ಕುಶಾಲನಗರದ ಬಳಿ ತಿಮಿಂಗಿಲದ ವಾಂತಿ ವಶ

Spread the love

ಕುಶಾಲನಗರದ ಬಳಿ ತಿಮಿಂಗಿಲದ ವಾಂತಿ ವಶ

ಮೈಸೂರು: ತಿಮಿಂಗಿಲ ಆಂಬಗ್ರಿಸ್ ನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿ ಮಾರಾಟ ಮಾಡಲು ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಕುಶಾಲನಗರದ ಬಳಿ ಮೈಸೂರು ಅರಣ್ಯ ಸಂಚಾರಿ ದಳದ ಅಧಿಕಾರಿ ತಂಡ ಬಂಧಿಸಿದೆ.

ಕೊಡಗು ಮೂಲದ ಕೆ.ಎ.ಇಬ್ರಾಹಿಂ, ಬಿ.ಇ. ರಫಿಕ್, ತಾಹಿರ್ ನಕಾಶ್ ಕೇರಳ ಮೂಲದ ಕೆ.ಎಂ ಜಾರ್ಜ್ ಬಂಧಿತ ಆರೋಪಿಗಳು. ಬಂಧಿತರಿಂದ 8.250 ಕೆಜಿಯಷ್ಟು ತಿಮಿಂಗಿಲದ ವಾಂತಿ, ಕೃತ್ಯಕ್ಕೆ ಬಳಸಿದ್ದ ವ್ಯಾಗನಾರ್ ಕಾರ್ ಸೇರಿದಂತೆ 3 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಿಮಿಂಗಿಲದ ವಾಂತಿ ಎಂಬುದು ತಿಮಿಂಗಲದಿಂದ ಪಡೆದ ಘನ ಮೇಣದ ವಾಸನೆಯ ವಸ್ತುವಾಗಿದ್ದು ಅದನ್ನು ಸುಗಂಧ ದ್ರವ್ಯ ಹಾಗೂ ಔಷಧಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ತಿಮಿಂಗಿಲ ಜೀರ್ಣವಾಗದ ವಸ್ತುಗಳನ್ನು ಸುದೀರ್ಘ ಕಾಲದ ನಂತರ ವಾಂತಿ ಮಾಡಿದಾಗ ನೀರಿನಲ್ಲಿ ಮೇಣದಂತೆ ತೇಲುತ್ತದೆ ಇದಕ್ಕೆ ಅರಬ್, ಚೀನಾ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳ ಕಾಳಸಂತೆಯಲ್ಲಿ ಬಹು ಬೇಡಿಕೆ ಇದೆ.

ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮನೋಹರ ಸುವರ್ಣ, ವಲಯ ಅರಣ್ಯಾಧಿಕಾರಿ ವಿವೇಕ್, ಉಪ ವಲಯ ಅರಣ್ಯಾಧಿಕಾರಿಗಳಾದ ಲಕ್ಷ್ಮೀಶ, ಸುಂದರ್ ಬಿ.ಎನ್, ವಿನೋದ್ ಕುಮಾರ್ ಡಿ.ಎಂ, ಪ್ರಮೋದ್, ನಾಗರಾಜು, ಸ್ನೇಹ ಟಿ.ಸಿ. ಭಾಗವಹಿಸಿದ್ದರು.


Spread the love