ಕುಖ್ಯಾತ ಅಂತರ್ ಜಿಲ್ಲಾ 6 ವಾಹನ ಕಳ್ಳರ ಬಂಧನ, ರೂ44 ಲಕ್ಷ ಬೆಲೆ ಬಾಳುವ 20 ವಾಹನಗಳ ವಶ 

Spread the love

ಕುಖ್ಯಾತ ಅಂತರ್ ಜಿಲ್ಲಾ 6 ವಾಹನ ಕಳ್ಳರ ಬಂಧನ, ರೂ44 ಲಕ್ಷ ಬೆಲೆ ಬಾಳುವ 20 ವಾಹನಗಳ ವಶ 

ಹಾಸನ: ವಿವಿಧ ಜಿಲ್ಲೆಗಳಲ್ಲಿ ವಾಹನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ 6 ಮಂದಿ ಅಂತರ್ ಜಿಲ್ಲಾ ಕಳ್ಳರನ್ನು ಹಾಸನ ಜಿಲ್ಲಾ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಸುಮಾರು 44 ಲಕ್ಷ ಮೌಲ್ಯದ 20 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಮೈಸೂರಿನ ಹುಣಸೂರು ನಿವಾಸಿ ಮೊಯ್ದು ಕುನ್ನಿ @ಆರೀಫ್ ಬಿನ್ ಮಮ್ಮಿ ಕುನ್ನಿ (38), ಮಹಮ್ಮದ್ ರಫೀಕ್ @ರಫೀ ಬಿನ್ ಅಬ್ದುಲ್ ಸತ್ತಾರ್ (30), ಕೆ ಆರ್ ನಗರ ನಿವಾಸಿ ಅಫ್ರೋಝ್ ಖಾನ್ ಬಿನ್ ಖಲೀಲ್ ಅಹ್ಮದ್ (36), ಹೆಚ್ ಡಿ ಕೋಟೆ ನಿವಾಸಿ ಖಾದರ್ ಶರೀಫ್ ಮಹ್ಮದ್ ಶರೀಫ್ (46), ಹಂಪಾಪುರ ನಿವಾಸಿ ಸೈಯ್ಯದ್ ಅಜ್ಮಲ್ ಬಿನ್ ಸೈಯದ್ ಮೆಹಬೂಬ್ ಪಾಷ (39) ಮತ್ತು ಮಹಮ್ಮದ್ ಮುಬಾರಕ್ ಬಿನ್ ಅಬ್ದುಲ್ ಕರೀಂ (51) ಎಂದು ಗುರುತಿಸಲಾಗಿದೆ.

ಸಕಲೇಶಪುರ ತಾಲ್ಲೂಕು ಹರಳಹಳ್ಳಿ ಗ್ರಾಮದ ಶ್ರೀ ಸತೀಶ ಬಿನ್ ತಮ್ಮೇಗೌಡ, ರವರು ನೀಡಿದ ದೂರಿನಲ್ಲಿ ತಮ್ಮ ಬಾಲ್ಕು ಕೆಎ-03 ಎಂಇ-3842 ಸಂಖ್ಯೆಯ ಮಾರುತಿ 800 ಕಾರನ್ನು ದಿ:26-03-2018 ರಂದು ಪುರಸಭೆ ಬಳಿ ನಿಲ್ಲಿಸಿ, ಹಾಸನಕ್ಕೆ ಹೋಗಿ ವಾಪಸ್ಸು ಬಂದು ನೋಡಲಾಗಿ ಕಾರು ಕಳುವಾಗಿರುತ್ತದೆಂದು ಪತ್ತೆ ಮಾಡಿಕೊಡುವಂತೆ ಬಂದ ದೂರಿನ ಮೇರೆಗೆ ಸಕಲೇಶಪುರ ನಗರ ಠಾಣೆಯಲ್ಲಿ ಕಳವು ಪ್ರಕರಣವನ್ನು ದಾಖಲಿಸಿಕೊಂಡು ಶಾಖೆಯನ್ನು ಕೈಗೊಳ್ಳಲಾಗಿತ್ತು.

ಸಕಲೇಶಪುರ ವೃತ್ತದಲ್ಲಿ 2018ನೇ ಸಾಲಿನಿಂದ 2020ನೇ ಸಾಲಿನವರಗೆ ಹಲವಾರು ವಾಹನಗಳ ಕಳವು ಪ್ರಕರಣಗಳು ವರದಿಯಾಗಿದ್ದು, ಈ ಸಂಬಂಧ ಹಾಸನ ಜಿಲ್ಲಾ ಜೋಲೀಸ್ ಅಧಿಕ್ಷಕರಾದ ಶ್ರೀನಿವಾಸಗೌಡ.ಆರ್.ಐಪಿಎಸ್ ರವರು ಸದರಿ ವಾಹನಗಳನ್ನು ಪತ್ತೆ ಮಾಡುವ ಬಗ್ಗೆ ಹಾಸನ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ನಂದಿನಿ ಅವರ ಮೇಲುಸ್ತುವಾರಿಯಲ್ಲಿ ಹಾಗೂ ಸಕಲೇಶಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಗೋಪಿ ರವರ ಉಸ್ತುವಾರಿಯಲ್ಲಿ ಸಕಲೇಶಪುರ ವೃತ್ತ ನಿರೀಕ್ಷಕರಾದ ಶ್ರೀ ಗಿರೀಶ್ ಮತ್ತು ಸಕಲೇಶಪುರ ನಗರ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜು ಚಿಂಚೋಳಿ ರವರ ನೇತೃತ್ವದಲ್ಲಿ ಸಿಬ್ಬಂದಿಗಳನ್ನು ಒಳಗೊಂಡಂತೆ ವಿಶೇಷ ತಂಡವನ್ನು ರಚಿಸಲಾಗಿತ್ತು.

ಸದರಿ ವಿಶೇಷ ತಂಡವು ಆರೋಪಿಗಳ ಪತ್ತೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿರುವಾಗ ದಿನಾಂಕ 31/01/2021 ರಂದು ಸಂಜೆ 4-30 ಗಂಟೆಯ ಸಮಯದಲ್ಲಿ ಸಕಲೇಶಪುರ ವೃತ್ತ ನಿರೀಕ್ಷಕರಾದ ಶ್ರೀ ಗಿರೀಶ್ ರವರ ನೇತೃತ್ವದ ತಂಡವು ಬಾಳ್ಳುಪೇಟೆಯಲ್ಲಿ ವಾಹನವನ್ನು ತಪಾಸಣೆ ಮಾಡುತ್ತಿರುವಾಗ ಹಾಸನದ ಕಡೆಯಿಂದ ಮಂಗಳೂರು ಕಡೆಗೆ ಹೋಗಲು ಮಾರುತಿ 800 ಕಾರು ನಂಬರ್ ಪ್ಲೇಟ್ ಇಲ್ಲದೇ ಬರುತ್ತಿರುವುದನ್ನು ಗಮನಿಸಿ ಸದರಿ ವಾಹನವನ್ನು ತಡೆದು ನಿಲ್ಲಿಸಿದಾಗ ವಾಹನದ ದಾಖಲಾತಿಯನ್ನು ಹಾಜರುಪಡಿಸುವಂತೆ ಸೂಚಿಸಿದ್ದು, ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ವಾಹನದ ದಾಖಲಾತಿಯನ್ನು ಹಾಜರುಪಡಿಸಲು ವಿಫಲವಾಗಿದ್ದು, ವಾಹನದಲ್ಲಿದ್ದ ಮೊಯ್ದು ಕುನ್ನಿ @ ಆರೀಫ್ ಮತ್ತು ಮಹಮ್ಮದ್ ರಫೀಕ್ @ ರಫೀ ರವರನ್ನು ಸಕಲೇಶಪುರ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ವಿಚಾರಣೆಗೆ ಒಳಪಡಿಸಲಾಯಿತು.

ಆರೋಪಿತರಾದವಿ-1 ಮೊಯ್ತು ಕುನ್ನಿ (@ ಆರೀಫ್ ಮತ್ತು ಎ-2ಮಹಮ್ಮದ್ ರಫೀಕ್ @ ರಫೀ ರವರುಗಳು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಹಾಸನ, ಹೊಳೇನರಸೀಪುರ ಹಾಗೂ ಯಾತ್ರಾಸ್ಥಳವಾದ ಕುಕ್ಕೆಸುಬ್ರಹ್ಮಣ್ಯದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದಂತಹ ಮಾರುತಿ ವ್ಯಾನ್, ಕಾರು ಹಾಗೂ ಬೋಲೇರೋ ವಾಹನಗಳು ಸೇರಿದ್ದಂತೆ ಇತರೆ ವಾಹನಗಳನ್ನು ನಕಲಿ ಕೀ ಗಳನ್ನು ಬಳಸಿ ಕಳವು ಮಾಡಿ ಸದರಿ ವಾಹನಗಳನ್ನು ಈ ಪ್ರಕರಣದ ಮತ್ತೊಬ್ಬ ಆರೋಪಿ-3 ಅಫೋಜ್ ಖಾನ್ ರವರ ಮುಖೇನ ಇತರೆ ಗುಜರಿ ಅಂಗಡಿಗಳಲ್ಲಿ ಇರುತ್ತಿದ್ದಂತಹ ಅಪಘಾತದಲ್ಲಿ ಸಂಪೂರ್ಣ ಜಖಂಗೊಂಡ ವಾಹನಗಳ ಚಾರ್ಸಿ ನಂಬರ್ /ಇಂಜಿನ್ ನಂಬರ್ಗಳ ಸಹಿತವಾಗಿ ವಾಹನಗಳನ್ನು ಮಾರಾಟ ಮಾಡಲು ವಾಹನಗಳ ಮಾಲೀಕರು ನೀಡುತ್ತಿದ್ದಂತಹ ವಾಹನ ವರ್ಗಾವಣೆಗೆ ಸಂಬಂಧಿಸಿದಫಾರಂ ನಂ. 29 & 30 ಗಳನ್ನು ಸಂಗ್ರಹಿಸಿ, ಸದರಿ ಇಂಜಿನ್ / ಚಾರ್ಸಿ ನಂಬರ್ಗಳನ್ನು ಕಳವು ಮಾಡಿದ ವಾಹನಗಳಿಗೆ ಪಂಚಿಂಗ್ ಮಾಡಿ, ವಾಹನಗಳಿಗೆ ವಿಮೆಯನ್ನು ಪಾವತಿಸಿ, ನೋಂದಣಿಗೊಂಡ ಆರ್.ಟಿ.ಓ ಕಛೇರಿಯ ಮೂಲಕ ಆರೋಪಿ-4) ಖಾದರ್ ಶರೀಫ್ 5)ಸೈಯದ್ ಅಜ್ಜಲ್, ಮತ್ತು 6)ಮಹಮದ್ ಮುಬಾರಕ್ ರವರ ಮೂಲಕ ಮಾರಾಟ ಮಾಡುತ್ತಿರುವುದಾಗಿ ಆರೋಪಿಗಳ ವಿಚಾರಣೆಯಿಂದ ತಿಳಿದು ಬಂದಿರುತ್ತದೆ.

ಬಂಧಿತರಿಂದ ಒಟ್ಟು 20 ವಾಹನಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಇವುಗಳ ಮೌಲ್ಯ ಸುಮಾರು 44 ಲಕ್ಷ ರೂಪಾಯಿಗಳು ಆಗಿರುತ್ತದೆ.

ವಾಹನಗಳನ್ನು ಕಳವು ಮಾಡಿ, ನಕಲಿ ನಂಬರ್ ಪ್ಲೇಟು, ಚಾರ್ಸಿ ನಂಬರ್ ಮತ್ತು ಇಂಜಿನ್ ನಂಬರ್ಗಳನ್ನು ಮಾಡಿಸಿ, ಮಾರಾಟ ಮಾಡುತ್ತಾ ವಂಚನೆ ಮಾಡುತ್ತಿದ್ದಂತಹ ಕಂಡವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಗೋಪಿ. ಬಿ.ಆರ್, ಡಿವೈಎಸ್ಪಿ, ಸಕಲೇಶಪುರ ಉಪ ವಿಭಾಗ, ಗಿರೀಶ್, ಬಿ, ಸಿಪಿಯು, ಸಕಲೇಶಪುರ ವೃತ್ತ ಮತ್ತು ಪಿಎಸ್ಯೆ, ರವರಾದ ಬಸವರಾಜ ಚಿಂಚೋಳಿ, ಸಕಲೇಶಪುರ ನಗರ ಶಾಕ, ಏಕೆಂದ್ರಶೇಖರ್ ಕೆ.ಎಸ್. ಸಕಲೇಶಪುರ ಗ್ರಾಮಾಂತರ ಠಾಣೆ ಹಾಗೂ ಸಿಬ್ಬಂದಿಗಳಾದ ನಾಗರಾಜ್, ಲೋಕೇಶ್, ಸತೀಶ್ ವಿಕೆ, ಸುನಿಲ್ ಸೃಷ್ಟಿ, ಹೇಮಂತ್ ಕುಮಾರ್, ಪೀರ್ಖಾನ್, ಹರೀಶ್ ಎಸ್.ಕೆ. ಮಧು ಮತ್ತು ಚಾಲಕರಾದ ಅಶೋಕ, ಮಧು, ಶಬ್ದುಲ್ ರಹಮಾನ್ ಅವರ ಕಾರ್ಯ ವನ್ನು ಮುಚ್ಚಿ ಪ್ರಶಂಶಿಸಿರುತ್ತಾರೆ.

 


Spread the love