
ಕೆಮ್ಮಣ್ಣು: ಅನಾರೋಗ್ಯ ಪೀಡಿತ ಕಾರ್ಮಿಕನನ್ನು ರಸ್ತೆ ಬದಿ ಮಲಗಿಸಿ ಹೋದ ಸ್ನೇಹಿತರು! ಸ್ಥಳದಲ್ಲೇ ಮೃತ್ಯು
ಉಡುಪಿ: ಅನಾರೋಗ್ಯ ಪೀಡಿತ ಕೂಲಿ ಕಾರ್ಮಿಕನೋರ್ವನನ್ನು ರಸ್ತೆಬದಿಯಲ್ಲಿ ಎಸೆದು ಬಂದ ಅಮಾನವೀಯ ಘಟನೆ ಉಡುಪಿ ಜಿಲ್ಲೆ ಕೆಮ್ಮಣ್ಣು ಬಳಿ ಗುರುವಾರ ನಡೆದಿದೆ. ತೀವ್ರ ಅನಾರೋಗ್ಯ ಪೀಡಿತ ಕಾರ್ಮಿಕ ರಸ್ತೆಯ ಬದಿಯಲ್ಲೇ ಮೃತಪಟ್ಟಿದ್ದಾನೆ.
ಮೃತ ಕೂಲಿ ಕಾರ್ಮಿಕನನ್ನು ಉತ್ತರ ಕರ್ನಾಟಕ ಮೂಲದ ಹನುಮಂತ ಎಂದು ಗುರುತಿಸಲಾಗಿದೆ.
ಪೊಲೀಸ್ ಮಾಹಿತಿಗಳ ಪ್ರಕಾರ ಹನುಮಂತ ಕಳೆದೆರಡದು ದಿನಗಳಿಂದ ಅನಾರೋಗ್ಯಪೀಡಿತನಾಗಿದ್ದು ನಿಶ್ಶಕ್ತನಾಗಿದ್ದನು. ಗುರುವಾರ ಕೆಮ್ಮಣ್ಣು ಸಂತೆ ಇದ್ದ ಪರಿಣಾಮ ಆತನ ಸ್ನೇಹಿತರು ಸಂತೆಯ ಕೆಲಸಕ್ಕೆ ಹೋಗುವಾಗ ಹನುಮಂತನನ್ನು ಕೂಡ ಗೂಡ್ಸ್ ರಿಕ್ಷಾದಲ್ಲಿ ಕರೆದುಕೊಂಡು ಹೋಗಿದ್ದು ಆತ ಅದರಲ್ಲೇ ಮಲಗಿದ್ದ ಎನ್ನಲಾಗಿದೆ.
ಈ ಮಧ್ಯೆ ಗೂಡ್ಸ್ ರಿಕ್ಷಾದ ಮಾಲಿಕರು ಚಾಲಕನಲ್ಲಿ ವಾಹನ ಕೊಂಡು ಬರುವಂತೆ ಸೂಚಿಸಿದ್ದು ಈ ವೇಳೆ ಹನುಮಂತನನ್ನು ರಸ್ತೆ ಬದಿಯಲ್ಲಿ ಮಲಗಿಸಿ ಹೋಗಿದ್ದಾರೆ. ದಾರಿಯಲ್ಲಿ ಹೋಗುವರು ಆತ ಕುಡಿದು ಮಲಗಿರಬಹುದು ಎಂದು ಸುಮ್ಮನಿದ್ದು ಸಂಜೆ ವೇಳೆಗೆ ನೋಡುವಾಗ ಆತ ಮೃತಪಟ್ಟಿರುವುದು ಕಂಡುಬಂದಿದೆ.
ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ರಸ್ತೆಬದಿ ಮಲಗಿಸಿ ಹೋದ ಹನುಮಂತನ ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.