ಕುಂದಾಪುರ: ಸಿಐಟಿಯು ರಾಜ್ಯ ಸಮ್ಮೇಳನದ ಪ್ರಚಾರ ಜಾಥಾ ಉದ್ಘಾಟನೆ

Spread the love

ಕುಂದಾಪುರ: ಸಿಐಟಿಯು ರಾಜ್ಯ ಸಮ್ಮೇಳನದ ಪ್ರಚಾರ ಜಾಥ ಉದ್ಘಾಟನೆ

ಕುಂದಾಪುರ: ಕಾರ್ಮಿಕರ ಐಕ್ಯತೆ ಹಾಗೂ ಜನತೆಯ ಸೌಹಾರ್ದತೆಗಾಗಿ ನಡೆಯಲಿರುವ ಸಿಐಟಿಯು 15 ನೇ ರಾಜ್ಯ ಸಮ್ಮೇಳನಧ ಜಿಲ್ಲಾ ಮಟ್ಟದ ಪ್ರಚಾರ ಜಾಥಾಕ್ಕೆ ಬುಧವಾರ ಇಲ್ಲಿನ ಶಾಸ್ತ್ರಿ ಸರ್ಕಲ್ ನಲ್ಲಿ ಚಾಲನೆ ನೀಡಲಾಯಿತು.

ಜಾಥಾ ಉದ್ಘಾಟಿಸಿ ಮಾತನಾಡಿದ, ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಕೆ.ಶಂಕರ್ ಅವರು, ಬೆಲೆ ಏರಿಕೆ, ನಿರುದ್ಯೋಗ, ಜನರ ಆದಾಯ ಕುಸಿತದಿಂದಾಗಿ ಸಾಮಾಜಿಕ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಾರ್ಮಿಕ ಕಾನೂನು ತಿದ್ದುಪಡಿಯಿಂದ ಕೋಟ್ಯಂತರ ಕಾರ್ಮಿಕರ ಬದುಕಿಗೆ ಭದ್ರತೆ ಇಲ್ಲದಂತಾಗಿದೆ. ರೈಲು, ವಿದ್ಯುತ್, ವಿಮಾನ, ವಿಮೆ ಮುಂತಾದ ಸಾರ್ವಜನಿಕ ಕ್ಷೇತ್ರಗಳನ್ನು ಖಾಸಗೀಯವರಿಗೆ ಮಾರಾಟ ಮಾಡಿ ಮಧ್ಯಮ ಹಾಗೂ ಬಡ ವರ್ಗದರ ಮೇಲೆ ದಾಳಿ ನಡೆಸಲಾಗುತ್ತಿದೆ. ಈ ಎಲ್ಲದರ ಕುರಿತು ಸಮಗ್ರ ಚರ್ಚೆ ನಡೆಸಿ ಮುಂದಿನ ಹೋರಾಟಗಳನ್ನು ರೂಪಿಸಲು ನವೆಂಬರ್ 15, 16 ಹಾಗೂ 17 ರಂದು ಕುಂದಾಪುರದಲ್ಲಿ 15ನೇ ರಾಜ್ಯ ಸಮ್ಮೇಳನ ನಡೆಸಲಾಗುತ್ತಿದೆ ಎಂದರು.

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಬಾಲಕ್ರಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಕೋಶಾಧಿಕಾರಿ ಎಚ್ ನರಸಿಂಹ, ಮಹಾಬಲ ವಡೇರಹೋಬಳಿ, ಪ್ರಚಾರ ಸಮಿತಿ ಸಂಚಾಲಕ ಚಂದ್ರಶೇಖರ ವಿ, ವೆಂಕಟೇಶ್ ಕೋಣಿ, ಬಲ್ಕೀಸ್, ನಾಗರತ್ನ ನಾಡ, ಶೀಲಾವತಿ ಇದ್ದರು.


Spread the love