
ಕುಡಿದ ನಶೆಯಲ್ಲಿ ಬ್ಲೇಡಿನಿಂದ ಕೊಯ್ದುಕೊಂಡು ಮಹಿಳೆ ಆತ್ಮಹತ್ಯೆ
ಉಡುಪಿ: ಕುಡಿದ ನಶೆಯಲ್ಲಿ ಮಹಿಳೆಯೋರ್ವರು ಬ್ಲೇಡಿನಿಂದ ಕೊಯ್ದುಕೊಂಡು ವಿಪರೀತ ರಕ್ತಸ್ರಾವದಿಂದ ಮೃತಪಟ್ಟ ಘಟನೆ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟಕಲ್ ಅರಸಿಕಟ್ಟೆಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಬಂಟಕಲ್ಲು ಅರಸಿಕಟ್ಟೆ ನಿವಾಸಿ ರಮೇಶ್ ಅವರ ಪತ್ನಿ ಪ್ರೇಮಾ (38) ಎಂದು ಗುರುತಿಸಲಾಗಿದೆ.
ಮೃತ ಪ್ರೇಮಾ ಅವರು ಅಕ್ಟೋಬರ್ 25ರಂದು ವಿಪರೀತ ಕುಡಿದು ಮನೆಯಲ್ಲಿ ಗಲಾಟೆ ಮಾಡಿದ್ದು ನಂತರ ಮನೆಯಲ್ಲಿ ಮಲಗಿದ್ದು ರಾತ್ರಿ ಪತಿ ರಮೇಶ್ ಅವರು ಊಟ ಮಾಡಿ ಮಲಗಲು ತಿಳಿಸಿದಾಗ ಕೋಪಗೊಂಡು ಮನೆಯ ಕೋಣೆಯ ಬಾಗಿಲನ್ನು ಹಾಕಿದ್ದು ನಂತರ ಮನೆಯವರು ಬಾಗಿಲನ್ನು ತೆರೆಯುವಂತೆ ಹೇಳಿದಾಗ ನಶೆಯಲ್ಲಿದ್ದ ಪ್ರೇಮಾರವರು ಅಲ್ಲಿಯೇ ಇದ್ದ ಒಂದು ಬ್ಲೇಡಿನಲ್ಲಿ ಕೊಯ್ದಕೊಂಡಿದ್ದು ಇದರಿಂದ ವಿಪರೀತ ರಕ್ತಸ್ರಾವ ಆಗಿರುತ್ತದೆ. ನಂತರ ಮನೆಯವರು ಚಿಕಿತ್ಸೆಗಾಗಿ ಪ್ರೇಮಾರನ್ನು ಉಡುಪಿ ಸರಕಾರಿ ಆಸ್ಪತ್ರೆಗೆ ಕರೆತಂದ ವೇಳೆ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.