ಕೇಂದ್ರ ಸರ್ಕಾರದ ಕೃಷಿ ಸಂಬಂಧಿಸಿದ ಕಾಯ್ದೆಗಳ ವಿರುದ್ಧ ದ.ಕ. ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

Spread the love

ಕೇಂದ್ರ ಸರ್ಕಾರದ ಕೃಷಿ ಸಂಬಂಧಿಸಿದ ಕಾಯ್ದೆಗಳ ವಿರುದ್ಧ ದ.ಕ. ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಸಂಬಂಧಿಸಿದ ಕಾಯ್ದೆಗಳ ವಿರುದ್ಧ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಪ್ರತಿಭಟಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, ಕಾಂಗ್ರೆಸ್ ಪಕ್ಷ ರೈತರಿಗೆ ಭೂಮಿ ಕೊಡುವ ಕೆಲಸ ಮಾಡಿದೆ, ಬಿಜೆಪಿ ಸರ್ಕಾರ ಭೂಮಿ ಕಸಿಯುವ ಕೆಲಸ ಮಾಡುತ್ತಿದೆ. ರೈತನ ಬದುಕನ್ನು ಕೇಂದ್ರ ಸರಕಾರ ಕೆಲವು ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ದುಸ್ಥಿತಿಗೆ ತರಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸದಾಶಿವ್ ಉಳ್ಳಾಲ್, ಶೈಲಜಾ ಅಮರನಾಥ್, ಶಾಲೆಟ್ ಪಿಂಟೊ, ಮೋಹನ್ ಗೌಡ, ಶಶಿಧರ್ ಹೆಗ್ಡೆ, ಸುರೇಶ್ ಶೆಟ್ಟಿ, ಶುಭೋಧಯ ಆಳ್ವ ಮಾತನಾಡಿದರು. ಮನ.ಪಾ. ವಿಪಕ್ಷ ನಾಯಕ ಅಬ್ದುಲ್ ರವೂಫ್, ಜಿ.ಪಂ.ಸದಸ್ಯ ಶಾಹುಲ್ ಹಮೀದ್, ಎನ್ ಎಸ್ ಐಯು ಜಿಲ್ಲಾಧ್ಯಕ್ಷ ಸವಾದ್ ಸುಳ್ಯ, ಪದ್ಮನಾಭ ನರಿಂಗಾನ, ನೀರಜ್ ಚಂದ್ರ ಪಾಲ್, ಪ್ರತಿಭಾ ಕುಳಾಯಿ, ಅಬ್ದುಲ್ ಲತೀಫ್, ನವೀನ್ ಡಿಸೋಜಾ, ಸದಾಶಿವ ಶೆಟ್ಟಿ, ಪುರುಷೋತ್ತಮ ಚಿತ್ರಾಪುರ, ವಿಶ್ವಾಸ್ ದಾಸ್, ತೆರೆಝಾ ಪಿಂಟೊ, ಪದ್ಮನಾಭ ಅಮೀನ್, ಶೋಭಾ ಕೇಶವ್, ಟಿ.ಕೆ.ಸುಧೀರ್, ಜಯಶೀಲ ಅಡ್ಯಂತಯಾ, ಅನಿಲ್ ಕುಮಾರ್ ಪಂಜಿಮೊಗರು, ಪ್ರಕಾಶ್ ಸಾಲಿಯಾನ್, ಸುಹೈಲ್ ಕಂದಕ್, ಲಾರೆನ್ಸ್ ಡಿಸೋಜಾ, ಮುದಸ್ಸೀರ್ ಕುದ್ರೋಳಿ, ಮೊಹಮ್ಮದ್ ಕುಂಜತ್ತಬೈಲ್, ರಮಾನಂದ ಪೂಜಾರಿ, ಲ್ಯಾನ್ಸಿ ಲೋಟೊ ಪಿಂಟೊ, ಜಿಸಿಂತಾ ವಿಜಯ್ ಆಲ್ಫ್ರೆಡ್, ಅಖಿಲ ಆಳ್ವ, ಶಬ್ಬೀರ್ ಸಿದ್ದಕಟ್ಟೆ, ಸಿ.ಎಂ. ಮುಸ್ತಫಾ, ಉದಯ ಕುಂದರ್, ಅನ್ಸಾರ್ ಸಾಲಿಮಾರ್, ನಮೀತಾ ಡಿ ರಾವ್, ಭರತೇಶ್ ಅಮೀನ್, ಲಕ್ಷ್ಮೀನಾಯರ್, ಯೋಗೀಶ್ ನಾಯಕ್, ಸಬಿತಾ ಮಿಸ್ಕಿತ್, ಸುಧಾಕರ್, ರಘುರಾಜ್ ಕದ್ರಿ, ಪ್ರತೀಬ್ ಬೇಕಲ್, ಯೂಸುಫ್ಉಚ್ಚಿಲಉಪಸ್ಥಿತರಿದ್ದರು.


Spread the love