ಕೃಷಿ ಇಲಾಖೆ ಶತಮಾನೋತ್ಸವದ ಸಂಗಮ ಸಭಾಂಗಣ ಉದ್ಘಾಟನೆ

Spread the love

ಕೃಷಿ ಇಲಾಖೆ ಶತಮಾನೋತ್ಸವದ ಸಂಗಮ ಸಭಾಂಗಣ ಉದ್ಘಾಟನೆ

ಬೆಂಗಳೂರು: ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ಕೃಷಿ ಆಯುಕ್ತಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶತಮಾನೋತ್ಸವದ “ಸಂಗಮ ಸಭಾಂಗಣ” ಕಟ್ಟಡವನ್ನು ಕೃಷಿ ಸಚಿವ ಬಿ.ಸಿ. ಪಾಟಿಲ್ ಉದ್ಘಾಟಿಸಿದರು.

ಸಂಗಮ ಸಭಾಂಗಣವನ್ನು 9000 ಚದರ ಅಡಿಗಳ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದ್ದು, ಸುಮಾರು 250 ಅಸನಗಳು ಹಾಗೂ ಸುಸರ್ಜಿತ ಅಧುನಿಕ ವ್ಯವಸ್ಥೆಯುಳ್ಳ ಸಭಾಂಗಣ ಒಳಗೊಂಡಿದೆ. ಕಾರ್ಯಕ್ರಮದ ಭಾಗವಾಗಿ ಕೃಷಿ ಆಯುಕ್ತಾಲಯದ ಆವರಣದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಕೃಷಿ ಚಟುವಟಿಕೆಗಳನ್ನು ಬಿಂಬಿಸುವಂತಹ ಕಲಾಕೃತಿಗಳನ್ನೊಳಗೊಂಡ ಹಸಿರು ವನವನ್ನು ಮತ್ತು ರಾಜ್ಯದ ಜಿಲ್ಲಾ, ವಿಭಾಗ, ತಾಲ್ಲೂಕು ಮಟ್ಟದಲ್ಲಿ ಕೃಷಿ ಇಲಾಖಾ ಅಧಿಕಾರಿಗಳಿಗೆ ಕ್ಷೇತ್ರ ಭೇಟಿ ನೀಡಿ, ಕೃಷಿ ವಿಸ್ತರಣೆ ಕಾರ್ಯಗಳಿಗೆ ಅನುಕೂಲವಾಗಲು 100 ವಾಹನಗಳನ್ನು ಸಚಿವರು ಲೋಕಾರ್ಪಣೆ ಮಾಡಿದರು.

ರೈತರಿಗೆ ಸೂಕ್ತ ತಾಂತ್ರಿಕ ಸಲಹೆಗಳನ್ನು ನೀಡಲು ಅನುಕೂಲವಾಗುವಂತೆ, ಕರ್ನಾಟಕ ಕೃಷಿ ಪದವೀಧರ ಅಧಿಕಾರಿಗಳ ಸಂಘದ ವತಿಯಿಂದ ಸಿದ್ಧಪಡಿಸಲಾದ – ಕೃಷಿ ಕೈಪಿಡಿ-2023 ಯನ್ನು ಬಿಡುಗಡೆ ಗೊಳಿಸಿದರು.

ಉದ್ಘಾಟನೆಯ ನಂತರ ಕೃಷಿ ಹಾಗೂ ಜಲಾನಯನ ಅಭಿವೃದ್ಧಿ ಇಲಾಖೆಗಳ ಮತ್ತು ಅವುಗಳಡಿ ಬರುವ ವಿವಿಧ ನಿಗಮ ಮಂಡಳಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ಹಾಜರಿದ್ದ ಅಧಿಕಾರಿಗಳೊಂದಿಗೆ ನಡೆಸಲಾಯಿತು.

ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು, ಕೃಷಿ ಆಯುಕ್ತರು, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತರು, ಕೃಷಿ ನಿರ್ದೇಶಕರು, ಜಲಾನಯನ ಅಭಿವೃದ್ಧಿ ಇಲಾಖೆಯ ನಿರ್ದೇಶಕರು, ಅಂತರಗಂಗೆ ಸೂಕ್ಷ್ಮ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಕೇಂದ್ರ ಕಚೇರಿಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಕೃಷಿ ಇಲಾಖೆಯ ಅಡಿಯಲ್ಲಿ ಬರುವ ನಿಗಮ ಮಂಡಳಿ ಹಾಗೂ ಜಾಗೃತ ಕೋಶದ ಮುಖ್ಯಸ್ಥರು, ಹಿರಿಯ ಅಧಿಕಾರಿಗಳು ಹಾಗೂ ಎಲ್ಲಾ ಜಿಲ್ಲೆಗಳ ಜಂಟಿ ಕೃಷಿ ನಿರ್ದೇಶಕರು ಮತ್ತು ಉಪ ಕೃಷಿ ನಿರ್ದೇಶಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here