ಕೈದಿಗಳ ಧ್ಯಾನಮಂದಿರ ಮತ್ತೆ ಆರಂಭ

Spread the love

ಕೈದಿಗಳ ಧ್ಯಾನಮಂದಿರ ಮತ್ತೆ ಆರಂಭ

ಮೈಸೂರು: ಕೊರೋನ ಕಾರಣದಿಂದಾಗಿ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ಧ್ಯಾನ ಮಂದಿರವನ್ನು ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ನವೀಕರಿಸಿ ಕೈದಿಗಳ ಸೇವೆಗಾಗಿ ಮತ್ತೆ ಆರಂಭಿಸಲಾಗಿದೆ.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಎಲ್. ನಾಗೇಂದ್ರ ಅವರು, ಬ್ರಹ್ಮಕುಮಾರಿಯರು ಮಾಡುತ್ತಿರುವ ಅತಿ ವಿಶಿಷ್ಟ ಸೇವೆ ಇದು. ಈ ಸೇವೆಯನ್ನು ಪಡೆದ ಕೈದಿಗಳು ತಾವು ಮಾಡಿರುವ ತಪ್ಪುಗಳಿಗೆ ಪಶ್ಚತ್ತಾಪಪಟ್ಟು ಯಾವುದೇ ಪ್ರತೀಕಾರದ ಮನೋಭಾವನೆ ಇಲ್ಲದೆ ಸನ್ನಡತೆಯ ಆಧಾರದಿಂದ ಬೇಗ ತಮ್ಮ ಮನೆಗಳಿಗೆ ಹಿಂದಿರುಗುವಂತಾಗಬೇಕು ಎಂದು ಆಶಿಸಿದರು.

ಕಾರಾಗೃಹದ ಮುಖ್ಯ ಅಧೀಕ್ಷಕಿ ದಿವ್ಯಶ್ರೀ ಮಾತನಾಡಿ ತಾವು ವೈಯಕ್ತಿಕವಾಗಿ ಈ ಸೇವೆಯಿಂದ ಪ್ರಭಾವಿತರಾಗಿದ್ದು ಅನೇಕ ಕೈದಿಗಳು ತಮ್ಮ ಜೀವನವನ್ನು ಪರಿವರ್ತಿಸಿಕೊಂಡು ನೆಮ್ಮದಿಯ ಬದುಕನ್ನು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಈಶ್ವರೀಯ ವಿಶ್ವ ವಿದ್ಯಾಲಯದ ನಿಸ್ಪೃಹ ಸೇವೆಗಾಗಿ ಅಭಿನಂದಿಸಿದರು.

ರಾಜಯೋಗಿನಿ ಬಿಕೆ ಲಕ್ಷ್ಮೀಜಿ 22 ವರ್ಷಗಳ ಹಿಂದೆ ಕಾರಾಗೃಹದಲ್ಲಿ ಸ್ಥಾಪಿಸಲಾದ ಧ್ಯಾನ ಮಂದಿರ ನಿರ್ಮಾಣಕ್ಕೆ ಸಹಕರಿಸಿದ ಲಯನ್ಸ್ ಕ್ಲಬ್ ಹಾಗೂ ವಿಕಸನ ಸಂಸ್ಥೆಯವರಿಗೆ ಅಭಿನಂದನೆಯನ್ನೂ ಸ್ಥಳಾವಕಾಶ ಮಾಡಿಕೊಟ್ಟಿರುವ ಕಾರಾಗೃಹ ಇಲಾಖೆಗೆ ಆಭಾರವನ್ನೂ ಮನ್ನಿಸಿದರು..

ಕಾರ್ಯಕ್ರಮದಲ್ಲಿ ಡಾ. ಸಂತೋಷ್, ರಂಗನಾಥ್, ವೀರಂ ಸಿಂಗ್, ಸತೀಶ್, ಆತ್ಮಾನಂದ್, ಮಣಿ, ಉಮೇಶ್, ಶಾರದಾಜಿ, ಗೌರಿ, ಜಗದೀಶ್ ಮತ್ತಿತರರು ಹಾಜರಿದ್ದರು.


Spread the love