ಕುಕ್ಕರ್‌ಬಾಂಬ್ ಸ್ಪೋಟದಲ್ಲಿ ಗಾಯಗೊಂಡ ರಿಕ್ಷಾ ಚಾಲಕನನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಗೃಹ ಸಚಿವ ಅರಗ 

Spread the love

ಕುಕ್ಕರ್‌ಬಾಂಬ್ ಸ್ಪೋಟದಲ್ಲಿ ಗಾಯಗೊಂಡ ರಿಕ್ಷಾ ಚಾಲಕನನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಗೃಹ ಸಚಿವ ಅರಗ 

ಮಂಗಳೂರು: ನಗರದ ನಾಗೋರಿಯಲ್ಲಿ ಇತ್ತೀಚೆಗೆ ಆಟೋದಲ್ಲಿ ಕುಕ್ಕರ್‌ಬಾಂಬ್ ಸ್ಪೋಟದಿಂದ ಗಾಯಗೊಂಡ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿಯ ಆರೋಗ್ಯವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ವಿಚಾರಿಸಿದರು.

ಘಟನಾ ಸ್ಥಳದಲ್ಲಿ ಪರಿಶೀಲನೆ ಬಳಿಕ ನೇರವಾಗಿ ಮಂಗಳೂರು ನಗರದ ಕಂಕನಾಡಿಯಲ್ಲಿರುವ ಫಾ. ಮುಲ್ಲರ್ ಆಸ್ಪತ್ರೆಗೆ ಬಂದ ಗೃಹ ಸಚಿವರು ಗಾಯಾಳು ಪುರುಷೋತ್ತಮ ಪೂಜಾರಿ ಆರೋಗ್ಯ ವಿಚಾರಿಸಿದರು.

ಗೃಹಸಚಿವರಿಗೆ ಡಿಜಿಪಿ ಪ್ರವೀಣ್ ಸೂದ್, ಪಶ್ಚಿಮ ವಲಯ ಐಜಿಪಿ ಡಾ ಚಂದ್ರಗುಪ್ತ, ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್, ದಕ್ಷಿಣಕನ್ನಡ ಜಿಲ್ಲಾಧಿಕಾರಿ ಎಂ.ಆರ್ ರವಿಕುಮಾರ್ ಸಾಥ್ ನೀಡಿದರು.

ಇದೇ ವೇಳೆ ಗೃಹ ಸಚಿವರು ಪುರುಷೋತ್ತಮ ಪೂಜಾರಿಯವರಿಗೆ ವೈಯುಕ್ತಿವಾಗಿ ರೂ 50000 ಆರ್ಥಿಕ ನೆರವು ನೀಡಿದರು.


Spread the love

Leave a Reply

Please enter your comment!
Please enter your name here