
ಕೆಥೊಲಿಕ್ ಸಭಾ ಸಾಸ್ತಾನ ಘಟಕದ ನೂತನ ಅಧ್ಯಕ್ಷರಾಗಿ ಐವನ್ ಡಿʼಆಲ್ಮೇಡಾ ಆಯ್ಕೆ
ಉಡುಪಿ: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಸಂತ ಅಂತೋನಿ ದೇವಾಲಯ ಸಾಸ್ತಾನ ಘಟಕದ 2022-23 ನೇ ಸಾಲಿನ ನೂತನ ಅಧ್ಯಕ್ಷರಾಗಿ ಐವನ್ ಡಿʼಆಲ್ಮೇಡಾ ಅವರು ಆಯ್ಕೆಯಾಗಿದ್ದಾರೆ.
ಭಾನುವಾರ ಚರ್ಚಿನ ಪಾದ್ವಾ ಸಭಾಂಗಣದಲ್ಲಿ ಕೆಥೊಲಿಕ್ ಸಭಾದ ಸದಸ್ಯರ ಹಾಜರಾತಿಯೊಂದಿಗೆ ನೂತನ ಪದಾಧಿಕಾರಿಗಳ ಚುನಾವಣೆ ಪ್ರಕ್ರಿಯೆ ನಡೆಯಿತು.
ಇತರ ಪಧಾದಿಕಾರಿಗಳಾಗಿ ಈ ಕೆಳಗಿನವರು ಆಯ್ಕೆಯಾದರು. ಆಧ್ಯಾತ್ಮಿಕ ನಿರ್ದೇಶಕರಾಗಿ ವಂ|ಸುನೀಲ್ ಡಿʼಸಿಲ್ವಾ, ನಿಯೋಜಿತ ಅಧ್ಯಕ್ಷರಾಗಿ ಸ್ಟೀಫನ್ ಲೂವಿಸ್, ನಿಕಟಪೂರ್ವ ಅಧ್ಯಕ್ಷರಾಗಿ ಸಿಂತಿಯಾ ಡಿʼಸೋಜಾ, ಉಪಾಧ್ಯಕ್ಷರಾಗಿ ಜೊಸೇಫ್ ಡಿʼಸೋಜಾ, ಕಾರ್ಯದರ್ಶಿಯಾಗಿ ಲೂಯಿಸ್ ಡಿʼಸೋಜಾ, ಜತೆ ಕಾರ್ಯದರ್ಶಿಯಾಗಿ ರೋಜಿ ಡಿʼಆಲ್ಮೇಡಾ, ಕೋಶಾಧಿಕಾರಿಯಾಗಿ ಲೂಯಿಸ್ ಮ್ಯಾಕ್ಷಿಮ್ ಡಿʼಸೋಜಾ, ಸಹ ಕೋಶಾಧಿಕಾರಿಯಾಗಿ ಜೋಸೇಫ್ ಬಾಂಜ್, ಆಮ್ಚೊಂ ಸಂದೇಶ್ ಪ್ರತಿನಿಧಿಯಾಗಿ ವೀರಾ ಪಿಂಟೊ, ರಾಜಕೀಯ ಸಂಚಾಲಕರಾಗಿ ಶೈಲಾ ಸಲ್ಡಾನಾ, ಸರಕಾರಿ ಸವಲತ್ತುಗಳ ಸಂಚಾಲಕರಾಗಿ ಮೆಲ್ವಿನ್ ಡಿʼಸಿಲ್ವಾ, ಆಂತರಿಕ ಲೆಕ್ಕ ಪರಿಶೋಧಕರಾಗಿ ಜಾನೇಟ್ ಬಾಂಜ್ ಆಯ್ಕೆಯಾದರು.
ಕಾರ್ಯಕಾರಿ ಸಮಿತಿಯ ಇತರ ಸದಸ್ಯರುಗಳಾಗಿ ಜಸಿಂತಾ ಸೆರಾವೊ, ವಲೇರಿಯನ್ ಅಲ್ಮೇಡಾ, ಫ್ರಾನ್ಸಿಸ್ ಫೆರ್ನಾಂಡಿಸ್, ವಿವಿಯನ್ ಲೂವಿಸ್ ಆಯ್ಕೆಯಾದರು.
ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಚುನಾವಣಾಧಿಕಾರಿಗಳಾಗಿ ಕಲ್ಯಾಣಪುರ ವಲಯದ ಉರ್ಬಾನ್ ಲೂವಿಸ್ ಮತ್ತು ಜೋನ್ ಪಿಕಾರ್ಡೊ ಉಪಸ್ಥಿತರಿದ್ದರು.