Home Mangalorean News Kannada News ಕೆಥೊಲಿಕ್ ಸಭಾ ಶಿರ್ವ, ಸ್ವಾಕ್ ಸಂಘಟನೆಯಿಂದ ಬಡವರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ

ಕೆಥೊಲಿಕ್ ಸಭಾ ಶಿರ್ವ, ಸ್ವಾಕ್ ಸಂಘಟನೆಯಿಂದ ಬಡವರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ

Spread the love

ಕೆಥೊಲಿಕ್ ಸಭಾ ಶಿರ್ವ, ಸ್ವಾಕ್ ಸಂಘಟನೆಯಿಂದ ಬಡವರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ

ಉಡುಪಿ: ಕೆಥೊಲಿಕ್ ಸಭಾ ಆರೋಗ್ಯ ಮಾತೆಯ ದೇವಾಲಯ ಶಿರ್ವ ಘಟಕ ಹಾಗೂ ಸ್ವಾಕ್ ಸಂಘಟನೆ ಕುವೈಟ್ ಇವರುಗಳ ಸಹಕಾರದಿಂದ ಲಾಕ್ ಡೌನ್ ನಿಂದ ತೊಂದರೆ ಅನುಭವಿಸುತ್ತಿರುವ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಣಾ ಕಾರ್ಯಕ್ರಮ ಶುಕ್ರವಾರ ಚರ್ಚಿನ ಆವರಣದಲ್ಲಿ ಜರುಗಿತು.

ಲಾಕ್ ಡೌನ್ ನಿಂದಾಗಿ ಆಹಾರ ಸಮಸ್ಯೆಯಿಂದ ಬಳಲುತ್ತಿರುವ ಕುಟುಂಬಗಳಿಗೆ ರೂ 93500 ಮೌಲ್ಯದ ಸುಮಾರು 125 ಕಿಟ್ ಗಳನ್ನು ಹಸ್ತಾಂತರಿಸಲಾಯಿತು.

ಈ ವೇಳೆ ಶಿರ್ವ ಚರ್ಚಿನ ಪ್ರಧಾನ ಧರ್ಮಗುರು ವಂ| ಡೆನಿಸ್ ಡೆಸಾ, ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ, ಶಿರ್ವ ಗ್ರಾಮ ಪಂಚಾಯತ್ ಪಿಡಿಒ ಪದ್ಮನಾಭ, ಜಿಪಂ ಸದಸ್ಯ ವಿಲ್ಸನ್ ರೊಡ್ರಿಗಸ್, ಶಿರ್ವ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ|ಸಂತೋಷ್, ಚರ್ಚಿನ ಕಾರ್ಯದರ್ಶಿ ಲೀನಾ ಮಚಾದೊ, ಪದಾಧಿಕಾರಿಗಳಾದ ಮೆಲ್ವಿನ್ ಆರಾನ್ಹಾ, ಜೊಸೇಫ್ ಕ್ಯಾಸ್ತಲಿನೊ, ಚರ್ಚಿನ ಹಣಕಾಸು ಸಮಿತಿಯ ಸದಸ್ಯರಗಳು ಉಪಸ್ಥಿತರಿದ್ದರು.

ಇದೇ ವೇಳೆ ಕೊರೋನಾ ವಿಚಾರದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಕರಪತ್ರಗಳನ್ನು ಹಂಚಲಾಯಿತು.


Spread the love

Exit mobile version