ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ   ಕರುಣಾಲಯ ವೃದ್ಧಾಶ್ರಮದಲ್ಲಿ ಕ್ರಿಸ್ಮಸ್ ಆಚರಣೆ

Spread the love

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ   ಕರುಣಾಲಯ ವೃದ್ಧಾಶ್ರಮದಲ್ಲಿ ಕ್ರಿಸ್ಮಸ್ ಆಚರಣೆ

ಉಡುಪಿ: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ವತಿಯಿಂದ ಬ್ರಹ್ಮಾವರ ಕರುಣಾಲಯ ವೃದ್ಧಾಶ್ರಮದಲ್ಲಿ ಗುರುವಾರ ಕ್ರಿಸ್ಮಸ್ ಆಚರಣೆ ಜರುಗಿತು.

ಕಾರ್ಯಕ್ರಮವನ್ನು ಕೇಕ್ ಕತ್ತರಿಸುವುದರ ಮೂಲಕ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷರಾದ ರೊಬರ್ಟ್ ಮಿನೇಜಸ್ ನೆರವೇರಿಸಿ ಮಾತನಾಡಿ ದೇವರು ಮನುಷ್ಯ ರೂಪದಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದರು.  ಅವರ ಜನನ ಅಸಾ ಮಾನ್ಯ.  ಅವರು ಹುಟ್ಟಿ ಬೆಳೆ ದ ರೀತಿ ಅವರ ನಡೆ ನುಡಿ,  ವ್ಯಕ್ತಿತ್ವ ಯುಗಾ ಯುಗಾಂತರಕ್ಕೂ ಪ್ರೇರಣೆಯಾಗಿದೆ.  ಅವರ ಸಂಪೂರ್ಣ ಜೀವನ  ಬಡ ಬಗ್ಗರ, ದೀನ ದಲಿತರ, ಶೋಷಿತ ವರ್ಗದ ಜನರಿಗೋಸ್ಮರ ಅವರ ಬಾಳನ್ನು ಅರ್ಥಪೂರ್ಣಗೊಳಿಸಿದರು.

ಈ ಆದರ್ಶವನ್ನು ಪಾಲಿಸುವುದು ನಮ್ಮ್ಮ ಧರ್ಮ.  ಈ ನಿಟ್ಟಿನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವೃದ್ಧರು ಅಶಕ್ತರು, ಅನಾಥರು, ಶೋಷಿತ ವರ್ಗದವರನ್ನು ಭೇಟಿ ಮಾಡಿ ಅವರ ಮುಖದಲ್ಲಿ ನಗುವನ್ನು ಕಾಣುವುದೇ ಕ್ರಿಸ್ಮಸ್ ಹಬ್ಬದ ನಿಜವಾದ ಅರ್ಥವಾಗಿದೆ ಎಂದರು.

ಇದೇ ವೇಳೆ ಸಂಘಟನೆ ವತಿಯಿಂದ ವೃದ್ಧಾಶ್ರಮದ ನಿವಾಸಿಗಳಿಗೆ ಅಗತ್ಯವಿರುವ ವಸ್ತುಗಳನ್ನು ಹಾಗೂ ಕ್ರಿಸ್ಮಸ್ ಹಬ್ಬದ ಕುಸ್ವರನ್ನು ವಿತರಿಸಲಾಯಿತು. ಅಲ್ಲದೆ ಸಹಾಯಧನವನ್ನು ಕೂಡ ನೀಡಲಾಯಿತು.

ಈ ವೇಳೆ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಉಪಾಧ್ಯಕ್ಷ ರೊನಾಲ್ಡ್ ಆಲ್ಮೇಡಾ, ಕಾರ್ಯದರ್ಶಿ ಸಂತೋಷ್ ಕರ್ನೆಲಿಯೊ, ಸಹಕಾರ್ಯದರ್ಶಿ ಗ್ರೆಗರಿ ಡಿಸೋಜಾ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಸಹ ಕೋಶಾಧಿಕಾರಿ ಹೆರಿಕ್ ಗೊನ್ಸಾಲ್ವಿಸ್, ಕಲ್ಯಾಣಪುರ ವಲಯಾಧ್ಯಕ್ಷೆ ರೋಜಿ ಬಾರೆಟ್ಟೊ ಕೋಶಾಧಿಕಾರಿ ಗ್ಯಾರಿಫಿಲ್ಡ್ ಉರ್ಬಾನ್ ಲೂವಿಸ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love