Home Mangalorean News Kannada News ಕುಂದಾಪುರ| ಬೃಹತ್ ಅರಳಿಮರ ಬಿದ್ದು ಮನೆಗೆ ಹಾನಿ: ವಾಹನಗಳು ಜಖಂ

ಕುಂದಾಪುರ| ಬೃಹತ್ ಅರಳಿಮರ ಬಿದ್ದು ಮನೆಗೆ ಹಾನಿ: ವಾಹನಗಳು ಜಖಂ

Spread the love

ಕುಂದಾಪುರ| ಬೃಹತ್ ಅರಳಿಮರ ಬಿದ್ದು ಮನೆಗೆ ಹಾನಿ: ವಾಹನಗಳು ಜಖಂ

ಕುಂದಾಪುರ: ಶುಕ್ರವಾರ ನಸುಕಿನ ಜಾವ ಸುರಿದ ಭಾರೀ ಗಾಳಿ-ಮಳೆಗೆ ಬೃಹತ್ ಅರಳಿ ಮರ ಮನೆಯೊಂದರ ಮೇಲೆ ಬಿದ್ದು ಮನೆ ಹಾನಿಯಾದ‌ ಘಟನೆ ಕುಂದಾಪುರ ಪುರಸಭಾ ವ್ಯಾಪ್ತಿಯ ಭಗತ್ ಸಿಂಗ್ ರಸ್ತೆಯಲ್ಲಿನ ಮಠದಬೆಟ್ಟುವಿನಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ವಸಂತಿ ದೇವಾಡಿಗ ಮನೆ ಮೇಲೆ ಮರ ಬಿದ್ದಿದ್ದು, ಮನೆಯ ಸ್ಲ್ಯಾಬ್ ಗೆ ಹಾನಿಯಾಗಿದೆ. ಪಕ್ಕದಲ್ಲೇ ಯಕ್ಷೇಶ್ವರಿ ದೇವಸ್ಥಾನವಿದ್ದು, ದೇವಸ್ಥಾನಕ್ಕೆ ತಾಗಿಕೊಂಡೆ ಮರ ಬಿದ್ದಿದೆ. ಸ್ಲ್ಯಾಬ್ ಮನೆಯಾದ್ದರಿಂದ ಮನೆಯಲ್ಲಿ ಮಲಗಿದ್ದವರಿಗೆ ಯಾವುದೇ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ. ಆದರೆ ಮನೆ ಎದುರು ಅಳವಡಿಸಲಾಗಿದ್ದ ಶೀಟ್ ನ ಮೇಲ್ಛಾವಣಿ ಸಂಪೂರ್ಣ ಹಾನಿಯಾಗಿದ್ದು, ಅದರ ಅಡಿ ನಿಲ್ಲಿಸಿದ್ದ ಎರಡು ಬೈಕ್‌ಗಳು ಹಾಗೂ ಕಾರಿಗೆ ಹಾನಿಯಾಗಿದೆ. ಮರ ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದರಿಂದ ಮೂರ್ನಾಲ್ಕು ವಿದ್ಯುತ್ ಕಂಬಗಳು ತುಂಡಾಗಿ ಧರೆಗುರುಳಿವೆ.

ಕುಂದಾಪುರ ಪುರಸಭೆಯ ಅಧಿಕಾರಿಗಳು, ಸಿಬ್ಬಂದಿಗಳು ಭೇಟಿ ನೀಡಿ ಮರ ತೆರುವುಗೊಳಿಸಲು ಸಹಕರಿಸಿದ್ದಾರೆ.


Spread the love

Exit mobile version