ಕೇರಳ-ಕರ್ನಾಟಕ ಬಸ್ ಸಂಚಾರ ಬಂದ್ ಗೆ ಮನವಿ

Spread the love

ಕೇರಳ-ಕರ್ನಾಟಕ ಬಸ್ ಸಂಚಾರ ಬಂದ್ ಗೆ ಮನವಿ

ಚಾಮರಾಜನಗರ: ಕೊರೊನಾ ನಂತರ ಇದೀಗ ಡೆಲ್ಟಾ ಪ್ಲಸ್ ವೈರಸ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಚಾಮರಾಜಗರ ಜಿಲ್ಲೆಯ ಗುಂಡ್ಲುಪೇಟೆಗೆ ಆರಂಭವಾಗಿರುವ ಅಂತರಾಜ್ಯ ಬಸ್ ಸಂಚಾರವನ್ನು ಸ್ವಲ್ಪ ದಿನಗಳವರೆಗೆ ಸ್ಥಗಿತಗೊಳಿಸುವಂತೆ ಸರ್ಕಾರಕ್ಕೆ ವಿನಂತಿಸಿ ಗಡಿನಾಡು ರಕ್ಷಣಾ ಸಮಿತಿ ಸದಸ್ಯರು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯು ಕೇರಳ ಮತ್ತು ತಮಿಳುನಾಡು ಎರಡು ಅಂತರಾಜ್ಯ ಗಡಿಗಳನ್ನು ಒಳಗೊಂಡಿದ್ದು ಇದೀಗ ಕೊರೊನಾ ಎರಡನೇ ಅಲೆ ಬಳಿಕ ಕೇರಳದಲ್ಲಿ ಡೆಲ್ಟಾ ಪ್ಲಸ್ ಮತ್ತು ಜೀಕಾ ವೈರಸ್ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ. ಆದರೆ ಲಾಕ್ ಡೌನ್ ತೆರವಾದ ಬಳಿಕ ಪಕ್ಕದ ಕೇರಳ ರಾಜ್ಯಕ್ಕೆ ಸಾರಿಗೆ ಸಂಚಾರ ಆರಂಭವಾಗಿರುವುದರಿಂದ ಕಳವಳ ವ್ಯಕ್ತಪಡಿಸಿರುವ ಗಡಿನಾಡು ರಕ್ಷಣಾ ಸಮಿತಿ ಸದಸ್ಯರು ಗಡಿಭಾಗದ ಜನರು ಕರೋನಾ ಎರಡನೇ ಅಲೆಯಿಂದ ಸಾಕಷ್ಟು ಬಾಧಿಸಲ್ಪಟ್ಟಿದ್ದು ಈಗಷ್ಟೇ ಚೇತರಿಕೆ ಕಂಡುಕೊಳ್ಳುತ್ತಿದ್ದಾರೆ ಇಂತಹ ಸಂಧರ್ಭದಲ್ಲಿ ಪಕ್ಕದ ಕೇರಳ ರಾಜ್ಯದಲ್ಲಿ ಡೆಲ್ಟಾ ಮತ್ತು ಜೀಕಾ ವೈರಸ್ ಕಾಣಿಸಿಕೊಂಡಿರುವುದರಿಂದ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾಡಳಿತ ಪ್ರಸ್ತುತ ಸ್ಥಿತಿ ಕುರಿತು ಸರಕಾರದ ಗಮನಕ್ಕೆ ತರಬೇಕು, ಸ್ವಲ್ಪ ದಿನಗಳ ತನಕ ಕೇರಳ ರಾಜ್ಯದ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಬಾರದು ಎಂದು ವಿನಂತಿಸಿ ಸರ್ಕಾರಕ್ಕೆ ತಹಸೀಲ್ದಾರ್ ಅವರ ಮೂಲಕ ಮನವಿ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಗಡಿನಾಡು ರಕ್ಷಣಾ ಸಮಿತಿ ಚಾ.ನಗರ ಜಿಲ್ಲಾಧ್ಯಕ್ಷ ಮಹಮದ್ ರಪೀಕ್, ಕಾರ್ಯದರ್ಶಿ ಅಲೀಂ ಪಾಷ, ಕಾರ್ಯಾಧ್ಯಕ್ಷ ಅಬ್ದುಲ್ ರಶೀದ್, ಉಪಾಧ್ಯಕ್ಷ ಯೋಗೀಶ್, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಮುನೀರ್ ಪಾಷ, ಅಡ್ಡು ಇತರರು ಹಾಜರಿದ್ದರು.


Spread the love