರವೀಂದ್ರ ಗಾಣಿಗ ಮಲ್ಲಾರಿ, ಕೆ.ರಾಜೀವ್ ಶೆಟ್ಟಿ, ವಿದ್ಯಾಶ್ರೀ ಮೊಗವೀರ, ಸಾಧು ವಿಜೇತರಾಗಿದ್ದಾರೆ. ಹೊಸಂಗಡಿ ಗ್ರಾಮ ಪಂಚಾಯಿತಿಯಲ್ಲಿ ಶೋಭಾ, ಶಂಕರ ಶೆಟ್ಟಿ ನಳಾಲು, ಶಾಂತಿ ವಿಜೇತರಾಗಿದ್ದಾರೆ. ಶಂಕರನಾರಾಯಣ ಗ್ರಾಮ ಪಂಚಾಯಿತಿಯಲ್ಲಿ ಕೃಷ್ಣಮೂರ್ತಿ, ಸುದೀಪ್, ಜಯಶೀಲ ನಾಯ್ಕ್, ಲತಾ, ಎಸ್.ರವಿ.ಕುಲಾಲ್, ಪಾಂಡುರಂಗ ನಾಯ್ಕ್, ಗೌರಿ, ಗಿರಿಜಾ, ಲಕ್ಷ್ಮೀ, ಶಂಕರನಾರಾಯಣ ಭಟ್ ವಿಜೇತರಾಗಿದ್ದಾರೆ.

ಬಸ್ರೂರು ಗ್ರಾಮ ಪಂಚಾಯಿತಿಯಲ್ಲಿ ಸಂತೋಷ್ ಕುಮಾರ ಹೆಚ್, ನರಸಿಂಹ ಪೂಜಾರಿ, ಶಾಲಿನಿ ಮೊಗವೀರ, ಸುಮತಿ ಶಂಕರ ಮೆಂಡನ್, ಶ್ರೀಕಾಂತ್, ಕಮಲ ಗೋಪಾಲ ಶೆಟ್ಟಿಗಾರ ವಿಜೇತರಾಗಿದ್ದಾರೆ. ಕೋಟೇಶ್ವರ ಗ್ರಾಮ ಪಂಚಾಯಿತಿಯಲ್ಲಿ ಜಯಲಕ್ಷ್ಮೀ, ಚಂದ್ರಮೋಹನ್, ಲೋಲಾಕ್ಷೀ ಎನ್ ಕೋತ್ವಾಲ್, ಲೋಕೇಶ್ ಜಿ (ಲೋಕಿ), ಪುಟ್ಟಿ, ಕೃಷ್ಣ ಗೊಲ್ಲ, ಆಶಾ ವಿ, ನೇತ್ರಾವತಿ, ರಾಜಶೇಖರ ಶೆಟ್ಟಿ, ವಿಶಾಲಾಕ್ಷೀ ಶೆಟ್ಟಿಗಾರ್, ಸುರೇಶ್ ದೇವಾಡಿಗ, ರಾಯ್ಟಿನ್ ಡಿಮೆಲ್ಲೋ, ಲತಾ ಶೇಖರ ಮೊಗವೀರ, ರಾಜು ಮರಕಾಲ, ಉದಯ್ ನಾಯಕ್, ಆಶಾ ಜಿ ಕುಂದರ್ ವಿಜೇತರಾಗಿದ್ದಾರೆ. ಬೀಜಾಡಿ ಗ್ರಾಮ ಪಂಚಾಯಿತಿಯಲ್ಲಿ ಸುಮತಿ, ಮಂಜುನಾಥ ಕುಂದರ್, ಪುಟ್ಟು, ಅನಿಲ್ ಕುಮಾರ ಚಾತ್ರಬೆಟ್ಟು, ಸೀತಾ, ಪೂರ್ಣಿಮಾ, ವಿಶ್ವನಾಥ ವಿಜೇತರಾಗಿದ್ದಾರೆ.

ಬೇಳೂರು ಗ್ರಾಮ ಪಂಚಾಯಿತಿಯಲ್ಲಿ ಉಷಾ, ಕರುಣಾಕರ ಶೆಟ್ಟಿ ವಿಜೇತರಾಗಿದ್ದಾರೆ. ಮೊಳಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಯಶೋಧ, ಇಂದಿರಾ ಯು ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಎಂ.ದಿನೇಶ್ ಹೆಗ್ಡೆ, ಜಯಂತಿ, ಕನಕ, ಮನೋಜ್ ಕುಮಾರ ಶೆಟ್ಟಿ, ಚಂದ್ರಿಕಾ, ಪ್ರೇಮಾ, ಚೈತ್ರಾ ವಿ ಅಡಪ ವಿಜೇತರಾಗಿದ್ದಾರೆ. ಹಾರ್ದಳ್ಳಿ-ಮಂಡಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನೇತ್ರಾವತಿ ಕುಲಾಲ್, ಲವಕರ, ರೇಖಾ, ಶಿವರಾಮ, ಪ್ರೇಮಾ ಕೆಳಮನೆ, ಜಯಪ್ರಕಾಶ ಶೆಟ್ಟಿ, ಸುಜಾತ, ರಾಜೀವಿ, ಜಗನ್ನಾಥ ಶೆಟ್ಟಿ ಚಿಟ್ಟೆಬೈಲ್ ವಿಜೇತರಾಗಿದ್ದಾರೆ. ಹೆಂಗವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶೈಲಜಾ ಚಂದ್ರಕಾಂತ್ ನಾಯಕ್, ಪಾರ್ವತಿ ಬಾಯಿ, ರಘುರಾಮ ಶೆಟ್ಟಿ, ರಮ್ಯ, ಎಸ್.ವಸುಂಧರ ಹೆಗ್ಡೆ, ರತ್ನಾವತಿ, ಯೋಗೀಶ್ ಮಡಿವಾಳ, ಸಂತೋಷ್ ಶೆಟ್ಟಿ, ಗಿರಿಜಾ ವಿಜೇತರಾಗಿದ್ದಾರೆ.

ಅಮಾಸೆಬೈಲು ಗ್ರಾಮ ಪಂಚಾಯಿತಿಯಲ್ಲಿ ಪ್ರೇಮಾ ನಾಯಕಿ, ಕೃಷ್ಣ ಪೂಜಾರಿ, ಪುಷ್ಪಲತಾ, ಕಿರಣ್ ಶೆಟ್ಟಿ ರಟ್ಟಾಡಿ, ಮಲ್ಲಿಕ, ರಜನಿ, ಜಯಪ್ರಕಾಶ, ಶ್ರೀನಿವಾಸ ಪೂಜಾರಿ, ಸುಮನ ಶೆಟ್ಟಿಗಾರ, ಹರ್ಷ ವಿಜೇತರಾಗಿದ್ದಾರೆ. ಕಂದಾವರ ಗ್ರಾಮ ಪಂಚಾಯಿತಿಯಲ್ಲಿ ಶೀನ ಪೂಜಾರಿ, ಶೋಭಾ, ಜ್ಯೋತಿ, ಅಭಿಜಿತ್, ಅನುಪಮ ಯು ಶೆಟ್ಟಿ ವಿಜೇತರಾಗಿದ್ದಾರೆ. ಕಾಳಾವರ ಗ್ರಾಮ ಪಂಚಾಯಿತಿಯಲ್ಲಿ ಕೆ.ಜ್ಯೋತಿ, ಕೆ.ಜಯಪ್ರಕಾಶ ಶೆಟ್ಟಿ, ಭಾರತಿ ಯಾನೆ ಬಾಬಿ ಶೆಡ್ತಿ ವಿಜೇತರಾಗಿದ್ದಾರೆ. ಕಾವ್ರಾಡಿ ಗ್ರಾಮ ಪಂಚಾಯಿತಿಯಲ್ಲಿ ಲಲಿತಾ, ಲಿಯಾಕತ್ ಬೆಟ್ಟೆ, ಜುಲೇಖಾ ಶೇಖ್, ವಿಜಯಕುಮಾರ, ಸಾಧು, ಶ್ಯಾಮಲ ದೇವಾಡಿಗ, ಪ್ರಕಾಶ್ಚಂದ್ರ ಶೆಟ್ಟಿ, ಸುರೇಶ್, ವಿಶ್ವನಾಥ ದೇವಾಡಿಗ, ಜ್ಯೋತಿ ಎಂ ಪುತ್ರನ್, ರಾಜಶ್ರೀ ಹಳ್ನಾಡು, ವಿಜೇತರಾಗಿದ್ದಾರೆ. ಗುಲ್ವಾಡಿ ಗ್ರಾಮ ಪಂಚಾಯಿತಿಯಲ್ಲಿ ಮಂಜುಳ, ಸುಜಾತ ಎಸ್ ಶೆಟ್ಟಿ, ರಾಮಕೃಷ್ಣ ಹೆಬ್ಬಾರ್ ವಿಜೇತರಾಗಿದ್ದಾರೆ. ಅಂಪಾರು ಗ್ರಾಮ ಪಂಚಾಯಿತಿಯಲ್ಲಿ ಭಾರತಿ ಶೇಟ್, ಎಚ್.ಸತೀಶ್ ಶೆಟ್ಟಿ ಹಡಾಳಿ, ಶಕಿಲ ಮಹೇಂದ್ರ, ನವೀನ್ ಶೆಟ್ಟಿ ಹೊಸಿಮನೆ, ಜಯಲಕ್ಷ್ಮೀ ಶೆಡ್ತಿ, ಕೆ.ಅಶೋಕ ಅಂಪಾರು ವಿಜೇತರಾಗಿದ್ದಾರೆ.

ಗೋಪಾಡಿ ಗ್ರಾಮ ಪಂಚಾಯಿತಿಯಲ್ಲಿ ನೇತ್ರಾವತಿ, ಗಿರೀಶ್ ಉಪಾಧ್ಯ, ಪ್ರಭಾಕರ, ಸರೋಜ, ಶಾಂತಾ, ಸಾವಿತ್ರಿ, ಸುರೇಶ್ ಶೆಟ್ಟಿ ವಿಜೇತರಾಗಿದ್ದಾರೆ. 76-ಹಾಲಾಡಿ ಗ್ರಾಮ ಪಂಚಾಯಿತಿಯಲ್ಲಿ ಗುರುಪ್ರಸಾದ ಶೆಟ್ಟಿ, ಹೇಮಾ ಕುಲಾಲ್, ರೇಣುಕಾ ಮಹಾಬಲ ನಾಯಕ್, ನಾಗರಾಜ್ ಗೋಳಿ ವಿಜೇತರಾಗಿದ್ದಾರೆ ಹಾಗೂ ತೆಕ್ಕಟ್ಟೆ ಗ್ರಾಮ ಪಂಚಾಯಿತಿಯಲ್ಲಿ ಗೋಪಾಲ, ಕಮಲ ಪೂಜಾರಿ,ತ್ರಿವಿಕ್ರಮ, ಲಕ್ಷ್ಮೀ, ಸತೀಶ್ ದೇವಾಡಿಗ, ಸುರೇಶ್ ಶೆಟ್ಟಿ , ಟಿ.ಶೋಭನಾ, ವಿಜಯ ಭಂಡಾರಿ, ಮಮತಾ, ವಿನೋದ ದೇವಾಡಿಗ ಸಂಜೀವ ದೇವಾಡಿಗ,ಪ್ರತಿಮ ವಿಜೇತರಾಗಿರುವ ಫಲಿತಾಂಶ ಪಟ್ಟಿ ಪ್ರಕಟವಾಗಿದೆ.

ಅವಿರೋಧ ಆಯ್ಕೆ : ಬೇಬಿ (ಹಕ್ಲಾಡಿ), ಬಳ್ಕೂರಿನ 1 ಸ್ಥಾನಕ್ಕೆ, ಪ್ರೇಮಾ, ರೇಣುಕಾ.(ತೆಕ್ಕಟ್ಟೆ), ನಿರ್ಮಲಾ ಗಿರಿಜನ (ಬೇಳೂರು), ಗುಬ್ಬಿ, ಮಾಲತಿ, ಜ್ಯೋತಿ ಎಂ ದೇವಾಡಿಗ, ಜಲಜ, ಪ್ರಶಾಂತ ಶೆಟ್ಟಿ (ಕೆದೂರು), ಜ್ಯೋತಿ, ಜ್ಯೋತಿ ಎನ್ (ಹೊಂಬಾಡಿ ಮಂಡಾಡಿ), ಕಲಾವತಿ (ಮೊಳಹಳ್ಳಿ), ಸಾಧು ಹರಿಜನ, ಗಿರಿಜಾ, ಅಶೋಕ (ಹಾಲಾಡಿ), ಮಮತಾ, ಕಾರ್ತಿಕ, ಸುಮಿತ್ರ, ಗಣೇಶ್ ಶೆಟ್ಟಿ, ಮಾಲತಿ (ಅಮಾಸೆಬೈಲು), ಮಂಜುಳ (ಗುಲ್ವಾಡಿ), ಸುಶೀಲಾ (ಗೋಪಾಡಿಯ) ಹಾಗೂ ಪಲ್ಲವಿ (ಕೊರ್ಗಿ) ಯವರ ಅವಿರೋಧ ಆಯ್ಕೆ ನಡೆದಿದೆ.

ಭಂಡಾರಕಾರ್ಸ್ ಕಾಲೇಜು ರಸ್ತೆಯಲ್ಲಿ ಜನಜಂಗುಳಿ 

ಇಲ್ಲಿನ ಮತ ಎಣಿಕೆ ಕೇಂದ್ರವಾದ ಭಂಡಾರಕಾರ್ಸ್ ಕಾಲೇಜು ರಸ್ತೆಯಲ್ಲಿ ಬುಧವಾರ ನಸುಕಿನ ಜಾವದಿಂದಲೇ ಚುನಾವಣಾ ಅಭ್ಯರ್ಥಿಗಳು, ಮತಎಣಿಕೆ ಏಜೆಂಟರು ಹಾಗೂ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರಿಂದ ಜನಜಂಗುಳಿ ಉಂಟಾಗಿ ಸ್ಥಳೀಯ ನಿವಾಸಿಗಳು ಸಂಕಷ್ಟ ಅನುಭವಿಸುವಂತಾಯಿತು.

ಗಾಂಧಿ ಮೈದಾನ, ತಾಲ್ಲೂಕು ಪಂಚಾಯಿತಿ ವಸತಿಗೃಹ, ತಾಲ್ಲೂಕು ಆರೋಗ್ಯ ಇಲಾಖೆ ಕಚೇರಿ ಸೇರಿದಂತೆ ಪರಿಸರದ ವಾಣಿಜ್ಯ ಮಳಿಗೆಗಳ ಮುಂಭಾಗದಲ್ಲಿಯೂ ಜನರು ಸೇರಿದ್ದರಿಂದಾಗಿ ಜನದಟ್ಟಣೆ ಉಂಟಾಗಿತ್ತು. ಮತ ಎಣಿಕೆಯ ವೇಳೆಯಲ್ಲಿ ಕೊರೋನಾ ನಿಯಮ ಪಾಲನೆ ಕಡ್ಡಾಯ ಎನ್ನುವ ಆದೇಶ ಹೊರಡಿಸಿದ್ದರು ಎಣಿಕೆಯ ಕುತೂಹಲದಲ್ಲಿ ಮೈ ಮರೆತ ಜನ, ಸಾರಸಗಟಾಗಿ ಕೊರೋನಾ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿದ್ದರು. ಮೆರವಣಿಗೆಗೆ ನಿಷೇಧವಿದ್ದರೂ ಚುನಾವಣೆಯಲ್ಲಿ ವಿಜೇತ ವ್ಯಕ್ತಿಗಳು ಹೊರ ಬರುತ್ತಿದ್ದಂತೆ ಅವರನ್ನು ಎತ್ತಿ ಮೆರವಣಿಗೆಯ ಮೂಲಕ ಕೊಂಡೊಯ್ಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಅತೀ ಹೆಚ್ಚು ಅಂತರದ ಗೆಲವು
ಅತಿ ಹೆಚ್ಚು ಅಂತರದ ಗೆಲುವಿಗೆ ಹಕ್ಲಾಡಿ ಗ್ರಾಮ ಪಂಚಾಯಿತಿ ಸಾಕ್ಷಿಯಾಯಿತು. ಹಕ್ಲಾಡಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಭಾಸ್ ಶೆಟ್ಟಿ ಹೊಳ್ಮಗೆ 600ಕ್ಕೂ ಅಧಿಕ ಅಂರದಿಂದ ಗೆಲುವು ಸಾಧಿಸಿದ್ದರು. ಹಕ್ಲಾಡಿ ಗ್ರಾಮ ಪಂಚಾಯಿತಿ 1ನೇ ವಾರ್ಡ್‍ನಿಂದ ಸ್ಪರ್ಧಿಸಿದ್ದ ಮಾಜಿ ಸದಸ್ಯ ಸತೀಶ್ ಶೆಟ್ಟಿ ಗುಬ್ಯಾಡಿ ಕಳೆದ ಬಾರಿ ತಮ್ಮ ಪ್ರತಿ ಸ್ಪರ್ಧಿ ಬಸವ ಮೊಗವೀರ ಅವರ ವಿರುದ್ಧ ಕೇವಲ 1 ಮತಗಳಿಂದ ಗೆಲುವು ಸಾಧಿಸಿದ್ದರೇ, ಈ ಬಾರಿ 4 ಮತಗಳ ಅಂತರದಲ್ಲಿ ಸತೀಶ್ ಶೆಟ್ಟಿ ಗುಬ್ಯಾಡಿ ಅವರು ಬಸವ ಮೊಗವೀರ ಅವರ ವಿರುದ್ಧ ಸೋಲು ಕಂಡಿದ್ದಾರೆ.

ವಿಶೇಷ ಚೇತನ ವ್ಯಕ್ತಿಯ 2ನೇ ಗೆಲವು
ಹಂಗಳೂರು ಗ್ರಾಮ ಪಂಚಾಯಿತಿಗೆ ಸ್ಪರ್ಧಿಸಿದ್ದ ವಿಶೇಷ ಚೇತನ ವ್ಯಕ್ತಿ ಸುಧಾಕರ ಪೂಜಾರಿ ಈ ಬಾರಿಯೂ ಗೆಲುವು ಸಾಧಿಸುವ ಮೂಲಕ 2ನೇ ಬಾರಿ ಗ್ರಾಮ ಪಂಚಾಯಿತಿ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.

ಸತತ ಐದನೇ ಬಾರಿ ಗೆದ್ದ ಮಹಿಳಾ ನಾಯಕಿ:
ಕುಂಭಾಶಿ ಗ್ರಾಮ ಪಂಚಾಯತ್‍ನ ಎರಡು ವಾರ್ಡ್‍ಗಳಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕುಂಭಾಶಿ ನಿವಾಸಿ, ಕುಂದಾಪುರ ಮಹಿಳಾ ಸಾಂತ್ವನ ಕೇಂದ್ರದ ಅಧ್ಯಕ್ಷೆ ರಾಧಾದಾಸ್ ಎರಡೂ ವಾರ್ಡ್‍ಗಳಲ್ಲಿ ಜಯಭೇರಿ ಭಾರಿಸಿದ್ದಾರೆ. ರಾಧಾದಾಸ್ ಅವರ ಈ ಗೆಲುವು ಸತತ ಐದನೇ ಗೆಲುವಾಗಿದೆ.

ಡಿಸಿ ಬಂದ್ರು ಮಾಸ್ಕ್ ಹಾಕಿಕೊಳ್ಳಿ
ಮಧ್ಯಾಹ್ನದ ವೇಳೆಗೆ ಮತ ಎಣಿಕೆ ಕೇಂದ್ರಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಬರುತ್ತಿರುವುದನ್ನು ನೋಡಿದ ಹೆಚ್ಚಿನವರು, ತಡಬಡನೆ ಮುಖಕ್ಕೆ ಮಾಸ್ಕ್ ಧಾರಣೆ ಮಾಡಿದ್ದಲ್ಲದೆ, ಸಮೀಪವರ್ತಿಗಳಿಗೆ ಡಿಸಿ ಬಂದ್ರು…ಡಿಸಿ ಬಂದ್ರು ಮಾಸ್ಕ್ ಹಾಕಿಕೊಳ್ಳಿ ಎಂದು ಎಚ್ಚರಿಸಿದ ಘಟನೆಯೂ ನಡೆಯಿತು.

ಆವರಣಗೋಡೆ ಹತ್ತಿ ಕೂಗಾಟ:
ತಮ್ಮ ಬೆಂಬಲಿಗ ಅಭ್ಯರ್ಥಿಗಳು ವಿಜಯಿ ಎಂದು ಘೋಷಿಸಿದ ಬೆನ್ನಲ್ಲೇ ಬೆಂಬಲಿತರು ಮತ ಎಣಿಕೆ ಕೇಂದ್ರದ ಆವರಣಗೋಡೆ ಹತ್ತಿ ಕೂಗಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು. ಅಲ್ಲಿ ನಿಯೋಜನೆಗೊಂಡಿದ್ದ ಅಮಾಸೆಬೈಲು ಪಿಎಸ್‍ಐ ಅನಿಲ್ ಮಧ್ಯಪ್ರವೇಶಿಸಿ ಗುಂಪು ಚದುರಿಸಿದರು.

ಗೋಪಾಡಿ ಪಂಚಾಯತ್ ಅಧ್ಯಕ್ಷೆ ಸರಸ್ವತಿ ಪುತ್ರನ್, ಕಾವ್ರಾಡಿ ಪಂಚಾಯತ್ ಅಧ್ಯಕ್ಷೆ ಗೌರಿ ಆರ್. ಶ್ರೀಯಾನ್ ಅವರು ಪರಾಭವ ಕಂಡಿದ್ದಾರೆ. ಗುಜ್ಜಾಡಿ ಪಂಚಾಯತ್ ಅಧ್ಯಕ್ಷ ತಮ್ಮಯ ದೇವಾಡಿಗ, ಹಟ್ಟಿಯಂಗಡಿ ಪಂಚಾಯತ್ ಅಧ್ಯಕ್ಷ ರಾಜೀವ ಶೆಟ್ಟಿ ಗೆಲುವಿನ ನಗೆ ಬೀರಿದ್ದಾರೆ.


Spread the love

2 Comments

  1. Partywise total seats should have been more informative.
    Each party how seat contested and how many seats erected.

Comments are closed.