Home Mangalorean News Kannada News ಕುಂದಾಪುರ: ಬೈಕ್‍ಗೆ ಟ್ಯಾಂಕರ್ ಡಿಕ್ಕಿ: ಬೈಕ್ ಸವಾರ ಸಾವು, ಸಹ ಸವಾರ ಗಂಭೀರ

ಕುಂದಾಪುರ: ಬೈಕ್‍ಗೆ ಟ್ಯಾಂಕರ್ ಡಿಕ್ಕಿ: ಬೈಕ್ ಸವಾರ ಸಾವು, ಸಹ ಸವಾರ ಗಂಭೀರ

Spread the love

ಕುಂದಾಪುರ: ಕುಂದಾಪುರದಿಂದ ತಲೂರಿನತ್ತ ಸಾಗಿತ್ತಿದ್ದ ಬೈಕ್‍ಗೆ ಎದುರಿನಿಂದ ಬಂದ ಟ್ಯಾಂಕರ್‍ವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿ, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಕುಂದಾಪುರದ ಹೇರಿಕುದ್ರು ಸೇತುವೆಯಲ್ಲಿ ಶನಿವಾರ ಸಂಜೆ ನಡೆದಿದೆ.

herikudru_Kundapur_accident 03-05-2015 08-07-28

ತಾಲೂಕಿನ ಹಟ್ಟಿಯಂಗಡಿ ಸಮೀಪದ ಕರ್ಕಿ ನಿವಾಸಿ ಕೆರಿಯಪ್ಪ ಪೂಜಾರಿ (44) ಎನ್ನುವವರೇ ಸಾವನ್ನಪ್ಪಿದ ದುರ್ದೈವಿಯಾಗಿದ್ದು, ಹಿಂಬದಿ ಸವಾರ ಹಟ್ಟಿಯಂಗಡಿ ನಿವಾಸಿ ಅಭಿಷೇಕ್ (26) ಎನ್ನುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೆರಿಯಪ್ಪ ಅವರು ಕರ್ಕಿಯ ಹೆಂಚಿನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು ಶನಿವಾರ ಕಾರ್ಖಾನೆಯ ತನ್ನ ಕೆಲಸ ಮುಗಿಸಿದ ಅವರು ಕುಂದಾಪುರ ಸಂತೆಗೆ ಸಾಮಾನು ಖರೀದಿಗಾಗಿ ಬಂದಿದ್ದು, ತರಕಾರಿ, ಹಣ್ಣು-ಹಂಪಲುಗಳನ್ನು ಖರೀದಿಸಿ ಮನೆಗೆ ತೆರಳುತ್ತಿದ್ದರು. ಬೈಕಿನಲ್ಲಿ ಹಟ್ಟಿಯಂಗಡಿಯತ್ತ ತೆರಳುತ್ತಿರುವ ವೇಳೆ ಹೇರಿಕುದ್ರು ಸೇತುವೆ ಬಳಿ ಎದುರಿನಿಂದ ಬಂದ ಟ್ಯಾಂಕರ್ ಇವರ ಬೈಕಿಗೆ ಡಿಕ್ಕಿಯಾಗಿದೆ. ಈ ಸಂದರ್ಭ ಗಂಭೀರವಾಗಿ ಗಾಯಗೊಂಡು ರಕ್ತಸ್ರಾವವುಂಟಾಗಿ ಕೆರಿಯಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಿಂಬದಿ ಸವಾರ ಅಭಿಷೇಕ್ ಕೂಡ ಗಂಭೀರ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಂದಾಪುರ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.


Spread the love

Exit mobile version