Home Mangalorean News Kannada News ಕುಮಾರ ಬಂಗಾರಪ್ಪ ನನ್ನ ವಿರುದ್ದ ಮಾಡಿರುವ ವೈಯುಕ್ತಿ ಟೀಕೆ ಅವರ ನೈತಿಕತೆ ತೋರಿಸುತ್ತದೆ; ಕುಮಾರಸ್ವಾಮಿ

ಕುಮಾರ ಬಂಗಾರಪ್ಪ ನನ್ನ ವಿರುದ್ದ ಮಾಡಿರುವ ವೈಯುಕ್ತಿ ಟೀಕೆ ಅವರ ನೈತಿಕತೆ ತೋರಿಸುತ್ತದೆ; ಕುಮಾರಸ್ವಾಮಿ

Spread the love

ಕುಮಾರ ಬಂಗಾರಪ್ಪ ನನ್ನ ವಿರುದ್ದ ಮಾಡಿರುವ ವೈಯುಕ್ತಿ ಟೀಕೆ ಅವರ ನೈತಿಕತೆ ತೋರಿಸುತ್ತದೆ; ಕುಮಾರಸ್ವಾಮಿ

ಕುಂದಾಪುರ: ಬಂಗಾರಪ್ಪನವರ ಹೆಸರು ದುರುಪಯೋಗಪಡಿಸಿಕೊಂಡು ಮತ ಕೇಳುವ ಅವಶ್ಯಕತೆ ನಮಗಿಲ್ಲ. ಕುಮಾರಬಂಗಾರಪ್ಪನವರೂ ಬಂಗಾರಪ್ಪನವರ ಸಾಧನೆಗಳನ್ನು ಹೇಳಿ ಪ್ರಚಾರ ನಡೆಸಲಿ. ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಮಧು ಬಂಗಾರಪ್ಪನವರು ಸೊರಬದಲ್ಲಿ ಬಂಗಾರಪ್ಪನವರ ಸ್ಮಾರಕ ನಿರ್ಮಿಸುವ ಸಂಬಂಧ ಈಗಾಗಲೇ ಕೆಲಸ ಪ್ರಾರಂಭಿಸಿದ್ದಾರೆ. ಆದರೆ ಕುಮಾರ್ ಬಂಗಾರಪ್ಪನವರ ಕೊಡುಗೆ ಏನು ಎಂದು ಅವರು ಹೇಳಲಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ತ್ರಾಸಿಯ ಕೊಂಕಣಿ ಖಾರ್ವಿ ಸಮಾಜ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಸಾಧನೆಯನ್ನು ಮುಂದಿಟ್ಟುಕೊಂಡು ಬಂಗಾರಪ್ಪನವರ ಹೆಸರನ್ನು ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ ಎಂದು ಶಾಸಕ ಕುಮಾರ ಬಂಗಾರಪ್ಪನವರ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದರು.

ಕುಮಾರಬಂಗಾರಪ್ಪನವರ ಮೀ-ಟೂ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಕುಮಾರಸ್ವಾಮಿ ವೈಯಕ್ತಿಕ ಟೀಕೆಗಳಿಗೆ ನಾನು ಪ್ರತಿಕ್ರಿಯೆ ನೀಡುದಿಲ್ಲ. ಇದು ಅವರ ನೈತಿಕತೆಯನ್ನು ನಡವಳಿಕೆಯನ್ನು ತೋರಿಸುತ್ತದೆ ಎಂದು ಆರೋಪಕ್ಕೆ ತಿರುಗೇಟು ನೀಡಿದರು.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ವೀರಪ್ಪ ಮೊಯ್ಲಿ ಸಹಿತ ಅನೇಕ ಕಾಂಗ್ರೆಸ್ ನಾಯಕರು ಮತಯಾಚನೆ ನಡೆಸುತ್ತಿದ್ದು ಬಹುಮತದಿಂದ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುವ ವಿಶ್ವಾಸವಿದೆ.

ಈ ಬಾರಿ ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದ್ದು ಎಲ್ಲಾ ಕಡೆಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಗಳಿಗೆ ಜನರು ಬೆಂಬಲ ವ್ಯಕ್ತಪಡಿಸುತ್ತಿದ್ದು ಮೈತ್ರಿಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯನವರ ಮಗನ ಸಾವಿಗೆ ನನ್ನ ಕುಟುಂಬದ ಕಣ್ಣೀರು ಕಾರಣ ಎಂಬ ಜನಾರ್ದನ ರೆಡ್ಡಿ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಕುಮಾರಸ್ವಾಮಿ, ಈ ಹೇಳಿಕೆ ಜನಾರ್ದನ ರೆಡ್ಡಿಯವರ ಸಣ್ಣತನ ತೋರಿಸುತ್ತದೆ ಎಂದರು.

ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ವಿಧಾನಪರಿಷತ್ ಸದಸ್ಯ ಭೋಜೇಗೌಡ ಮತ್ತಿತರರು ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಚಿತ್ರಗಳು: ಪ್ರಸನ್ನ ಕೊಡವೂರು


Spread the love

Exit mobile version