ಕುಂದಾಪುರ: ಮರಳು ಶಿಲ್ಪದಲ್ಲಿ ಮೂಡಿದ ‘ಕಾಂತಾರ’!

Spread the love

ಕುಂದಾಪುರ: ಮರಳು ಶಿಲ್ಪದಲ್ಲಿ ಮೂಡಿದ ‘ಕಾಂತಾರ’!
 

ಕುಂದಾಪುರ: ರಾಜ್ಯಾದ್ಯಂತ ಕಾಂತಾರ ಸಿನೆಮಾ ಯಶಸ್ವಿಯಾಗಿ ಸಿನಿ‌ಪ್ರೀಯರ ಮನ ರಂಜಿಸುತ್ತಿದ್ದು, ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿಯ ವಿಭಿನ್ನ‌ ಪ್ರಯತ್ನಕ್ಕೆ ವ್ಯಾಪಕ ಜನಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಕಲಾವಿದರ ತಂಡವೊಂದು ಇಲ್ಲಿನ ಕೋಡಿ ಕಡಲತೀರದ ಹಳೆಅಳಿವೆಯಲ್ಲಿ ಕಾಂತಾರ ನಿನೆಮಾದ ಕಲಾಕೃತಿ ರಚಿಸುವ ಮೂಲಕ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ರಕ್ಷಕ ಶಕ್ತಿಯನ್ನು ಸಾರಿದ ಪಂಜುರ್ಲಿ ಮತ್ತು ದೈವದ ರೂಪದಲ್ಲಿ ಅವತರಿಸಿದ ನಟ ರಿಷಬ್ ಶೆಟ್ಟಿಯವರನ್ನು ಕೇಂದ್ರವಾಗಿರಿಸಿ ಸುಮಾರು 4 ಅಡಿ ಎತ್ತರದ ಕಲಾಕೃತಿಯನ್ನು ಮರಳು ಶಿಲ್ಪ ಕಲಾವಿದ ಹರೀಶ್ ಸಾಗಾ ಮತ್ತು ತಂಡ ರಚಿಸುವ ಮೂಲಕ ರಿಷಬ್ ಶೆಟ್ಟಿ ಮತ್ತು ಇಡೀ ಚಿತ್ರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಕಲಾವಿದರು ರಚಿಸಿರುವ ಈ ಕಲಾಕೃತಿ ಜನಾಕರ್ಷಣೆಯ ಕೇಂದ್ರ ಬಿಂದುವಾಗಿದೆ‌.

ಕರಾವಳಿ ಭಾಗದ ಆಚರಣೆ, ಕ್ರೀಡೆ, ಧೈವರಾಧನೆ, ಜನರ ಮುಗ್ಧತೆ ಮತ್ತು ನಂಬಿಕೆಗೆ ಪಾತ್ರವಾದ ದೃಶ್ಯವನ್ನು ಪರಿಣಾಮಕಾರಿಯಾಗಿ ಕರಾವಳಿ ಭಾಗದ ಬಹುತೇಕ ಕಲಾವಿದರೊಳಗೊಂಡು ಚಿತ್ರೀಕರಿಸಿದ ಹೆಮ್ಮೆಯ ರಿಷಬ್ ಶೆಟ್ಟಿ ಅಭಿನಯ ಹಾಗೂ ನಿರ್ದೇಶನದ ಚಲನಚಿತ್ರ ಕಾಂತಾರ ಸಿನೆಮಾದ ಇಡೀ ತಂಡಕ್ಕೆ ಮರಳು ಶಿಲ್ಪ ರಚಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಕಲಾವಿದರಾದ ಹರೀಶ್ ಸಾಗಾ, ಸಂತೋಷ ಭಟ್ ಹಾಲಾಡಿ, ಪ್ರಸಾದ್ ಆರ್. ಮತ್ತು ಸ್ಯಾಂಡ್ ಥೀಮ್ ಉಡುಪಿ ತಂಡ ಕಲಾಕೃತಿ ರಚನೆಯಲ್ಲಿ ತೊಡಗಿಸಿಕೊಂಡವರು.


Spread the love