ಕೇರಳದ ಕಾರಾಗೃಹದಿಂದ ತಪ್ಪಿಸಿಕೊಂಡ ಕೊಲೆ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ ಬಂಧನ

Spread the love

ಕೇರಳದ ಕಾರಾಗೃಹದಿಂದ ತಪ್ಪಿಸಿಕೊಂಡ ಕೊಲೆ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ ಬಂಧನ

ಉಡುಪಿ: ಕೇರಳದ ಕೊಲೆ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗಿ ಕಾರಾಗೃಹದಿಂದ ತಪ್ಪಿಸಿಕೊಂಡ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ತಿರುವನಂತಪುರದ ರಾಜೇಶ (39) ಎಂದು ಗುರುತಿಸಲಾಗಿದೆ.

ಕೇರಳ ರಾಜ್ಯದ ತಿರುವಂತಪುರಂ ಗ್ರಾಮಾಂತರ ಜಿಲ್ಲೆಯ ವಾಟಪುರ ಪೊಲೀಸ್ ಠಾಣೆಯಲಿ ಕೊಲೆ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ ರಾಜೇಶ (39) ಬಂದಿತನಾಗಿದ್ದು, ಸದ್ರಿ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ, ನಡೆದಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿರುತ್ತಾರೆ. ಆರೋಪಿಯು ತಿರುವಂತಪುರಂ ಕೇಂದ್ರ ಕಾರಾಗೃಹದಲ್ಲಿ ಇದ್ದು ನಂತರ ನೆಟಕತಾರಿ ಬದಲು ಜೈಲ್ ಗೆ ವರ್ಗಾಯಿಸಿದ್ದು, ದಿನಾಂಕ 23/12/2020 ರಂದು ನೆಟ್ಟು ಕತಾರಿ ಬಯಲು ಜೈಲ್ ನಿಂದ ಪರಾರಿಯಾಗಿರುತ್ತಾನೆ ಈ ಬಗೆ, ನೇಯಾರ್ ಡಾಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ರಾಜೇಶ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದನು.

ಆರೋಪಿ 2012 ರಲ್ಲಿ,, ಕೇರಳ ರಾಜ್ಯದ ಅಪ್ರಾಪ್ತಿಯ ಕೊಲೆ ಹಾಗೂ ಅತ್ಯಾಚಾರದ ಅತೀ ಪ್ರಮುಖ ಪ್ರಕರಣದ ಆರೋಪಿತನಾಗಿದ್ದು, ನ್ಯಾಯಾಲಯವು ತರಿತ ಗತಿಯ ವಿಚಾರಣೆ ನಡೆಸಿ 2013ರಲ್ಲಿ ಗಲ್ಲು ಶಿಕ್ಷೆ ವಿಧಿಸಿದ್ದು, ನಂತರ ಜೀವಾವಧಿ ಶಿಕ್ಷೆಯಾಗಿ ಮಾರ್ಪಾಡು ಆಗಿರುತ್ತದೆ, ಸದ್ಯ ಆರೋಪಿ ಉಡುಪಿಯಲ್ಲಿ ವಾಸವಾಗಿರುವ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಕ್ಷಯ್‌ ಏಮ್ ಹೆಚ್, ಐ.ಪಿ.ಎಸ್, ಮಾರ್ಗದರ್ಶನ ದಂತೆ, ಅನಂತ ಪದ್ಮನಾಭ, ಸಿಪಿಐ ಬ್ರಹ್ಮಾವರರವರ ನೇತೃತ್ವದ ತಂಡ ಸದ್ರಿ ಪ್ರಕರಣದ ಆರೋಪಿಯನ್ನು ಕಬ್ಬಿನ ಹಿತು ನೈಲಾಡಿ ಬಿಲಾಡಿ ಗ್ರಾಮ ಬ್ರಹ್ಮಾವರ ತಾಲೂಕು ಎಂಬ ವಶಕ್ಕೆ ಪಡೆದು ಕೇರಳ ಪೊಲೀಸ್ ರಿಗೆ ಮಾಹಿತಿ ನೀಡಲಾಗಿರುತ್ತದೆ. ಕೇರಳ ಪೊಲೀಸರು ಈ ದಿನ ಆರೋಪಿ ರಾಜೇಶನನ್ನು ವಶಕ್ಕೆ ಪಡೆದು ಕುಂದಾಪುರ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ನ್ಯಾಯಾಲಯದ ಆದೇಶ ಪಡೆದು ಕೇರಳಕ್ಕೆ ಕರೆದುಕೊಂಡು ಹೋಗಿರುತ್ತಾರೆ.

ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಅಕ್ಷಯ ಎಮ್.ಹೆಚ್, ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್ ಟಿ ಸಿದ್ಧಲಿಂಗಪ್ಪ ರವರ ಮಾರ್ಗದರ್ಶನದಂತೆ, ಸುಧಾಕರ ಎಸ್ ನಾಯ, ಪೊಲೀಸ್ ಉಪಾಧೀಕ್ಷಕರು, ಉಡುಪಿ ವಿಭಾಗ, ರವರ ನಿರ್ದೇಶನದಂತೆ ಕಾರ್ಯಾಚರಣೆಯಲ್ಲಿ ಅನಂತ ಪದ್ಮನಾಭ, ಸಿ.ಪಿ.ಐ ಬ್ರಹ್ಮಾವರ, ಕೋಟ ಠಾಣೆಯ ಪಿ.ಎಸ್.ಐ ಮಧು ಬಿ.ಇ, ಕೋಟ ಠಾಣೆಯ ತನಿಖಾ ವಿಭಾಗದ ಪಿ.ಎಸ್.ಐ ಪುಷಾ, ಪ್ರೊ. ಪಿ.ಎಸ್.ಐ, ನೂತನ್ ಡಿ. ಎ‌.ಎಸ್.ಐ, ಜೊಶ್, ಕೋಟ ಪೊಲೀಸ್ ಠಾಣಾ ಎ.ಎಸ್‌.ಐ, ರವಿ ಕುಮಾರ್, ಸಿಬ್ಬಂದಿಯವರಾದ ರಾಘವೇಂದ್ರ ಪ್ರಸನ್ನ, ವಿಜಯೇಂದ್ರ ಮಂಜುನಾಥ ಅಸಂಗಿ, ವಿಠಲ, ಉಳುವಪ್ಪ ಹಾಗೂ ಬ್ರಹ್ಮಾವರ ವೃತ್ರ ಕಛೇರಿಯ ರವಿ, ಕೃಷ್ಣ ಶೇಖರ ಹಾಗೂ ಹೋಮ್ ಗಾರ್ಡ್ ವಿಜಯ ರವರುಗಳು ಪ್ರಕರಣವನ್ನು ಭೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಪ್ರಕರಣವನ್ನು ಭೇದಿಸಿರುವುದಕ್ಕೆ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಅಕ್ಷಯ ಮಚೀಂದ್ರ ಐಪಿಎಸ್ ರವರು ತಂಡವನ್ನು ಅಭಿನಂದಿಸಿರುತ್ತಾರೆ.


Spread the love