ಕೇಂದ್ರ ಬಜೆಟ್‌ -ಆಧುನಿಕ ತಂತ್ರಜ್ಙಾನ ಮತ್ತು ಡಿಜಿಟಲೀಕರಣದತ್ತ ದಿಟ್ಟ ಹೆಜ್ಜೆ- ಮಟ್ಟಾರ್‌ ರತ್ನಾಕರ್‌ ಹೆಗ್ಡೆ

Spread the love

ಕೇಂದ್ರ ಬಜೆಟ್‌ -ಆಧುನಿಕ ತಂತ್ರಜ್ಙಾನ ಮತ್ತು ಡಿಜಿಟಲೀಕರಣದತ್ತ ದಿಟ್ಟ ಹೆಜ್ಜೆ- ಮಟ್ಟಾರ್‌ ರತ್ನಾಕರ್‌ ಹೆಗ್ಡೆ

ಮಂಗಳೂರು/ಉಡುಪಿ: ಕೇಂದ್ರ ಸರಕಾರದ ವಿತ್ತ ಸಚಿವೆ ನಿರ್ಮಲ ಸೀತಾರಾಮನ್‌ ಅವರು ಮಂಡಿಸಿದ 2022-23ನೇ ಸಾಲಿನ 39.54 ಲಕ್ಷ ಕೋಟಿಯ ಬಜೆಟ್‌ ಆಧುನಿಕ ತಂತ್ರಜ್ಙಾನ ಮತ್ತು ಡಿಜಿಟಲೀಕರಣದತ್ತ, ದೇಶದ ಪ್ರಧಾನಿ ನರೇಂದ್ರ ಮೋದಿಜಿಯವರು ವಿತ್ತ ಸಚಿವರ ಮೂಲಕ ತೆಗೆದುಕೊಂಡ ದಿಟ್ಟ ನಿರ್ಧಾರವಾಗಿದೆ ಎಂದು ಕರ್ನಾಟಕ ಸರಕಾರದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಂದು ದೇಶ ಒಂದು ನೋಂದಣಿ, ಡಿಜಿಟಲ್‌ ಕರೆನ್ಸಿ, ರೈತರ ರಕ್ಷಣೆ, ಶಿಕ್ಷಣಕ್ಕೆ, ಗ್ರಾಮೀಣ ಅಭಿವೃಧ್ದಿಗೆ, ನಿರುದ್ಯೋಗ ನಿರ್ಮೂಲನೆಗೆ ಒತ್ತು ಕೊಟ್ಟು ಹೊಸ ಅರ್ಥಿಕತೆಯತ್ತ ಇದೊಂದು ದಿಟ್ಟ ಹೆಜ್ಜೆ ಎಂದು ಮಟ್ಟಾರ್‌ ಅವರು ಹೇಳಿದ್ದಾರೆ.


Spread the love