ಕುಂದಾಪುರ: ವ್ಯಕ್ತಿಯ ಮೇಲೆ ಚಿರತೆ ದಾಳಿ, ಗಂಭೀರ ಗಾಯ

Spread the love

ಕುಂದಾಪುರ: ವ್ಯಕ್ತಿಯ ಮೇಲೆ ಚಿರತೆ ದಾಳಿ, ಗಂಭೀರ ಗಾಯ

ಕುಂದಾಪುರ: ವ್ಯಕ್ತಿಯೋರ್ವರ ಮೇಲೆ ಚಿರತೆಯೊಂದು ಬುಧವಾರ ತಡರಾತ್ರಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಂಡ ಘಟನೆ ಕೊಲ್ಲೂರು ಸಮೀಪದ ನಾಗೋಡಿ ನಿಟ್ಟೂರು ಘಾಟಿಯ ನಾಗೋಡಿ ಚೆಕ್ ಪೋಸ್ಟ್ ಸನಿಹಿದ ಸಾಗರ ತಾಲೂಕಿನ ಸಂಕಣ್ಣ ಶ್ಯಾನುಭಾಗ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದೆ.

ಬುಧವಾರ ತಡರಾತ್ರಿ 2 ಗಂಟೆ ಸುಮಾರಿಗೆ ಗಾಢ ನಿದ್ರೆಯಲ್ಲಿದ್ದ ಮನೆ ಮಂದಿ ಸಾಕು ನಾಯಿ ಕೂಗಾಟವನ್ನು ಕೇಳಿ ಎಚ್ಚೆತ್ತಿದ್ದಾರೆ. ಮನೆ ಯಜಮಾನ ಗಣೇಶ್ (48) ಬಾಗಿಲು ತೆರೆದು ಹೊರ ಬಂದಾಗ ಅವರ ಮೇಲೆ ಚಿರತೆ ಎರಗಿದೆ. ಅವರು ಗಂಭೀರ ಗಾಯಗೊಂಡಿದ್ದಾರೆ. ಮನೆಯವರ ಕೂಗಾಟಕ್ಕೆ ಅಕ್ಕಪಕ್ಕದವರು ಓಡಿ ಬಂದಾಗ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ. ಗುರುವಾರ ಬೆಳಗ್ಗೆ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂಕಾಂಬಿಕಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ಕಂಚಿಕೆರೆ ಪ್ರದೇಶದಲ್ಲಿ ಚಿರತೆ ದಾಳಿ ಕಳವಳ ಮೂಡಿಸಿದೆ. ನಾಗೋಡಿ ಚೆಕ್ಪೋಸ್ಟ್ನಿಂದ ಅಂದಾಜು 4 ಕಿಮೀ ದೂರದಲ್ಲಿ ಈ ಊರಿದ್ದು, ಸಿಗಂಧೂರಿಗೆ ಹೋಗುವ ಮಾರ್ಗ ಬದಿಯಲ್ಲಿದೆ. ತಡರಾತ್ರಿ 2 ಗಂಟೆ ವೇಳೆಗೆ ನಾಯಿ ಕೂಗಿಕೊಳ್ಳುವುದನ್ನು ಕೇಳಿ ಗಣೇಶ್ ಬಾಗಿಲು ತೆಗೆದು ಹೊರಬಂದಾಗ ಏಕಾಏಕಿ ಅವರ ಮೇಲೆ ಚಿರತೆ ಎರಗಿದೆ.

ಈ ಭಾಗದಲ್ಲಿ ಚಿರತೆ ಕಾಟ ಬಹಳ ಸಮಯದಿಂದ ಇದದು ಮನುಷ್ಯನ ಮೇಲೆ ದಾಳಿ ನಡೆಸಿರುವುದು ಪ್ರದೇಶದಲ್ಲಿ ತೀವ್ರ ಕಳವಳ ಸೃಷ್ಠಿಸಿದೆ ಸೂಕ್ತ ಕ್ರಮಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.


Spread the love