ಕೆ.ಆರ್.ನಗರದಲ್ಲಿ 136 ಲೀಟರ್ ಅಕ್ರಮ ಮದ್ಯ ನಾಶ

Spread the love

ಕೆ.ಆರ್.ನಗರದಲ್ಲಿ 136 ಲೀಟರ್ ಅಕ್ರಮ ಮದ್ಯ ನಾಶ

ಕೆ.ಆರ್.ನಗರ: ಸಾಲಿಗ್ರಾಮ ಮತ್ತು ಕೆ.ಆರ್.ನಗರ ಆವಳಿ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಸಾಗಾಟದ ವೇಳೆ ವಶಪಡಿಸಿಕೊಂಡಿದ್ದ 136 ಲೀಟರ್ ಮದ್ಯವನ್ನು ಅಬಕಾರಿ ಇಲಾಖೆ ನಾಶಪಡಿಸಿದೆ.

ಕೆ.ಆರ್.ನಗರ ವಲಯ ಅಬಕಾರಿ ನಿರೀಕ್ಷಕಿ ಹೆಚ್.ಎಂ.ಶೈಲಜಾ, ಗ್ರೇಡ್-2 ತಹಸೀಲ್ದಾರ್ ಬಾಲಸುಬ್ರಹ್ಮಣ್ಯಂ, ಸಿಬ್ಬಂದಿ ಮಹೇಶ್ , ಅಬಕಾರಿ ಉಪ ನಿರೀಕ್ಷಕ ಎಂ.ವಿಜಯಕುಮಾರ್, ಪೇದೆಗಳಾದ ಟಿ.ಎಸ್‌.ರಾಜೇಶ್, ಸಂದೀಪ್, ಶಿವಪ್ಪ, ಬಾನುಸಿ ಅವರ ಸಮ್ಮುಖದಲ್ಲಿ ಪಟ್ಟಣದ ಅಬಕಾರಿ ಇಲಾಖೆಯು 2022-23 ಸಾಲಿನ ವಿವಿಧ ಕಡೆ ಅಕ್ರಮ ಮದ್ಯ ಮಾರಾಟ ಮತ್ತು ಸಾಗಾಟ ನಡೆಸುತ್ತಿದ್ದ ಸುಮಾರು 120 ಪ್ರಕರಣಗಳಲ್ಲಿ 136 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿತ್ತು. ಅದನ್ನು ನಾಶಪಡಿಸಲಾಗಿದೆ.

ಈ ವೇಳೆ ಮಾತನಾಡಿದ ಹುಣಸೂರು ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಕೆ.ಟಿ.ವಿಜಯ್ ಕುಮಾರ್ ಅವರು ಅಕ್ರಮ ಮದ್ಯ ಮಾರಾಟ, ಸಾಗಾಟ ಕಂಡು ಬಂದಲ್ಲಿ ಅಬಕಾರಿ ಇಲಾಖೆಗೆ ದೂರು‌ ನೀಡಿ ಅಥವಾ ಕರೆ‌ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಸರ್ಕಾರದ ನಿಯಮ ಪಾಲಿಸಿ ಮದ್ಯ ಮಾರಾಟಕ್ಕೆ ಇಲಾಖೆ ವತಿಯಿಂದ ಅನುಮತಿ ನೀಡುತ್ತಿದ್ದು ಇದನ್ನು ಮೀರಿ ಅಕ್ರಮವಾಗಿ ಮಧ್ಯ ಮಾರಾಟ ಮಾಡಿದರೆ ಅಂತಹವರನ್ನು ಗುರುತಿಸಿ ದಂಡ ವಿಧಿಸುವ ಜೊತೆಗೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.


Spread the love