ಕೊಂಕಣಿ ಲೇಖಕ   ಕೆವಿನ್ ಡಿ’ಮೆಲ್ಲೋ ಕಾರ್ಕಳ ಆತ್ಮಹತ್ಯೆ

Spread the love

ಕೊಂಕಣಿ ಲೇಖಕ   ಕೆವಿನ್ ಡಿ’ಮೆಲ್ಲೋ ಕಾರ್ಕಳ ಆತ್ಮಹತ್ಯೆ

ಕಾರ್ಕಳ: ಹೆಸರಾಂತ ಕೊಂಕಣಿ ಲೇಖಕ ಕಾರ್ಕಳ ನಿವಾಸಿ ಕೆವಿನ್ ಡಿ’ಮೆಲ್ಲೋ (53) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.

ಅವರು ಕಾರ್ಕಳದ ಕಾರ್ಕಳದ ರಾಮಸಮುದ್ರ ಬಳಿಯ ತಮ್ಮ ಮನೆಯ ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ಕೇವಿನ್‌ ಡಿ ಮೆಲ್ಲೋ ರವರು ಕಾರ್ಕಳ ತಾಲೂಕು ಕಸಬಾ ಗಾಮದ ರಾಮಸಮುದ್ರ ಬಳಿ ಸುಮಾರು 9 ವರ್ಷದ ಹಿಂದೆ ಹೊಸದಾಗಿ ಮನೆ ಕಟ್ಟಿದ್ದು ಅಲ್ಲಿಗೆ ಹೋಗಿಬರುತ್ತಿದ್ದರು. ಮಗಳು ಸಿಮೋನಾ ರವರಿಗೆ ಕೆಲವು ಸಮಯದಿಂದ ಆರೋಗ್ಯ ಸಮಸ್ಯೆ ಇದ್ದು ಹಾಗೂ ಪತ್ನಿಗೂ ಮಾನಸಿಕ ಖಿನ್ನತೆ ಇದ್ದು ಗುರುವಾರ ಬೆಳಗ್ಗೆ 08:30 ಗಂಟೆಯಿಂದ 12:00 ಗಂಟೆಯ ಮದ್ಯಾವಧಿಯಲ್ಲಿ ಕಾರ್ಕಳ ತಾಲೂಕು ಕಸಬಾ ಗಾಮದ ರಾಮಸಮುದ್ರ ಬಳಿ ಇರುವ ತನ್ನ ಮನೆಯ ಕೋಣೆಯ ಒಳಗೆ ತೊಟ್ಟಿಲು ಹುಕ್ಕು ಕೊಂಡಿಗೆ ನೈಲಾನ್‌ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಕೆವಿನ್ ಡಿಮೆಲ್ಲೊ ಹಲವಾರು ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿದ್ದು, ಕಥೆ ಕಾದಂಬರಿಗಳನ್ನು ರಚಿಸಿದ್ದಾರೆ.

ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love

Leave a Reply

Please enter your comment!
Please enter your name here