ಕೆಫೆಯಲ್ಲಿ ಮೂವರು ಯುವತಿಯರ ಹೊಡೆದಾಟ : ದೂರು ದಾಖಲು

Spread the love

ಕೆಫೆಯಲ್ಲಿ ಮೂವರು ಯುವತಿಯರ ಹೊಡೆದಾಟ: ದೂರು ದಾಖಲು

ಮಂಗಳೂರು: ನಗರದ ಬಾವುಟಗುಡ್ಡ ಸಮೀಪದ ಕೆಫೆಯೊಂದರಲ್ಲಿ ಕಾಲೇಜು ವಿದ್ಯಾರ್ಥಿನಿಯರು ಹೊಡೆದಾಟ ನಡೆಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಮಂಗಳವಾರ ವೈರಲ್ ಆಗಿದೆ.

ಇಲ್ಲಿನ ಬಾವುಟಗುಡ್ಡೆ ಎಂಬಲ್ಲಿರುವ  ಕೆಫೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಹೊಡೆದಾಟ ಮಾಡಿಕೊಂಡ ಘಟನೆ ನಡೆದಿದೆ. ಯುವಕರ ಜೊತೆ ಕೆಫೆಯಲ್ಲಿ ಕುಳಿತಿದ್ದ ಯುವತಿ ಮೇಲೆ ಕೆಫೆಗೆ ಆಗಮಿಸಿದ ಮತ್ತೊಬ್ಬ ಯುವತಿಯಿಂದ ಏಕಾಏಕಿ ಹಲ್ಲೆ ನಡೆದಿದೆ. ಈ ವೇಳೆ ಕೆಫೆಯಲ್ಲಿ ಮತ್ತೊಬ್ಬ ಯುವತಿ ಗಲಾಟೆ ಆರಂಭಿಸಿದ್ದಾರೆ. ಹೀಗೆ ಒಟ್ಟು ಮೂವರು ಯುವತಿಯರ ನಡುವೆ ಹೊಡೆದಾಟ ಶುರುವಾಗಿದೆ.

ಕೆಫೆಯಲ್ಲಿ ಯುವಕರೊಂದಿಗೆ ಕುಳಿತಿದ್ದ ಯುವತಿಗೆ ಮತ್ತೊಬ್ಬ ಯುವತಿ ಹಲ್ಲೆ ನಡೆಸಿ ಮಾತಿನ ಚಕಮಕಿ ನಡೆಸಿರುವ ದೃಶ್ಯ ವೀಡಿಯೊದಲ್ಲಿ ಕಾಣುತ್ತದೆ.

ಈ ಬಗ್ಗೆ ಬಂದರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.


Spread the love