ಕೇಸರಿ ಶಾಲು- ಹಿಜಾಬ್‌ ವಿವಾದ: ಪಿಯುಸಿ, ಪದವಿ ಭೌತಿಕ ತರಗತಿ ತಕ್ಷಣ ನಿಲ್ಲಿಸಿ- ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

Spread the love

ಕೇಸರಿ ಶಾಲು- ಹಿಜಾಬ್‌ ವಿವಾದ: ಪಿಯುಸಿ, ಪದವಿ ಭೌತಿಕ ತರಗತಿ ತಕ್ಷಣ ನಿಲ್ಲಿಸಿ- ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ
 

ಬೆಂಗಳೂರು: ರಾಜ್ಯದ ಎಲ್ಲ ಜಿಲ್ಲೆಗಳ ಕಾಲೇಜುಗಳಿಗೆ ಕೇಸರಿ ಶಾಲು- ಹಿಜಾಬ್‌ ವಿವಾದ ಹಬ್ಬುತ್ತಿರುವುದರಿಂದ ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕಾದ ಅಗತ್ಯವಿದೆ. ಹೀಗಾಗಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪರವಿಯ ಭೌತಿಕ ತರಗತಿಗಳನ್ನು ಸರ್ಕಾರ ತಕ್ಷಣ ನಿಲ್ಲಿಸಿ, ಆನ್‌ಲೈನ್‌ ತರಗತಿ ಆರಂಭಿಸಿಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಗೋವಾದಲ್ಲಿ ಚುನಾವಣಾ ಪ್ರಚಾರದ ಮಧ್ಯೆ ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ಪರೀಕ್ಷೆ ಹತ್ತಿರ ಆಗುತ್ತಿರುವುದರಿಂದ ಕಾಲೇಜುಗಳನ್ನು ಮುಚ್ಚಿದರೆ ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ. ಹೀಗಾಗಿ, ಸದ್ಯ ಆನ್‌ಲೈನ್‌ ತರಗತಿ ಮಾಡಬೇಕು. ಪರಿಸ್ಥಿತಿ ತಿಳಿಯಾದ ಬಳಿಕ ಮತ್ತೆ ಆರಂಭಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕೇಸರಿ ಶಾಲು- ಹಿಜಾಬ್‌ ವಿವಾದ ಹುಟ್ಟು ಹಾಕಿದವರು ಸಂಘ ಪರಿವಾರದವರು ಎಂದು ಆರೋಪಿಸಿದ ಸಿದ್ದರಾಮಯ್ಯ, ‘ವಿದ್ಯಾರ್ಥಿಗಳ ಮನಸ್ಸಿನಲ್ಲಿ ಧರ್ಮ, ಜಾತಿ ವಿಚಾರಗಳು ಸುಳಿಯಬಾರದು. ಈ ವಿವಾದ ಇನ್ನಷ್ಟು ಬೆಳೆಯಬಾರದು, ಬೆಳೆದರೆ ಕಾನೂನು ಸುವ್ಯವಸ್ಥೆಗೂ ಸಮಸ್ಯೆ ಆಗಲಿದೆ. ಹೀಗಾಗಿ, ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.


Spread the love