ಕೇರಳ ರಾಜ್ಯದಿಂದ  ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರಿಗೆ ರಾಜ್ಯಸರಕಾರದಿಂದ ವಿಶೇಷ ಮಾರ್ಗಸೂಚಿ ಪ್ರಕಟ

Spread the love

ಕೇರಳ ರಾಜ್ಯದಿಂದ  ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರಿಗೆ ರಾಜ್ಯಸರಕಾರದಿಂದ ವಿಶೇಷ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಕೇರಳ ರಾಜ್ಯದಿಂದ  ಕರ್ನಾಟಕಕ್ಕೆ ಆಗಮಿಸುವ ವ್ಯಕ್ತಿಗಳಿಗೆ ವಿಶೇಷ ಮಾರ್ಗಸೂಚಿಯನ್ನು ಪ್ರಕಟಿಸಿ ರಾಜ್ಯ ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.

ಮಾರ್ಗಸೂಚಿ ವಿವರ

(1) ವಿಮಾನ, ರೈಲು, ಬಸ್ಸು, ಟ್ಯಾಕ್ಸಿ ಸ್ವಂತ ವಾಹನ, ಇತ್ಯಾದಿಗಳ ಮೂಲಕ ಕರ್ನಾಟಕಕ್ಕೆಆಗಮಿಸುವ ಪುಯಾಣಿಕರು 72 ಗಂಟೆಗಳ ಒಳಗೆ ಮಾಡಿಸಿರುವ ಆರ್.ಟಿ-ಪಿ.ಸಿ.ಆರ್ ನಗೆಟಿವ್ ಪರೀಕ್ಷೆಯ ವರದಿಯನ್ನು ಹೊಂದಿರತಕ್ಕದ್ದು, ಇದು ಕೇರಳದಿಂದ ಕರ್ನಾಟಕಕ್ಕೆ ಆಗಮಿಸುವ ಎಲ್ಲಾ ವಿಮಾನಯಾನಗಳಿಗೂ ಅನ್ವಯವಾಗುತ್ತದೆ.

(ii) ವಿಮಾನಯಾನ ಸಂಸ್ಥೆಗಳು 72 ಗಂಟೆಗಳ ಒಳಗೆ ಮಾಡಿಸಿರುವ ಆರ್.ಟಿಪಿಸಿಆರ್ ನೆಗೆಟಿವ್ ಪರೀಕ್ಷೆಯ ವರದಿಯನ್ನು ಹೊಂದಿರುವ ಪುಯಾಣಿಕರಿಗೆ ಮಾತ್ರವೇ ಬೋರ್ಡಿಂಗ್ ಪಾಸ್

(iii) ರೈಲಿನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು 72 ಗಂಟೆಗಳ ಒಳಗೆ ಮಾಡಿಸಿರುವ ಆರ್.ಟಿ-ಪಿಸಿಆರ್ ನೆಗೆಟಿವ್ ಪರೀಕ್ಷೆಯ ವರದಿ ಹೊಂದಿರುವುದನ್ನು ಖಚಿತಪಡಿಸಿಕೊಳ್ಳುವುದು ರೈಲ್ವೆ ಪ್ರಾಧಿಕಾರದ ಜವಾಬ್ಯಾರಿಯಾಗಿರುತ್ತದೆ.

(iv) ಬಸ್ಸುಗಳ ಮೂಲಕ ಪ್ರಯಾಣಿಸುವವರು 72 ಗಂಟೆಗಳ ಒಳಗೆ ಮಾಡಿಸಿರುವ ಆರ್.ಟಿ ಪಿಸಿಆರ್ ನೆಗೆಟಿವ್‌ ಪರೀಕ್ಷಾ ವರದಿ ಹೊಂದಿರುವುದನ್ನು ಆಯಾ ಬಸ್‌ನ ನಿರ್ವಾಹಕರು (bus conductor) ಖಚಿತಪಡಿಸಿಕೊಳ್ಳತಕ್ಕದ್ದು.

(v) ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಮೂಲಕ ರಾಜ್ಯಕ್ಕೆ ಪ್ರವೇಶಿಸುವ ವಾಹನಗಳಿಗೆ (ಚಾಲಕರು ಪ್ರಯಾಣಿಕರು, ಸಹಾಯಕರು/ನರ್) ಮೇಲೆ ತಿಳಿಸಿರುವ ನಿಯಮಗಳ ಅನುಪಾಲನೆಗೆ ಚೆಕ್ ಪೋಸ್ಟ್ ಗಳಲ್ಲಿ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಿ, ಸೂಕ್ತ ವ್ಯವಸ್ಥೆಯನ್ನು ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕಲ್ಪಿಸತಕ್ಕದ್ದು.

ಕೇರಳದಿಂದ ಕರ್ನಾಟಕಕ್ಕೆ, ವಿದ್ಯಾಭ್ಯಾಸ, ಕಚೇರಿ ಕೆಲಸ, ವ್ಯಾಪಾರ-ವ್ಯವಹಾರ ಸೇರಿದಂತೆ ಇತರೆ ಕಾರಣಗಳಿಗೆ ದಿನನಿತ್ಯ ಭೇಟಿ ನೀಡುವ ವಿದ್ಯಾರ್ಥಿಗಳು/ಸಾರ್ವಜನಿಕರು ಪ್ರತಿ 15 ದಿನಗಳಿಗೊಮ್ಮೆ ಆರ್.ಟಿ-ಪಿ.ಸಿ.ಆರ್ ಪರೀಕ್ಷೆ ಮಾಡಿಸಿಕೊಂಡು, ಕೋವಿಡ್-19 ನೆಗೆಟಿವ್ ವರದಿಯನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ.

ಈ ಕೆಳಕಂಡ ಪ್ರಕರಣಗಳಿಗೆ ಆರ್.ಟಿ-ಪಿಸಿಆರ್ ನೆಗೆಟಿವ್ ಟೆಸ್ಟ್ ವರದಿ ಹೊಂದುವುದರಿಂದ ವಿನಾಯಿತಿ ನೀಡಲಾಗಿದೆ.

(1) ಕೋವಿಡ್-19 ಲಸಿಕೆಯ ಎರಡೂ ಡೋಸ್ ಪಡೆದಿರುವ ಕುರಿತು ಪ್ರಮಾಣ ಪತ್ರವನ್ನು ಹೊಂದಿರುವವರು.

(ii) ಸಾಂವಿಧಾನಿಕ ಕಾರ್ಯಕಾರಿಗಳು (Constitutional functionaries) ಮತ್ತು ವೈದ್ಯಕೀಯ ಸಿಬ್ಬಂದಿಗಳು.

(ii) ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು

(iv) ತುರ್ತು ಸಂದರ್ಭಗಳಲ್ಲಿ (ಕುಟುಂಬದಲ್ಲಿ ಮರಣ ಸಂಭವಿಸಿದ ಪಕ್ಷದಲ್ಲಿ, ವೈದ್ಯಕೀಯ ಚಿಕಿತ್ಸೆ ಇತ್ಯಾದಿ) ಕೇರಳ ರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರ ಸ್ಕಾಚ್ ಮಾದರಿಗಳನ್ನು ಪರೀಕ್ಷೆಗಾಗಿ ಕರ್ನಾಟಕದಲ್ಲಿಯೇ ಸಂಗ್ರಹಿಸತಕ್ಕದ್ದು. ಸದರಿ ಪ್ರಯಾಣಿಕರ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ ಇತ್ಯಾದಿ ಪೂರ್ಣ ವಿವರಗಳನ್ನು ಗುರುತಿನ ಚೀಟಿಯ ಆಧಾರದ ಅನ್ವಯ ಪಡೆಯತಕ್ಕದ್ದು ಮತ್ತು ಆರ್.ಟಿ-ಪಿಸಿಆರ್ ಪರೀಕ್ಷೆಯ ವರದಿಯ ಆಧಾರದ ಮೇಲೆ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಶಿಷ್ಟಾಚಾರದಂತೆ ಕ್ರಮ ಕೈಗೊಳ್ಳತಕ್ಕದ್ದು

ಈ ಕ್ರಮಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯು, ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ, 2020, ವಿಪತ್ತು ನಿರ್ವಹಣಾ ಕಾಯ್ದೆ, 2005 ಮತ್ತು ಭಾರತ ದಂಡ ಸಂಹಿತೆಯಡಿ ಅನ್ವಯವಾಗಬಹುದಾದ ಕಾನೂನು ಕ್ರಮಗಳು ಮತ್ತು ಇತರ ಕಾನೂನು ಉಪಬಂಧಗಳಡಿಯಲ್ಲಿನ ಕಾನೂನು ಕ್ರಮಗಳಿಗೆ ಒಳಪಡುತ್ತಾರೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.


Spread the love