ಕೇರಳ ರಸ್ತೆ ಸಾರಿಗೆ ಸಂಸ್ಥೆ ಬಸ್ಸು, ಸ್ಕೂಟರ್‌ ನಡುವೆ ಅಫಘಾತ – ತಂದೆ, ಮಗಳು ದಾರುಣ ಸಾವು

Spread the love

ಕೇರಳ ರಸ್ತೆ ಸಾರಿಗೆ ಸಂಸ್ಥೆ ಬಸ್ಸು, ಸ್ಕೂಟರ್‌ ನಡುವೆ ಅಫಘಾತ – ತಂದೆ, ಮಗಳು ದಾರುಣ ಸಾವು

ಉಡುಪಿ: ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ಮತ್ತು ಸ್ಕೂಟರ್‌ ನಡುವೆ ಸಂಭವಿಸಿದ ರಸ್ತೆ ಅಫಘಾತದಲ್ಲಿ ತಂದೆ ಮತ್ತು ಮಗಳು ದಾರುಣವಾಗಿ ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ಸಂತೆಕಟ್ಟೆ ಜಂಕ್ಷನ್‌ ನಲ್ಲಿ ಸಂಭವಿಸಿದೆ.

ಮೃತರನ್ನು ಗರಡಿಮಜಲು ನಿವಾಸಿಗಳಾದ ಗಣೇಶ್‌ ಪೈ (58) ಮತ್ತ ಅವರ ಮಗಳು ಗಾಯತ್ರಿ ಪೈ ಎಂದು ಗುರುತಿಸಲಾಗಿದೆ. ಗಣೇಶ್‌ ಪೈ ಅವರು ಕರಾವಳಿ ಕಾವಲು ಪಡೆಯಲ್ಲಿ ಎ ಎಸೈ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಪ್ರಾಥಮಿಕ ಮಾಹಿತಿಗಳ ಪ್ರಕಾರ ಗಣೇಶ್‌ ಪೈ ಅವರು ಹುಬ್ಬಳಿಯಿಂದ ಆಗಮಿಸಿದ್ದ ತನ್ನ ಮಗಳು ಗಾಯತ್ರಿ ಪೈ ಅವರನ್ನು ಕರೆದುಕೊಂಡ ಹೋಗಲು ಸ್ಕೂಟರ್‌ ನಲ್ಲಿ ಬಂದಿದ್ದು, ಆಕೆಯನ್ನು ಕರೆದುಕೊಂಡು ಸಂತೆಕಟ್ಟೆ ಜಂಕ್ಷನ್‌ ಬಳಿ ರಸ್ತೆ ದಾಟುತ್ತಿದ್ದಾಗ ಕೇರಳದಿಂದ ಕೊಲ್ಲೂರು ಕಡೆಗೆ ಸಾಗುತ್ತಿದ್ದ ಬಸ್ಸು ಡಿಕ್ಕಿಹೊಡೆದಿದ್ದು ಮಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಗಣೇಶ್‌ ಪೈ ಅವರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಕೊನೆಯುಸಿರು ಎಳೆದಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಉಡುಪಿ ಸಂಚಾರಿ ಪೊಲೀಸರು ಭೇಟಿ ನೀಡಿದ್ದಾರೆ.


Spread the love