
ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಮಕ್ಕಳ ಅಲರ್ಜಿ ಮತ್ತು ಅಸ್ತಮಾ ತಜ್ಞರು ಹಾಗೂ ಮಕ್ಕಳ ಶಸ್ತ್ರ ಚಿಕಿತ್ಸಾ ತಜ್ಞರಿಂದ ಮಕ್ಕಳಿಗಾಗಿ ಉಚಿತ ಸಮಾಲೋಚನೆ ಹಾಗೂ ತಪಾಸಣಾ ಶಿಬಿರ
ಮಂಗಳೂರು: ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಮಕ್ಕಳ ಅಲರ್ಜಿ ಮತ್ತು ಅಸ್ತಮಾ ತಜ್ಞರು ಹಾಗೂ ಮಕ್ಕಳ ಶಸ್ತ್ರ ಚಿಕಿತ್ಸಾ ತಜ್ಞರಿಂದ ಮಕ್ಕಳಿಗಾಗಿ ಉಚಿತ ಸಮಾಲೋಚನೆ ಹಾಗೂ ತಪಾಸಣಾ ಶಿಬಿರವನ್ನು ದಿನಾಂಕ 7-03-2022 ರಿಂದ 10-03-2022 (ಸೋಮವಾರದಿಂದ ಗುರುವಾರ) ರ ವರೆಗೆ ಆಸತ್ರೆಯ ಮಕ್ಕಳ ರೋಗ ವಿಭಾಗದಲ್ಲಿ ಬೆಳಿಗ್ಗೆ 9:30 ರಿಂದ 12:30 ರ ವರೆಗೆ ಹಮ್ಮಿಕೊಳ್ಳಲಾಗಿದೆ.
ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅಲರ್ಜಿಯ ಲಕ್ಷಣಗಳಾದ ಸತತ ಸೀನುವಿಕೆ, ತುಂಬಿಕೊಂಡ ಅಥವಾ ಕಟ್ಟಿಕೊಂಡ ಮೂಗು, ಕೆಂಪಗಾದ ಮತ್ತು ತುರಿಕೆಯುಳ್ಳ ಕಣ್ಣುಗಳು, ಸತತ ಕೆಮ್ಮು, ಉಸಿರಾಡುವಾಗ ಸೀಟಿ ಹೊಡೆದಂತಹ ದನಿ, ಉಸಿರಾಟ ಕಷ್ಟಕರವಾಗುವುದು, ಚರ್ಮ ಕೆಂಪಗಾಗುವುದು, ಚರ್ಮದಲ್ಲಿ ತುರಿಕೆ, ಚರ್ಮದಲ್ಲಿ ಪಕಳೆ ಏಳುವುದು ಮುಂತಾದ ಸಮಸ್ಯೆಗಳಿರುವ ಮಕ್ಕಳು ಈ ಉಚಿತ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು.
ಅದೇ ರೀತಿ ಮಕ್ಕಳಲ್ಲಿ ಕಂಡುಬರುವ ಶಸ್ತ್ರಚಿಕಿತ್ಸಾ ಸಮಸ್ಯೆಗಳಾದ ಹರ್ನಿಯಾ, ಹÉೈಡ್ರೋಸಿಲ್, ಸೀಳು ತುಟಿ, ಮಲದ್ವಾರದ ತೊಂದರೆಗಳು, ಮೂತ್ರನಾಳದ ತೊಂದರೆಗಳು, ಕಿಡ್ನಿ ಸಮಸ್ಯೆಗಳು, ಹುಟ್ಟಿನಿಂದ ಮೂತ್ರಕೋಶ ತೆರೆದಿರುವುದು, ಶ್ವಾಸೋಚ್ಛಾಸಕ್ಕೆ ಕಷ್ಟವಾಗುವುದು, ನಾಳೀಯ ಹಾಗೂ ದುಗ್ದನಾಳ ನ್ಯೂನತೆ ಹಾಗೂ ಗೆಡÉ್ಡ ಮುಂತಾದ ರೋಗ ಲಕ್ಷಣಗಳುಳ್ಳ ಮಕ್ಕಳು ಈ ಉಚಿತ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು.
ಈ ಶಿಬಿರದಲ್ಲಿ ವೈದ್ಯರ ಜೊತೆ ಸಮಾಲೋಚನೆ/ತಪಾಸಣೆಯು ಉಚಿತವಾಗಿದ್ದು ವಿಶೇಷ ರಿಯಾಯಿತಿ ದರದಲ್ಲಿ ಚಿಕಿತ್ಸೆ/ಶಸ್ತ್ರಚಿಕಿತ್ಸೆಯನ್ನು ಮಾಡಲಾಗುವುದು. ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಆಸ್ಪತ್ರೆಯ ಪ್ರಕಟಣೆಯು ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 0824 – 2445858, 7022078002