ಕೇಸ್ ಹಿಂಪಡೆಯುವಂತೆ ವಕೀಲ ಅಬ್ದುಲ್ ರೆಹಮಾನ್ ರವರಿಗೆ ಕೊಲೆ ಬೆದರಿಕೆ – ಖಾಸಗಿ ದೂರು ದಾಖಲು

Spread the love

ಕೇಸ್ ಹಿಂಪಡೆಯುವಂತೆ ವಕೀಲ ಅಬ್ದುಲ್ ರೆಹಮಾನ್ ರವರಿಗೆ ಕೊಲೆ ಬೆದರಿಕೆ – ಖಾಸಗಿ ದೂರು ದಾಖಲು

ಉಡುಪಿ: ನಗರದ ವಕೀಲ ಅಬ್ದುಲ್ ರೆಹಮಾನ್ ಎಂಬವರಿಗೆ ಕೇಸು ಹಿಂಪಡೆಯುವಂತೆ ಕೊಲೆ ಬೆದರಿಕೆ ಹಾಕಿದ ಕುರಿತು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ.

ಹಿಂದಿನ ಪ್ರಕರಣ ಸಂಬಂಧ ಈ ಹಿಂದೆ ಜೋಯಿಸನಾ ಡಿಸೋಜಾ ಹಾಗೂ ಇತರರು ರಾತ್ರಿ ಸಮಯ ಮನೆಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ಮಾಡಲು ಯತ್ನಿಸಿದ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿ ಜುಲೈ 17 ರಂದು ರಾತ್ರಿ ಹೊತ್ತಲ್ಲಿ ಮನೆಗೆ ಅಕ್ರಮ ಪ್ರವೇಶ ಮಾಡಿ ವಕೀಲರ ತಾಯಿಗೆ ನಿನ್ನ ಮಗ ಅಬ್ದುಲ್ ರೆಹಮಾನ್ ನಮ್ಮ ಮೇಲೆ ಹಾಕಿಸಿದ ಪ್ರಕರಣವನ್ನು ಹಿಂದಕ್ಕೆ ಪಡೆಯಲು ಹೇಳು ಇಲ್ಲದಿದ್ದರೆ ನಿಮ್ಮನ್ನು ಮುಗಿಸುವುದಾಗಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದು ಹಾಗೂ ಅನೇಕ ಬಾರಿ ವಕೀಲರಿಗೆ ಹಾಗೂ ಆತನ‌ ಕುಟುಂಬದವರಿಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆಂದು ವಕೀಲ ಅಬ್ದುಲ್ ರೆಹಮಾನ್ ನೀಡಿದ ಖಾಸಗಿ ದೂರಿನ ಮೇಲೆ ಜೊಯಿಸನಾ ಡಿಸೋಜಾ, ಜಾನ್ ಗ್ರಾಸ್ಟ ಹಾಗೂ ಇತರ ಮೂರು ಮಂದಿ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.

(ದೂರುದಾರರು ನೀಡಿದ ಮಾಹಿತಯನ್ನು ಆದರಿಸಿ ಯಥಾವತ್ತಾಗಿ ಪ್ರಕಟಿಸಲಾಗಿದೆ. ಈ ಕುರಿತು ಯಾವುದೇ ರೀತಿಯ ತಕರಾರುಗಳಿಗೆ ದೂರುದಾರರೇ ಜವಾಬ್ದಾರರಾಗಿರುತ್ತಾರೆ ಹೊರತು Mangalorean.com ಯಾವುದೇ ರೀತಿಯ ಜವಬ್ದಾರರಾಗಿರುವುದಿಲ್ಲ – ಸಂಪಾದಕರು)


Spread the love