ಕುಂದಾಪುರ : ಮದಗದಲ್ಲಿ ಮುಳುಗಿ ಉಪನ್ಯಾಸಕ ಸಹಿತ ಇಬ್ಬರು ಮೃತ್ಯು

Spread the love

ಕುಂದಾಪುರ : ಮದಗದಲ್ಲಿ ಮುಳುಗಿ ಉಪನ್ಯಾಸಕ ಸಹಿತ ಇಬ್ಬರು ಮೃತ್ಯು

ಕುಂದಾಪುರ: ಮದಗದಲ್ಲಿ ಈಜಲು ತೆರಳಿದ ಇಬ್ಬರು ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕುಂದಾಪುರ ತಾಲೂಕಿನ ಕಂದಾವರ ಗ್ರಾಮದ ಡಂಪಿಂಗ್ ಯಾರ್ಡ್ ಸಮೀಪದ ಬೊಬ್ಬರ್ಯನಕೊಡ್ಲು ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.

ಮೃತರನ್ನು ಭರತ್ ಶೆಟ್ಟಿಗಾರ್(16) ಹಾಗೂ ರಾಜೇಂದ್ರ ಶೆಟ್ಟಿಗಾರ್(27) ಎಂದು ಗುರುತಿಸಲಾಗಿದೆ.

ಸೋಮವಾರ ಸಂಜೆ ಬೊಬ್ಬರ್ಯನಕೊಡ್ಲು ಮದಗದಲ್ಲಿ ರಾಜೇಂದ್ರ, ಭರತ್ ಹಾಗೂ ಇನ್ನು ಮೂವರು ಬಾಲಕರು ಈಜಲು ನೀರಿಗಿಳಿದಿದ್ದಾರೆ. ಈ ವೇಳೆ ನಾಲ್ವರು ನೀರಲ್ಲಿ ಮುಳುಗುತ್ತಿದ್ದುದನ್ನು ಕಂಡ ರಾಜೇಂದ್ರ ಮೂವರನ್ನು ರಕ್ಷಿಸಿದ್ದು, ಆದರೆ ಭರತ್ ರನ್ನು ರಕ್ಷಿಸುವಷ್ಟರಲ್ಲಿ ತಾನು ಸಹ ಈಜಲು ಸಾಧ್ಯವಾಗದೇ ಸಾವನ್ನಪ್ಪಿರುವುದಾಗಿ ಸ್ಥಳೀಯರು ಹೇಳಿದ್ದಾರೆ.

ಶಂಕರನಾರಾಯಣ ಸಮೀಪದ ನಿವಾಸಿ ಗಣೇಶ್ ಶೆಟ್ಟಿಗಾರ್ ಅವರ ಪುತ್ರ ಭರತ್ ಎಸೆಸೆಲ್ಸಿ ವಿದ್ಯಾರ್ಥಿಯಾಗಿದ್ದು, ಅಜ್ಜಿಮನೆಗೆ ಬಂದಿದ್ದರು. ರಾಜೇಂದ್ರ ಅವರು ಶಂಕರನಾರಾಯಣದ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿದ್ದರು ಎಂದು ತಿಳಿದು ಬಂದಿದೆ.

ಕುಂದಾಪುರ ಅಗ್ನಿಶಾಮಕ ದಳದ ಸಿಬಂದಿ ಸ್ಥಳಕ್ಕೆ ಆಗಮಿಸಿ, ಸ್ಥಳೀಯರ ಸಹಕಾರದೊಂದಿಗೆ ಮೃತದೇಹಗಳನ್ನು ಮೇಲೇತ್ತುವಲ್ಲಿ ಸಹಕರಿಸಿದರು.

ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.


Spread the love

1 Comment

Comments are closed.