ಕುಂದಾಪುರ: ಮರದ ಗೆಲ್ಲು ಕಡಿಯುವಾಗ ವಿದ್ಯುತ್ ಪ್ರವಹಿಸಿ ಯುವಕ ಸಾವು

Spread the love

ಕುಂದಾಪುರ: ಮರದ ಗೆಲ್ಲು ಕಡಿಯುವಾಗ ವಿದ್ಯುತ್ ಪ್ರವಹಿಸಿ ಯುವಕ ಸಾವು

ಕುಂದಾಪುರ: ಮರದ ಗೆಲ್ಲು ಕಡಿಯುವಾಗ ವಿದ್ಯುತ್ ಪ್ರವಹಿಸದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಗುಜ್ಜಾಡಿ ಗ್ರಾಮದ ನಾಯಕವಾಡಿ ಚೆಕ್ ಪೋಸ್ಟ್ ಬಳಿ ನಡೆದಿದೆ.

ಮೃತ ಯುವಕನನ್ನು ಗುಜ್ಜಾಡಿ ಗ್ರಾಮದ ನಿವಾಸಿ ಸುಜಯ(20) ಎಂದು ಗುರುತಿಸಲಾಗಿದೆ.

ಸಂಗಮೇಶ್ವರ ದೇವಸ್ಥಾನದ ಕಾರ್ತಿಕ ದೀಪೋತ್ಸವದ ಕಟ್ಟೆ ಪೂಜೆಯ ಸಿದ್ದತೆ ಮಾಡುತ್ತಾ ಮಾವಿನ ತೋರಣ ಕಟ್ಟಲು ಕಟ್ಟೆಯ ಬಳಿ ಇರುವ ಮಾವಿನ ಮರದ ಕೊಂಬೆಯನ್ನು ಕಡಿಯುವಾಗ ಮರದ ಕೊಂಬೆಯ ಸಮೀಪದಲ್ಲಿ ಹಾದು ಹೋದ ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದು ಇದರಿಂದ ವಿದ್ಯುತ್ ಪ್ರವಹಿಸಿ ಸುಜಯ್ ಅವರಿಗೆ ತಗಲಿದೆ. ಸ್ಥಳೀಯರು ಕೂಡಲೇ ಅಂಬುಲೆನ್ಸ್ ಮೂಲಕ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಅದಾಗಲೇ ಆತ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Please enter your comment!
Please enter your name here