ಕುಂಭಾಸಿ ದೇವಸ್ಥಾನಕ್ಕೆ ಮೈಸೂರು  ರಾಜವಂಶಸ್ಥ ಯದುವೀರ್ ಭೇಟಿ

Spread the love

ಕುಂಭಾಸಿ ದೇವಸ್ಥಾನಕ್ಕೆ ಮೈಸೂರು  ರಾಜವಂಶಸ್ಥ ಯದುವೀರ್ ಭೇಟಿ

ಕುಂದಾಪುರ : ಮೈಸೂರು  ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶುಕ್ರವಾರ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕುಂಭಾಸಿಯ ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ಅರ್ಚಕರ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.

ಕ್ಷೇತ್ರಕ್ಕೆ ಮೊದಲ ಬಾರಿ ಆಗಮಿಸಿದ್ದ ಮೈಸೂರು ಮಹಾರಾಜರನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದ ದೇವಸ್ಥಾನದವರು, ದೇವಸ್ಥಾನದ ಇತಿಹಾಸ ಹಾಗೂ ಪೂಜಾ ಪದ್ಧತಿಯ ವಿವರವನ್ನು ನೀಡಿದರು.

ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ ಹಾಗೂ ಹಿರಿಯ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ ಅವರು, ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ದೇವಸ್ಥಾನದ ವತಿಯಿಂದ ಗೌರವಿಸಿದರು.

ಕ್ಲೀನ್ ಕುಂದಾಪುರ ಪ್ರೋಜೆಕ್ಟ್ ನ ಭರತ್ ಬಂಗೇರ, ಲೋಹಿತ್ ಬಂಗೇರ, ಪುಂಡಲೀಕ ಬಂಗೇರ, ಗಣೇಶ್ ಪುತ್ರನ್, ಸರಸ್ವತಿ ಪುತ್ರನ್, ಕಲ್ಪನಾ ಭಾಸ್ಕರ್, ರೆಡ್ ಕ್ರಾಸ್ ಸಂಸ್ಥೆಯ ಶಿವರಾಮ ಶೆಟ್ಟಿ, ಆಶಾಲತಾ ಶೆಟ್ಟಿ, ಭಾಸ್ಕರ್, ದೇವಸ್ಥಾನ ರ್ಯಾಯ ಅರ್ಚಕ ವೆಂಕಟನಾರಾಯಣ ಉಪಾಧ್ಯಾಯ, ವ್ಯವಸ್ಥಾಪಕ ನಟೇಶ್ ಕಾರಂತ್ ಇದ್ದರು.


Spread the love