ಕುಂದಾಪುರ ವಕೀಲರ ಸಂಘದ ಅಧ್ಯಕ್ಷರಾಗಿ ಬನ್ನಾಡಿ ಸೋಮನಾಥ ಹೆಗ್ಡೆ ಆಯ್ಕೆ

Spread the love

ಕುಂದಾಪುರ ವಕೀಲರ ಸಂಘದ ಅಧ್ಯಕ್ಷರಾಗಿ ಬನ್ನಾಡಿ ಸೋಮನಾಥ ಹೆಗ್ಡೆ ಆಯ್ಕೆ

ಕುಂದಾಪುರ: ಮುಂದಿನ ಎರಡು ವರ್ಷಗಳ ಅವಧಿಗೆ ಕುಂದಾಪುರ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ವಕೀಲ ಬನ್ನಾಡಿ ಸೋಮನಾಥ ಹೆಗ್ಡೆ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ‌.

ಕಾರ್ಯದರ್ಶಿ ಸೇರಿದಂತೆ ನಾಲ್ಕು ಮಂದಿ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಗೊಂಡ‌ ಹಿನ್ನೆಲೆ ಅಧ್ಯಕ್ಷ ಸ್ಥಾನಕ್ಕೆ‌ ಮಾತ್ರ ಶುಕ್ರವಾರ ಚುನಾವಣೆ ನಡೆದಿತ್ತು. ಸಂಘದ ಕಚೇರಿಯಲ್ಲಿ ನಡೆದ ಬಾರ್ ಅಸೋಸಿಯೇಷನ್ ಚುನಾವಣೆಯ ಫಲಿತಾಂಶ ಸಂಜೆ ಹೊರಬಲಬಿದ್ದಿದ್ದು, ಬನ್ನಾಡಿ ಸೋಮನಾಥ ಹೆಗ್ಡೆ ಗೆಲುವು ಸಾಧಿಸಿದರು.

ಕಾರ್ಯದರ್ಶಿಯಾಗಿ ಶ್ರೀನಾಥ ರಾವ್, ಉಪಾಧ್ಯಕ್ಷರಾಗಿ ಬೀನಾ ಜೋಸೇಫ್, ಖಜಾಂಚಿ ದಿನಾಕರ್ ಹಾಗೂ ಜೊತೆ ಕಾರ್ಯದರ್ಶಿಯಾಗಿ ರಿತೇಶ್ ಅವಿರೋಧವಾಗಿ ಆಯ್ಕೆಗೊಂಡರು.

ನೂತನ ಅಧ್ಯಕ್ಷರಾದ ಬನ್ಮಾಡಿ ಸೋಮನಾಥ ಹೆಗ್ಡೆಯವರಿಗೆ ಹಿರಿಯ ವಕೀಲ ಟಿ.ಬಿ ಶೆಟ್ಟಿ ಶಾಲು ಹೊದಿಸಿ ಅಭಿನಂದನೆ ಸಲ್ಲಿಸಿ ಶುಭಹಾರೈಸಿದರು.


Spread the love