
ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಪದಾಧಿಕಾರಿಗಳಿಂದ ಆಸ್ಕರ್ ಆರೋಗ್ಯ ವಿಚಾರಣೆ
ಮಂಗಳೂರು: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಥೊಲಿಕ್ ಸಭಾ ಸ್ಥಾಪಕ ಅಧ್ಯಕ್ಷ ರಾದ, ಮಾಜಿ ಕೇಂದ್ರ ಸಚಿವರು ಹಾಗೂ ರಾಜ್ಯಸಭಾ ಸದಸ್ಯರು, ಕ್ರೈಸ್ತ ಸಮುದಾಯದ ಉನ್ನತ ಜನನಾಯಕರೂ ಆದ ಆಸ್ಕರ್ ಫೆರ್ನಾಂಡಿಸ್ ಅವರ ಆರೋಗ್ಯ ವಿಚಾರಿಸಿದ, ಕಥೊಲಿಕ್ ಸಭಾ, ಮಂಗಳೂರು ಪ್ರದೇಶದ ಆಧ್ಯಾತ್ಮಿಕ ನಿರ್ದೇಶಕರಾದ ಅತೀ ವಂದನೀಯ ಮಾಥ್ಯು ವಾಸ್ ರವರು ಆಸ್ಕರ್ ಫೆರ್ನಾಂಡಿಸ್ ಅವರ ಪತ್ನಿ ಬ್ಲೋಸಂ ಫೆರ್ನಾಂಡಿಸ್ ಹಾಗೂ ಮಕ್ಕಳೊಡನೆ ಆರೋಗ್ಯ ವಿಚಾರಿಸಿ ಚೇತರಿಕೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಅವರು ಮಾತಾನಾಡಿ ನಮ್ಮ ನಾಯಕರಾದ ಆಸ್ಕರ್ ಫೆರ್ನಾಂಡಿಸ್ ರವರ ಆರೋಗ್ಯ ಅತೀ ಬೇಗ ಚೇತರಿಸಿಕೊಳ್ಳಲು ಭಾನುವಾರದ ಬಲಿಪೂಜೆ ಸಂದರ್ಭದಲ್ಲಿ ಎಲ್ಲಾ ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು ಹಾಗೂ ನನ್ನ ಮತ್ತು ಅವರ ಒಡನಾಟ ಹಲವಾರು ವರ್ಷಗಳಿಂದ ಚೆನ್ನಾಗಿ ಇರುವುದರಿಂದ ನಾನು ಆಸ್ಕರ್ ಎಂದು ಕರೆಯುವಾಗ ಅವರು ಸ್ಪಂದಿಸಿದರು. ಕಥೊಲಿಕ್ ಸಭೆಯ 1979 ರಿಂದ 1982ವರೆಗೆ ಸ್ಥಾಪಕ ಅಧ್ಯಕ್ಷರಾಗಿದ್ದು ನಮ್ಮ ಸಂಘಟನೆಯ ಯಾವುದೇ ಕಾರ್ಯಕ್ರಮಕ್ಕೂ ಭಾಗವಹಿಸುತ್ತಿದ್ದರು ಎಂದು ಹೇಳಿದರು.
ಈ ವೇಳೆ ವಂ| ಅಂಡ್ರ್ಯೂ ಲಿಯೊ ಡಿಸೋಜಾ, ಕೆಂದ್ರೀಯ ಅಧ್ಯಕ್ಷರಾದ ಸ್ಟ್ಯಾನಿ ಲೋಬೊ ಹಾಗೂ ಉಪಾಧ್ಯಕ್ಷಾರಾದ ಸ್ಟೀವನ್ ರೊಡ್ರಿಗಸ್ರವರು ಉಪಸ್ಥಿತರಿದ್ದರು.