Home Mangalorean News Kannada News ಕುಡ್ಲ ಎಂಟರ್ಟೈನರ್ಸ್ ನಿರ್ಮಾಣದ ಕಿರುಚಿತ್ರ “ದಿ ರಿವೇಂಜ್” ಬಿಡುಗಡೆ

ಕುಡ್ಲ ಎಂಟರ್ಟೈನರ್ಸ್ ನಿರ್ಮಾಣದ ಕಿರುಚಿತ್ರ “ದಿ ರಿವೇಂಜ್” ಬಿಡುಗಡೆ

Spread the love

ಕುಡ್ಲ ಎಂಟರ್ಟೈನರ್ಸ್ ನಿರ್ಮಾಣದ ಕಿರುಚಿತ್ರ “ದಿ ರಿವೇಂಜ್” ಬಿಡುಗಡೆ

ಮಂಗಳೂರು: ಚಲನಚಿತ್ರಗಳಿಗೆ ಸಬ್ಸಿಡಿ ನೀಡುವಂತೆ ಕಿರುಚಿತ್ರಗಳಿಗೂ ರಾಜ್ಯ ಸರ್ಕಾರ ಸಬ್ಸಿಡಿ ನೀಡಬೇಕೆಂದು ರಂಗಭೂಮಿ ಹಿರಿಯ ನಟ ಹಾಗೂ ನಿರ್ಮಾಪಕ ಸಂಜೀವ ದಂಡಕೇರಿ ಆಗ್ರಹಿಸಿದರು.

ಕುಡ್ಲ ಎಂಟರ್ಟೈನರ್ಸ್ ನಿರ್ಮಾಣದ ಕಿರುಚಿತ್ರ “ದಿ ರಿವೇಂಜ್” ಮಂಗಳೂರಿನ ಪುರಭವನದಲ್ಲಿ ಬಿಡುಗಡೆಯ ಸಭಾ ಕಾರ್ಯಕ್ರಮವನ್ನು ಅವ್ರು ಉದ್ಘಾಟಿಸಿದರು.ನಂತರ ಮಾತನಾಡಿದ ಅವ್ರು ದಿ ರಿವೆಂಜ್ ಕಿರುಚಿತ್ರ ಅದ್ಬುತವಾಗಿ ಮೂಡಿಬಂದಿದೆ ಕಿರುಚಿತ್ರಗಳಿಗೂ ರಾಜ್ಯ ಸರ್ಕಾರ ಸಬ್ಸಿಡಿ ನೀಡುವುದರಿಂದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದರು.

ಚಿತ್ರ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ, ಕಿರುಚಿತ್ರದಿಂದಾಗಿ ಹೊಸ ಹೊಸ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯ, ಇದರಿಂದಾಗಿ ಸಿನಿಮಾಕ್ಷೇತ್ರಕ್ಕೂ ಹೊಸ ಪ್ರತಿಭೆಗಳು ಬರಲು ಸಾಧ್ಯ ಎಂದು ಅವರು ಹೇಳಿದರು.

ಮ್ಯಾಂಡಿ ಮಂಜುನಾಥ್ ನಿರ್ದೇಶನದಲ್ಲಿ ಮೂಡಿಬಂದ ಕಿರುಚಿತ್ರ ಅದ್ಭುತವಾಗಿ ತಯಾರಾಗಿದ್ದು ಮುಂದೆ ಪೂರ್ಣ ರೀತಿಯ ಚಿತ್ರವಾಗಿ ಮೂಡಿಬರಲಿ ಅಂತಾ ಚಿತ್ರರಂಗದ ಗಣ್ಯರು ಹಾರೈಸಿದರು.

ಹಿರಿಯ ನಟ ಹಾಗೂ ರಂಗಭೂಮಿ ಕಲಾವಿದ ವಿ.ಜಿ.ಪಾಲ್ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್,ತುಳು ಚಿತ್ರ ನಿರ್ಮಾಪಕ ಲಯನ್ ಕಿಶೋರ್ ಡಿ.ಶೆಟ್ಟಿ, ಚಿತ್ರನಿರ್ಮಾಪಕ ಹಾಗೂ ಉದ್ಯಮಿ ಮುಖೇಶ್ ಹೆಗ್ಡೆ, ಉದ್ಯಮಿ ಮೋಹನ್ ಅಮೀನ್, ವಿ೪ ನ್ಯೂಸ್ ಆಡಳಿತ ನಿರ್ದೇಶಕ ಲಕ್ಷ್ಮಣ್ ಕುಂದರ್, ಉದ್ಯಮಿ ಕೃಷ್ಣ ಕೋಟ್ಯಾನ್, ಐಒಸಿಎಲ್ ನ ಸುಂದರ್, ನಿರ್ಮಾಪಕ ರಾಜೇಶ್ ಬ್ರಹ್ಮಾವರ, ನಿರ್ಮಾಪಕ ಸಚಿನ್ ಎಸ್. ಉಪ್ಪಿನಂಗಡಿ ಮತ್ತಿತರು ಉಪಸ್ಥಿತರಿದ್ದರು.

  ಅರ್ಜುನ್ ಕಾಪಿಕಾಡ್ , ರೂಪೇಶ್,  ಸೌಜನ್ಯ ಹೆಗ್ಡೆ, ರಾಮದಾಸ್, ಆರ್ .ಜೆ. ಅನುರಾಗ್ , ವಿ.ಜೆ.ವಿನೀತ್,ವಿ.ಜೆ.ದೀಕ್ಷಿತ್ ಶೆಟ್ಟಿ, ವಿ.ಜೆ.ದೇವ್ , ಪ್ರಶಾಂತ್, ವಿ.ಜೆ.ಪೂರ್ವಿ, ಅದ್ವಿಕಾ ಶೆಟ್ಟಿ ಹೀಗೆ ಹಲವು ಮಂದಿ ಭಾಗವಹಿಸಿದರು.

  ಕಿರುಚಿತ್ರ ವೀಕ್ಷಿಸಿದ ಬಳಿಕ ನಿರ್ಮಾಪಕ ರಾಜೇಶ್ ಬ್ರಹ್ಮಾವರ, ಕಿರುಚಿತ್ರವು ಅದ್ಬುತವಾಗಿ ಮೂಡಿ ಬಂದಿದೆ.ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬ್ರಹ್ಮಾವರ ಮೂವಿಸ್ ಬ್ಯಾನರ್ ನಡಿ ಮ್ಯಾಂಡಿ ಮಂಜು ಅವರಿಗೆ ತುಳು ಚಿತ್ರದಲ್ಲಿ ನಿರ್ದೇಶಕ  ಅವಕಾಶ ನೀಡುತ್ತೇನೆ ಎಂದು ಭರವಸೆ ನೀಡಿದರು.

ಕನ್ನಡ ಚಿತ್ರಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ಮ್ಯಾಂಡಿ ಮಂಜು , ಕ್ಯಾಮರಾ ಜೊತೆಗೆ  ಕೆಲಸ ನಿರ್ವಹಿಸಿರುವ ಅವಿನಾಶ್ ಮೊದಲ ಪ್ರಯತ್ನ ದಲ್ಲಿಯೇ ಅದ್ಭುತವಾಗಿ ಕೈಚಳಕ ತೋರಿಸಿದ್ದಾರೆ ಅನ್ನೋದು ಇನ್ನು ಕೆಲವರ ಬಣ್ಣನೆಯಾಗಿತ್ತು. ನಿರ್ಮಾಣ ತಂಡ, ಮುಂದೆ ಯಾವ ರೀತಿ ಚಿತ್ರವನ್ನು ಜನರಿಗೆ ಹತ್ತಿರವಾಗಿಸುತ್ತಾರೆ ಅನ್ನೋದು ಇನ್ನೂ ಗೊತ್ತಾಗಿಲ್ಲ.


Spread the love

Exit mobile version