
ಕೇಂದ್ರ ಹಣಕಾಸು ಸಚಿವರದ್ದು ಜುಮ್ಲಾ ಬಜೆಟ್ – ಕೆ ಹರೀಶ್ ಕುಮಾರ್
ಮಂಗಳೂರು: ಇದೊಂದು ಚುನಾವಣಾ ಬಜೆಟ್ . ಕೊನೆಗೆ ‘ಜುಮ್ಲಾ’ ಆಗಲಿದೆ. ಈ ಬಜೆಟ್ ಜನ ವಿರೋಧಿ ನೀತಿಯ ಮುಂದುವರಿದ ಭಾಗವಾಗಿದ್ದು, ಉದ್ಯೋಗಕ್ಕಾಗಿ ಪರಿತಪಿಸುತ್ತಿರುವ ಯುವ ಸಮುದಾಯಕ್ಕೆ ಯಾವುದೇ ಭರವಸೆ ಮತ್ತು ಕೊಡುಗೆ ಇಲ್ಲ ಎಂದು ದಕ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಕೆ ಹರೀಶ್ ಕುಮಾರ್ ಹೇಳೀದ್ದಾರೆ.
ಬಜೆಟ್‌ನಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ಏನೂ ಇಲ್ಲ. ಬಡವರಿಗೆ ಈ ಬಜೆಟ್ ನಿರಾಶೆ ಮೂಡಿಸಿದೆ. ಇದು ಕೇವಲ ಅಲಂಕಾರಿಕ ಘೋಷಣೆಗಳನ್ನು ಮಾತ್ರ ಹೊಂದಿದೆ. ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮವಿಲ್ಲ. ಜನರ ಸಂಕಷ್ಟ ಕಡಿಮೆಯಾಗಬಹುದೆಂಬ ನಿರೀಕ್ಷೆ ಹುಸಿ ಮಾಡಿದೆ. ಕೃಷಿ ಕ್ಷೇತ್ರಕ್ಕೆ ನಿರ್ಲಕ್ಷಿಸಲಾಗಿದೆ ಅಲ್ಲದೆ, ಸಣ್ಣ ಮತ್ತು ಮಧ್ಯಮ ರೈತರನ್ನು ಕೂಡಾ ಕಡೆಗಣಿಸಲಾಗಿದೆ. ನರೇಗಾದ ಅನುದಾನವನ್ನು ಸಂಪೂರ್ಣ ಕಡಿತ ಮಾಡಿ ಗ್ರಾಮೀಣ ಭಾಗದ ಜನರನ್ನು ನಿರುದ್ಯೋಗಿಗಳಾಗಿ ಮಾಡಲಾಗಿದೆ. ಅಡಿಕೆ ಇತ್ಯಾದಿ ಬೆಳೆಗಳಿಗೆ ನಿರ್ದಿಷ್ಠ ಯೋಜನೆಗಳ ಬಗ್ಗೆ ತಿಳಿಸಿಲ್ಲ. ಅಮೃತಕಾಲ ನಿರೀಕ್ಷೆ ವಿಷಕಾಲ ಆಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.