ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೊಂಕಣಿ ಸಾಹಿತಿ ಎಚ್.ಎಂ. ಪೆರ್ನಾಲ್‌ಗೆ ಅಭಿನಂದನಾ ಸಮಾರಂಭ
ಮಂಗಳೂರು: 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಎಚ್.ಎಂ. ಪೆರ್ನಾಲ್ ಅವರಿಗೆ ಅಭಿನಂದನಾ ಸಮಾರಂಭವು ಮೇ 15, ಶುಕ್ರವಾರ ನಗರದ ಟೌನ್ ಹಾಲ್ ನಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಅಭಿನಂದನಾ ಸಮಿತಿಯ ಸಂಚಾಲಕರಾದ ಮೆಲ್ವಿನ್ ರೊಡ್ರಿಗಸ್ ಅವರ ನೇತೃತ್ವದಲ್ಲಿ ಬಹಳ ಆಯೋಜಿಸಲಾಗಿದೆ.
ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿರುವ ಆಯೋಜಕರು, ಅನಿವಾಸಿ ಉದ್ಯಮಿ ಮೈಕಲ್ ಡಿಸೋಜಾ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಖ್ಯಾತ ಕನ್ನಡ ಕವಿ ಮತ್ತು ಸಾಹಿತಿ ಜಯಂತ್ ಕಾಯ್ಕಿಣಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಸಂಜೆ 5.30ಕ್ಕೆ ಕಾರ್ಯಕ್ರಮವು ಆರಂಭವಾಗಲಿದ್ದು, 5:45ಕ್ಕೆ ಉಸ್ತಾದ್ ರಫೀಕ್ ಖಾನ್ ಮತ್ತು ಅವರ ಸಂಗಾತಿಗಳಿಂದ ‘ಸಿತಾರ್ ಪ್ಯೂಷನ್’ ಎಂಬ ವಿಶಿಷ್ಟ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 6:30ಕ್ಕೆ ಎಡ್ಡಿ ಸಿಕೇ ‘ ಮತ್ತು ಮುಹಮ್ಮದ್ ಮುಆದ್ ಜಿ.ಎಂ. ಅವರಿಂದ ಎಚ್.ಎಂ. ಪೆರ್ನಾಲ್ ಅವರ ಕವಿತೆಗಳ ಸಾದರೀಕರಣದ ಮೂಲಕ ಕವಿತಾ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸಂಜೆ 7:00ಕ್ಕೆ ‘ಜಿವಿತಾಚೊ, ಸಾಹಿತ್ಯಾಚೊ ಸಂಭ್ರಮ್’ ಅಂಗವಾಗಿ ಶಕುಂತಳಾ ಆರ್. ಕಿಣಿ ಮತ್ತು ವಿಲ್ಸನ್ ಕಟೀಲ್ ಅವರು ಎಚ್.ಎಂ. ಅವರೊಂದಿಗೆ ವಿಶೇಷ ಸಂವಾದ ನಡೆಸಲಿದ್ದಾರೆ. ಸಮಾರಂಭದ ಪ್ರಮುಖ ಘಟ್ಟವಾದ ‘ಅಭಿನಂದನ್ ಸಂಭ್ರಮ್’ ಸಂಜೆ 7:30ಕ್ಕೆ ಶುರುವಾಗಲಿದ್ದು, ಟಾಯ್ಸಸ್ ನೊರೊನ್ಹಾ ಅವರು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಎಮ್‌ಡಿವಿಕೆ-ಎಚ್ಚೆಮ್
ಅಭಿನಂದನ್ ಸಮಿತಿ ಹಾಗೂ ವಿವಿಧ ಕೊಂಕಣಿ ಸಂಘ-ಸಂಸ್ಥೆಗಳ ವತಿಯಿಂದ ಪೆರ್ನಾಲ್ ಅವರಿಗೆ ಸನ್ಮಾನ ನಡೆಯಲಿದೆ.ಕಾರ್ಯಕ್ರಮದಲ್ಲಿ ಎಚ್.ಎಂ. ಪೆರ್ನಾಲ್, ಜಯಂತ್ ಕಾಯ್ಕಿಣಿ ಮತ್ತು ಮೈಕಲ್ ಡಿಸೋಜಾ ಅವರು ಮಾತನಾಡಲಿದ್ದಾರೆ. ಕಾರ್ಯಕ್ರಮವು ರಾತ್ರಿ 8:30 ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದ್ದಾರೆ.ಪತ್ರಿಕಾ ಗೋಷ್ಠಿಯಲ್ಲಿ ಮೆಲ್ವಿನ್ ರೊಡ್ರಿಗಸ್, ಎಡ್ಡಿ ಸಿಕ್ವೆರಾ ಮತ್ತು ಟಾಯ್ಸಸ್ ನೊರೊನ್ಹಾ ಉಪಸ್ಥಿತರಿದ್ದರು.
