
ಕೈ ನಾಯಕನ ಮಗ ಎನ್ ಐ ಎ ವಶಕ್ಕೆ! ಕಾಂಗ್ರೆಸ್ ನಿಲುವು ಸ್ಪಷ್ಟಪಡಿಸಲಿ- ಶಾಸಕ ರಘುಪತಿ ಭಟ್ ಆಗ್ರಹ
ಉಡುಪಿ: ಶಿವಮೊಗ್ಗ ಬಾಂಬ್ ಟ್ರಯಲ್ ಮತ್ತು ಕುಕ್ಕರ್ ಬ್ಲಾಸ್ಟ್ ಪ್ರಕರಣ ಸಂಬಂಧಿಸಿ ಮಂಗಳೂರಿನಲ್ಲಿ ಬ್ರಹ್ಮಾವರ ಮೂಲದ ವಿದ್ಯಾರ್ಥಿನಯನ್ನು ಎನ್ ಐ ಎ ಅಧಿಕಾರಿಗಳು ವಶಕ್ಕೆ ಪಡೆದಿದ್ದು ಆ ವಿದ್ಯಾರ್ಥಿಯ ತಂದೆ ತಾಜುದ್ದೀನ್ ಶೇಖ್ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದು ಕಾಂಗ್ರೆಸ್ ಪಕ್ಷದ ನಿಲುವು ಸ್ಪಷ್ಟ ಪಡಿಸಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳೀದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಎನ್ ಐ ಎ ಅಧಿಕಾರಿಗಳು ವಶಕ್ಕೆ ಪಡೆದಿರುವ ವಿದ್ಯಾರ್ಥಿ ರೆಹಾನ್ ಶೇಖ್ ತಂದೆ ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಹುದ್ದೆಯಲ್ಲಿದ್ದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿರುವ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಾಜಿ ಸಚಿವ ಯು ಟಿ ಖಾದರ್ ಜೊತೆ ತಾಝುದ್ದೀನ್ ಇರುವ ಫೋಟೊಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಈತನ ಬಗ್ಗೆ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ಭಟ್ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಪಕ್ಷ ಅವರಿಗೆ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಹುದ್ದೆಯಿಂದ ಬ್ಲಾಕ್ ಅಧ್ಯಕ್ಷ ಹುದ್ದೆ ನೀಡುವುದೇ ಎಂದು ಪ್ರಶ್ನಿಸಿದ್ದಾರೆ.
ಎನ್ ಐ ಎ ಧಾಳಿಯಿಂದಾಗಿ ಭಯೋತ್ಪಾದನೆ ಬಗ್ಗೆ ಕಾಂಗ್ರೆಸ್ ಪಕ್ಷದ ಮೃಧು ಧೋರಣೆ ಏನು ಎನ್ನುವುದು ಇಲ್ಲಿ ಸ್ಪಷ್ಟವಾಗುತ್ತಿದೆ. ಅಲ್ಲದೆ ಈ ಭಯೋತ್ಪಾದನೆಯ ಜಾಲ ಎಲ್ಲೆಲ್ಲಿ ಅಡಗಿದೆ ಎನ್ನುವುದು ಸಂಪೂರ್ಣವಾದ ತನಿಖೆ ನಡೆಯಬೇಕಾಗಿದೆ ಎಂದರು.
ಈ ಹುಡುಗನ ತಾಯಿ ರೇಣು ರೀನಾ ಸೋನ್ಸ್ ತೆಂಕನಿಡಿಯೂರು ಸರಕಾರಿ ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿದ್ದು ಉಪನ್ಯಾಸಕಿಯಾಗಿದ್ದು ಅವರ ಚಟುವಟಿಕಗಳ ಬಗ್ಗೆ ಸಂಶಯವಿದ್ದು ಈಗಾಗಲೇ ಅವರ ವಿರುದ್ದ ತನಿಖೆ ನಡೆಸುವಂತೆ ಶಿಕ್ಷಣ ಸಚಿವರಿಗೆ ದೂರು ನೀಡಲಾಗಿದೆ ಎಂದು ಅವರು ಹೇಳಿದರು.