ಕೂಡ್ಲೂರು ಶಾಲಾ ಮಕ್ಕಳಿಂದ ಭತ್ತದ ನಾಟಿ

Spread the love

ಕೂಡ್ಲೂರು ಶಾಲಾ ಮಕ್ಕಳಿಂದ ಭತ್ತದ ನಾಟಿ

ಕುಶಾಲನಗರ: ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಭತ್ತದ ಸಸಿಗಳನ್ನು ಕಿತ್ತು, ಕೆಸರು ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಗಮನಸೆಳೆದರಲ್ಲದೆ, ಆ ಮೂಲಕ ಮಕ್ಕಳಿಗೆ ಕೃಷಿ ಬಗ್ಗೆ ಅರಿವು ಮೂಡಿಸುವಲ್ಲಿ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಯಶಸ್ವಿಯಾದರು.

ಕೂಡ್ಲೂರು ಗ್ರಾಮದ ಪ್ರಗತಿಪರ ಕೃಷಿಕರಾದ ಕೆ.ಎಸ್.ರಾಜಾಚಾರಿ ಅವರ ಭತ್ತದ ಗದ್ದೆಯಲ್ಲಿ ನಡೆದ ಈ ನಾಟಿ ಕಾರ್ಯ ಎಲ್ಲರ ಗಮನಸೆಳೆಯಿತು. ಶಾಲೆಯ ಇಕೋ ಕ್ಲಬ್, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಘಟಕ ಎಸ್.ಡಿ.ಎಂ.ಸಿ.ಹಾಗೂ ವಿದ್ಯಾರ್ಥಿ ಸಂಘದ ಸಂಯುಕ್ತಾಶ್ರಯದಲ್ಲಿ ನಾಟಿಯನ್ನು ವಿದ್ಯಾರ್ಥಿಗಳು ಮಾಡಿ ಖುಷಿಪಟ್ಟರು.

ಸುಮಾರು 80ಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಸಮವಸ್ತ್ರದಲ್ಲಿಯೇ ಬಂದು ನಾಟಿ ಕಾರ್ಯದಲ್ಲಿ ಪಾಲ್ಗೊಂಡು, ಭತ್ತದ ಬೆಳೆ ಕ್ಲಿಷ್ಟ ಎಂದು ಕೈಬಿಟ್ಟಿರುವ ರೈತರು ನಾಚುವಂತೆ ನಾಟಿ ಮಾಡಿದರು. ವಿವಿಧ ಗುಂಪುಗಳನ್ನಾಗಿ ಮಾಡಿ ಕೊಂಡು ಸಸಿ ಮಡಿಗಳಿಗೆ ಇಳಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್

ಹಾಗೂ ಮಕ್ಕಳು ಸಸಿ ಕಿತ್ತು ಕಂತೆ ಕಟ್ಟಿದರು. 50 ಕ್ಕೂ ಹೆಚ್ಚು ಮಕ್ಕಳು ನಾಟಿಗಾಗಿ ಸಿದ್ಧವಾಗಿದ್ದ ಭತ್ತದ ಗದ್ದೆಗೆ ಇಳಿದು ಸಸಿಗಳನ್ನು ನೆಟ್ಟು ಮಂದಹಾಸ ಬೀರಿದರು.


Spread the love