Home Mangalorean News Kannada News ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ, ಬೆಂಕಿಯಲ್ಲಿ ಸುಟ್ಟು...

ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ, ಬೆಂಕಿಯಲ್ಲಿ ಸುಟ್ಟು ಯುವಕ ಸಾವು!

Spread the love

ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ, ಬೆಂಕಿಯಲ್ಲಿ ಸುಟ್ಟು ಯುವಕ ಸಾವು!

ಬಾಗಲಕೋಟೆ: ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ, ಬೆಂಕಿಯಲ್ಲಿ ಸುಟ್ಟು ಯುವಕ ಸಾವನ್ನಪ್ಪಿದ ಘಟನೆ ಸೋರಗಾಂವ ಗ್ರಾಮದ ಬಳಿ ನಡೆದಿದೆ.

ಡಿಕ್ಕಿಯ ರಭಸಕ್ಕೆ ಬೈಕ್‌ಗೆ ಬೆಂಕಿ ಹೊತ್ತುಕೊಂಡು ಸವಾರ ಸ್ಥಳದಲ್ಲೇ ಸಜೀವ ದಹನವಾದ ಘಟನೆ ನಡೆದಿದೆ. ಮೃತ ಯುವಕ ನವೀನ್ ಹನುಮಂತ ಗೊರ್ಕ್ (20) ಎಂದು ಗುರುತಿಸಲಾಗಿದೆ. ನವೀನ್ ಮುಧೋಳ ನಗರದ ಜನತಾ ಪ್ಲಾಟ್ ನಿವಾಸಿಯಾಗಿದ್ದ.

ಬಾದಾಮಿಯಿಂದ ಇಚಲಕರಂಜಿ ಕಡೆ ತೆರಳುತ್ತಿದ್ದ ಬಸ್‌ಗೆ ಬೈಕ್ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

Exit mobile version