ಕೆಥೊಲಿಕ್ ಸಭಾ ಕಲ್ಯಾಣಪುರ ವಲಯದಿಂದ ಓಝಾನಾಮ್ ವೃದ್ಧಾಶ್ರಮದಲ್ಲಿ ಕ್ರಿಸ್ಮಸ್ ಆಚರಣೆ

Spread the love

ಕೆಥೊಲಿಕ್ ಸಭಾ ಕಲ್ಯಾಣಪುರ ವಲಯದಿಂದ ಓಝಾನಾಮ್ ವೃದ್ಧಾಶ್ರಮದಲ್ಲಿ ಕ್ರಿಸ್ಮಸ್ ಆಚರಣೆ

ಉಡುಪಿ: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಕಲ್ಯಾಣಪುರ ವಲಯದ ಪದಾಧಿಕಾರಿಗಳು ಸಂತೆಕಟ್ಟೆ ಓಝಾನಾಮ್ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿ ವೃದ್ಧರೊಂದಿಗೆ ಕ್ರಿಸ್ಮಸ್ ಆಚರಣೆ ಮಾಡಿದರು.

ಈ ವೇಳೆ ಮಾತನಾಡಿದ ಕೆಥೊಲಿಕ್ ಸಭಾ ಕಲ್ಯಾಣಪುರ ವಲಯ ಅಧ್ಯಕ್ಷೆ ರೋಜಿ ಬಾರೆಟ್ಟೊ ದೇವ ಪುತ್ರ ಯೇಸು ಸ್ವಾಮಿ ಮಾನವರಾಗಿ ಈ ಭೂಮಿಯಲ್ಲಿ ಜನಿಸಿದ ಕ್ರಿಸ್ಮಸ್ ಸಂಭ್ರಮ ಜಗತ್ತಿನಾದ್ಯಂತ ನಡೆಯುತ್ತಿದೆ. ಯೇಸು ಸ್ವಾಮಿ ತನ್ನ ಸಂಪೂರ್ಣ ಜೀವನವನ್ನು ಬಡಬಗ್ಗರಿಗೆ, ದೀನ ದಲಿತರ ಹಾಗೂ ಹಿರಿಯ ಜೀವಗಳ ನೋವು ತೊಲಗಿಸುವ ಕೆಲಸ ಮಾಡಿದರು. ಯೇಸು ಸ್ವಾಮಿಯ ದಾರಿಯಲ್ಲಿ ಮುನ್ನಡೆಯುವ ಕರ್ತವ್ಯ ಪ್ರತಿಯೊಬ್ಬ ಅನುಯಾಯಿಗಳಾಗಿದ್ದು ನಾವೆಲ್ಲರೂ ಕ್ರಿಸ್ಮಸ್ ಹಬ್ಬದಲ್ಲಿ ಜೊತೆಗೂಡಿ ಸಂತೊಷದಿಂದ ಈ ಹಬ್ಬವನ್ನು ಅಚರಿಸುವ ಎಂದು ಹೇಳಿದರು.

ಈ ವೇಳೆ ಆಶ್ರಮದ ನಿವಾಸಿಗಳಿಗೆ ಅಗತ್ಯವಿರುವ ವಸ್ತುಗಳನ್ನು ಹಾಗೂ ಕ್ರಿಸ್ಮಸ್ ಹಬ್ಬದ ಸಿಹಿ ತಿಂಡಿ ಕುಸ್ವಾರ್ ವಿತರಿಸಿ, ಕ್ರಿಸ್ಮಸ್ ಕ್ಯಾರಲ್ಸ್ ಗಾಯನ ನೆರವೇರಿಸುವುದರ ಮೂಲಕ ಮನೋರಂಜನೆ ನೀಡಲಾಯಿತು.

ಈ ವೇಳೆ ವಲಯದ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕರ್ನೆಲಿಯೊ, ಕಾರ್ಯದರ್ಶಿ ಸೆಲಿನ್ ಕುಲಾಸೊ, ಸ್ತ್ರೀ ಸಶಕ್ತೀಕರಣ ಸಂಚಾಲಕಿ ರೋಜಿ ಕ್ವಾಡ್ರಸ್, ಕೋಶಾಧಿಕಾರಿ ಗ್ಯಾರಿಫಿಲ್ಡ್ ಉರ್ಬಾನ್ ಲೂವಿಸ್, ಸಹ ಕೋಶಾಧಿಕಾರಿ ಸ್ಟ್ಯಾನಿ ಮಸ್ಕರೇನ್ಹಸ್, ಸಂತೆಕಟ್ಟೆ ಮೌಂಟ್ ರೋಜರಿ ಘಟಕದ ಅಧ್ಯಕ್ಷರಾದ ಜ್ಯೋತಿ ಲೂವಿಸ್, ಕಲ್ಯಾಣಪುರ ಮಿಲಾಗ್ರಿಸ್ ಘಟಕದ ಅಧ್ಯಕ್ಷೆ ಮರೀನಾ ಲೂವಿಸ್, ವೃದ್ಧಾಶ್ರಮದ ಮೇಲ್ವಿಚಾರಕರಾದ ಸಿಸ್ಟರ್ ಕ್ಲಾರಿಟಾ ಮತ್ತು ಸಿಸ್ಟರ್ ನಿಂಫಾ ಹಾಗೂ ಇತರರು ಉಪಸ್ಥಿತರಿದ್ದರು.


Spread the love