Home Mangalorean News Kannada News ಕುಡ್ಪಾಡಿ ರೈಲ್ವೆ ಅಂಡರ್ ಪಾಸ್- ದಾರಿದೀಪ ವ್ಯವಸ್ಥೆಗೊಳಿಸಲು ಶಾಸಕ ಕಾಮತ್ ಸೂಚನೆ

ಕುಡ್ಪಾಡಿ ರೈಲ್ವೆ ಅಂಡರ್ ಪಾಸ್- ದಾರಿದೀಪ ವ್ಯವಸ್ಥೆಗೊಳಿಸಲು ಶಾಸಕ ಕಾಮತ್ ಸೂಚನೆ

Spread the love

ಕುಡ್ಪಾಡಿ ರೈಲ್ವೆ ಅಂಡರ್ ಪಾಸ್- ದಾರಿದೀಪ ವ್ಯವಸ್ಥೆಗೊಳಿಸಲು ಶಾಸಕ ಕಾಮತ್ ಸೂಚನೆ

ಮಂಗಳೂರು ನಗರದ ಕುಡ್ಪಾಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರೈಲ್ವೆ ಅಂಡರ್ ಪಾಸ್ ಗೆ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿ ಪರಿಶೀಲಿಸಿದರು. ಈ ಅಂಡರ್ ಪಾಸ್ ಕಾಮಗಾರಿ ಬಹುತೇಕ ಮುಗಿದಿದ್ದರೂ, ದಾರಿದೀಪವನ್ನು ಅಳವಡಿಸದೇ ಇರುವುದರಿಂದ ಸ್ಥಳೀಯ ನಾಗರಿಕರಿಗೆ ಆಗುತ್ತಿರುವ ಅನಾನುಕೂಲತೆಯ ಬಗ್ಗೆ ಶಾಸಕರ ಗಮನಕ್ಕೆ ತಂದಾಗ ಶೀಘ್ರದಲ್ಲಿ ದಾರಿದೀಪ ಅಳವಡಿಸುವಂತೆ ನಗರಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಲ್ಲದೇ ಈ ಅಂಡರ್ ಪಾಸ್ ನಿಂದ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಹೋಗುವ ದಾರಿ ಡಾಮರೀಕರಣಗೊಳ್ಳದೇ ಅವ್ಯವಸ್ಥೆಗೊಂಡಿರುವುದರಿಂದ ಈ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಿ ನಾಗರಿಕರಿಗೆ ಉತ್ತಮ ರಸ್ತೆಯ ವ್ಯವಸ್ಥೆಯನ್ನು ಕಲ್ಪಿಸುವಂತೆ ರೈಲ್ವೆ ಹಾಗೂ ನಗರಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಈ ಪ್ರದೇಶದ ನಾಗರಿಕರು ಇತರೆ ಅವ್ಯವಸ್ಥೆಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಜಪ್ಪು ವಾರ್ಡಿನ ಬಿಜೆಪಿ ಅಧ್ಯಕ್ಷ ಭರತ್ ಕುಮಾರ್ ಎಸ್, ಪುಷ್ಪರಾಜ್ ಶೆಟ್ಟಿ, ಪುಂಡಲೀಕ ಸುವರ್ಣ, ನವೀನ್ ಶೆಟ್ಟಿ, ಮೋಹನ್, ವಿಜೇಶ್, ತಿಲಕರಾಜ್, ಶಿವಾನಂದ ರೈ, ಜನಾರ್ಧನ, ಕಾರ್ತಿಕ್, ಜಯರಾಜ್ ಉಪಸ್ಥಿತರಿದ್ದರು .


Spread the love

Exit mobile version