ಕೃಷಿ ವೈವಿಧ್ಯ ಉಳಿಸಿಕೊಳ್ಳಬೇಕಾಗಿದೆ: ಡಾ.ಎ.ಆರ್.ವಾಸವಿ

Spread the love

ಕೃಷಿ ವೈವಿಧ್ಯ ಉಳಿಸಿಕೊಳ್ಳಬೇಕಾಗಿದೆ: ಡಾ.ಎ.ಆರ್.ವಾಸವಿ

ಮೈಸೂರು: ಪ್ರಸ್ತುತ ಘಟಿಸುತ್ತಿರುವ ಜಾಗತಿಕ ವಾತಾವರಣ ಬದಲಾವಣೆ ಎಲ್ಲ ದೇಶಗಳ ಆಹಾರ ಭದ್ರತೆಗೆ ಸವಾಲನ್ನು ಒಡ್ಡಿದೆ. ಈ ಪರಿಸ್ಥಿತಿಯಲ್ಲಿ ಕೃಷಿ ವೈವಿಧ ಉಳಿಸಿಕೊಳ್ಳುವುದೇ ನಮ್ಮ ಮುಂದಿರುವ ಆಯ್ಕೆ ಎಂದು ಕೃಷಿ ವಿಜ್ಞಾನಿ ಡಾ.ಎ.ಆರ್.ವಾಸವಿ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಘಟಿಕೋತ್ಸವ ಭವನದದಲ್ಲಿ ಆಶಾ (ಅಲಯನ್ಸ್ ಫಾರ್ ಸಸ್ಟೆನಬಲ್ ಅಂಡ್ ಹೊಲಿಸ್ಟಿಕ್ ಅಗ್ರಿಕಲ್ಚರ್) ಕಿಸಾನ್ ಸ್ವರಾಜ್ ಸಂಸ್ಥೆಯಿಂದ ಆಯೋಜಿಸಿರುವ ಮೂರು ದಿನಗಳ ರಾಷ್ಟ್ರಮಟ್ಟದ ಐದನೇ ಕಿಸಾನ್ ಸ್ವರಾಜ್ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸೂಕ್ತ ಮಾರುಕಟ್ಟೆ ವ್ಯವಸ್ಥೆಯ ಕೊರತೆ, ಉತ್ತಮ ಬೆಲೆ ಇಲ್ಲದಿರುವುದು ಹಾಗೂ ಹವಮಾನ ವೈಫರಿತ್ಯದಿಂದ ರೈತರು ನಲುಗಿದ್ದಾರೆ. ರೈತರು ಈ ಎಲ್ಲಾ ಸಮಸ್ಯೆಗಳಿಂದ ಮುಕ್ತರಾಗಬೇಕಾದರೆ ಸಾವಯವ ಮತ್ತು ವೈವಿಧದ ಬೆಳೆ ಪದ್ಧತಿ ಅನುಸರಿಸಬೇಕಿದೆ ಎಂದು ಕಿವಿಮಾತು ಹೇಳಿದರು.

ಬಂಡವಾಳಶಾಹಿ ಪ್ರೇರಿತ ಮಾರುಕಟ್ಟೆ ಆದಾಯ ಕೇಂದ್ರಿತ ಕೃಷಿಗೆ ರೈತರನ್ನು ತಳ್ಳಿದರ ಪರಿಣಾಮ ಈ ಹಿಂದೆ ನಮ್ಮ ದೇಶದಲ್ಲಿದ್ದ ವೈವಿಧದ ಬೆಳೆ ಪದ್ಧತಿ ಮರೆಯಾಗಿ ವಾಣಿಜ್ಯ, ಏಕ ಬೆಳೆ ಕೃಷಿಭೂಮಿಯನ್ನು ಆವರಿಸಿದೆ. ಇದರಿಂದ ಮಣ್ಣು ಸತ್ವ ಕಳೆದುಕೊಂಡಿದೆ. ಜತೆಗೆ ಹಸಿರು ಕ್ರಾಂತಿ ಪಾರಂಪರಿಕ ಕೃಷಿಯನ್ನು ಅವಸಾನಕ್ಕೆ ತಳ್ಳಿದೆ. ಕೃಷಿ ಭೂಮಿಯನ್ನು ರಾಸಾಯನಿಕ ಗೊಬ್ಬರ, ಕೀಟನಾಶಕಗಳು ಹಾಳು ಮಾಡಿವೆ. ರಾಸಾಯನಿಕ, ಕೀಟನಾಶಕ ಬಳಸಿ ರೈತ ಸಮುದಾಯ ಆರಂಭದಲ್ಲಿ ಲಾಭಗಳಿಸಿದರೂ ಕಾಲಾನಂತರ ಹಲವಾರು ತೊಂದರೆಗಳನ್ನು ಎದುರಿಸುತ್ತಿzರೆ ಎಂದು ಹೇಳಿದರು.

ನಮ್ಮ ಕೃಷಿ ಪದ್ಧತಿ, ಮಣ್ಣಿನ ಮತ್ತು ನಮ್ಮ ಆರೋಗ್ಯ, ಪರಿಸರ ಉಳಿಯಬೇಕಾದರೆ ಸಾವಯವ ಕೃಷಿಯತ್ತ ರೈತರು ವಾಲಬೇಕಿದೆ. ಇದರ ನಡುವೆ ಸ್ಥಳೀಯ ಆಹಾರ ಬೆಳೆಗಳನ್ನು ಸಾಂಪ್ರದಾಯಿಕವಾಗಿ ಬೇಸಾಯ ಪ್ರೋತ್ಸಾಹಿಸಲು ಹಲವು ರೈತ ಸೇವಾ ಸಂಘಟನೆಗಳು ತೊಡಗಿಸಿಕೊಂಡಿರುವುದು ಈ ಪೀಳಿಗೆಯ ಭರವಸೆಯಾಗಿದೆ ಎಂದು ತಿಳಿಸಿದರು.

ಆಶಾ ಸಂಸ್ಥೆಯ ರಾಷ್ಟ್ರೀಯ ಸಂಚಾಲಕ ಕಪಿಲ್ ಶಾ ಮಾತನಾಡಿ, 1980ಕ್ಕೂ ಮುಂಚೆಯೇ ಕರ್ನಾಟಕದಲ್ಲಿ ಸಾವಯವ ಕೃಷಿ ಪ್ರವಧಮಾನಕ್ಕೆ ಬಂದಿರುವುದಷ್ಟೇ ಅಲ್ಲದೇ ಇಡೀ ದೇಶಕ್ಕೆ ಸಾವಯವ ಪಾಠಗಳನ್ನು ಹೇಳಿಕೊಟ್ಟಿದೆ. ಜತೆಗೆ ಸಾವಯವ ಕೃಷಿ ನೀತಿಯನ್ನು ಮೊದಲು ಜಾರಿಗೊಳಿಸಿದ್ದು ಕರ್ನಾಟಕ. ದಶಕದ ಪ್ರಯತ್ನದಿಂದ ಇದೀಗ ಸಾವಯವ ನೀತಿಯನ್ನು ಒಂದೊಂದೇ ರಾಜ್ಯ ಅಳವಡಿಸಿಕೊಳ್ಳುತ್ತಿವೆ. ಅದಕ್ಕೆ ಈ ಕೃಷಿ ಪದ್ಧತಿಯನ್ನು ಮತ್ತೆ ಜಾರಿಗೊಳಿಸುವಲ್ಲಿ ನಿರಂತರ ಶ್ರಮಿಸಿದ ಕೃಷಿಕರು, ತಜ್ಞರನ್ನು ಸ್ಮರಿಸಬೇಕು ಎಂದು ಹೇಳಿದರು.

ಸಮ್ಮೇಳನದಲ್ಲಿ ತಮಿಳುನಾಡು, ಕೇರಳ, ಆಂಧ, ಮಹಾರಾಷ್ಟ್ರ, ಗುಜರಾತ್, ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳು ಸೇರಿದಂತೆ 23 ರಾಜ್ಯಗಳ ಎರಡು ಸಾವಿರಕ್ಕೂ ಹೆಚ್ಚು ಸಾವಯವ ಕೃಷಿಕರು, ಕೃಷಿ ವಿಜ್ಞಾನಿಗಳು, ತಂತ್ರಜ್ಞರು ಭಾಗವಹಿಸಿದ್ದರು.


Spread the love

Leave a Reply

Please enter your comment!
Please enter your name here