ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗ ಪೌರ ಕಾರ್ಮಿಕರೊಂದಿಗೆ ದೀಪಾವಳಿ ಆಚರಣೆ

Spread the love

ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗ ಪೌರ ಕಾರ್ಮಿಕರೊಂದಿಗೆ ದೀಪಾವಳಿ ಆಚರಣೆ

ಉಡುಪಿ: ಕೆ. ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗ ಉಡುಪಿ ಜಿಲ್ಲೆ, ಇವರ ವತಿಯಿಂದ ಉಡುಪಿ ನಗರಸಭೆಯ ಇತಿಹಾಸದಲ್ಲಿ 325 ಕ್ಕಿಂತ ಹೆಚ್ಚು ಪೌರಕಾರ್ಮಿಕರಿಗೆ ಹೊಸ ಬಟ್ಟೆ ಹಾಗೂ ಸಿಹಿತಿಂಡಿಯನ್ನು ವಿತರಿಸಿ ಪೌರಕಾರ್ಮಿಕ ರೊಂದಿಗೆ ದೀಪಾವಳಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷರಾದ ಸುಮಿತ್ರಾ ನಾಯಕ್, ಉಪಾಧ್ಯಕ್ಷರಾದ ಲಕ್ಷ್ಮಿ ಮಂಜುನಾಥ್, ಉಡುಪಿ ನಗರಸಭೆಯ ಪೌರಾಯುಕ್ತ ರಾದ ಉದಯಕುಮಾರ,ಆರೋಗ್ಯ ಅಧಿಕಾರಿಗಳಾದ ಕರುಣಾಕರ್ ಹಾಗೂ ಶ್ರೀಮತಿ ಶಶಿರೇಖಾ, ಉಡುಪಿ ನಗರಸಭಾ ಸದಸ್ಯರಾದ   ಅಮೃತಾ ಕೃಷ್ಣಮೂರ್ತಿಯವರು, ಸಮಾಜಸೇವಕರಾದ ಕೆ. ಕೃಷ್ಣಮೂರ್ತಿ ಆಚಾರ್ಯರ, ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷರಾದ ಯುವರಾಜ್ ಪುತ್ತೂರು  ಕೆ. ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗದ ಅಧ್ಯಕ್ಷರಾದ ಚರಣ್ ರಾಜ್ ಬಂಗೇರ, ಎನ್ಎಸ್ ಯು ಐ ನಾ ಜಿಲ್ಲಾಧ್ಯಕ್ಷರಾದ ಸೌರಭ ಬಲ್ಲಾಳ್ , ಟೀಮ್ ಸಹಾರಾದ ಅಧ್ಯಕ್ಷರಾದ ಪ್ರಥಮ್, ಯಶೋಧ ಆಟೋ ಚಾಲಕರ ಮತ್ತು ಮಾಲಕರ ಸಂಘದ ತಾಲೂಕು ಅಧ್ಯಕ್ಷರಾದ ಉದಯ್ , ಹರೀಶ ಅಮೀನ್, ಗಣೇಶ್ ಪರ್ಕಳ,
ಗಣೇಶ್ ಶೇರಿಗಾರ್, ಪ್ರಣಮ್, ಶೈಲೇಶ್ ಪುತ್ತೂರ್,ಸಜ್ಜನ್ ಶೆಟ್ಟಿ, ರಿಹಾನ್ ಶೇಕ್, ಸಿರಾಜ್ ಶೇಕ್, ರಾಹುಲ್ ಬ್ರಿಗೇಡ್ ನಾ ಅಧ್ಯಕ್ಷರಾದ ಮೊಹಮ್ಮದ್ ಜಮೀರ್, ಶ್ರೇಯಸ್ ಪುತ್ರನ್, ಹಾಗೂ ಕೆ ಕೃಷ್ಣಮೂರ್ತಿ ಅಭಿಮಾನಿ ಬಳಗದ ಸರ್ವ ಸದಸ್ಯರು ಮತ್ತು ಉಡುಪಿ ನಗರಸಭೆಯ ಪೌರಕಾರ್ಮಿಕರು ಉಪಸ್ಥಿತರಿದ್ದರು,


Spread the love